-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
Hindu Leader arrested in cow slaughter case | ಗೋಹತ್ಯೆಯಲ್ಲಿ ಹಿಂದೂ ಮುಖಂಡನ ಪಾಲು?: ಈ ದಂಧೆಗೆ ಕಾರ್ಕಳದಲ್ಲಿ ಈಗನೇ ಕಿಂಗ್ ಪಿನ್!

Hindu Leader arrested in cow slaughter case | ಗೋಹತ್ಯೆಯಲ್ಲಿ ಹಿಂದೂ ಮುಖಂಡನ ಪಾಲು?: ಈ ದಂಧೆಗೆ ಕಾರ್ಕಳದಲ್ಲಿ ಈಗನೇ ಕಿಂಗ್ ಪಿನ್!







ಬಜರಂಗ ದಳದ ಮುಖಂಡ ಎಂದು ಹೇಳಿಕೊಳ್ಳುತ್ತಿದ್ದ ಸಾಮಾಜಿಕ ಮುಖಂಡನೊಬ್ಬ ದನ ಕಳವು ಮತ್ತು ಗೋಹತ್ಯೆ, ಮಾಂಸ ಮಾರಾಟ ದಂಧೆಯಲ್ಲಿ ಶಾಮೀಲಾಗಿದ್ದ ಸ್ಫೋಟಕ ಮಾಹಿತಿ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಬಯಲಾಗಿದೆ.



ಘಟನೆ ನಡೆದದ್ದು ಹೀಗೆ...



ಕಾರ್ಕಳದ ಬಂಗಲೆಗುಡ್ಡೆ ಜಂಕ್ಷನ್ ಬಳಿಯ ರಸ್ತೆಯೊಂದರಲ್ಲಿ ಕೆಲ ದಿನಗಳ ಹಿಂದೆ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದಾಗ ಒಬ್ಬ ವ್ಯಕ್ತಿ ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ. ಅವನಿಗೆ ವಾಹನ ನಿಲ್ಲಿಸುವಂತೆ ಸೂಚಿಸಲಾಯಿತು. ಈ ಸಂದರ್ಭದಲ್ಲಿ ಆತ ಪೊಲೀಸರಿಂದ ಬಚಾವಾಗಲು ವಾಹನ ತೊರೆದು ಪರಾರಿಯಾಗಿದ್ದ. ಪೊಲೀಸರು ಈ ವಾಹನವನ್ನು ಪರಿಶೀಲಿಸಿದಾಗ ಅದರಲ್ಲಿ ದನದ ಮಾಂಸ ಪತ್ತೆಯಾಗಿತ್ತು.



ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿಯನ್ನು ಪತ್ತೆ ಹಚ್ಚಿ ಆತನನ್ನು ಬಂಧಿಸಲಾಯಿತು. ಆರೋಪಿಯನ್ನು ಸ್ಥಳೀಯ ಹುಡ್ಕೋ ಕಾಲನಿ ನಿವಾಸಿ ಮುಹಮ್ಮದ್ ಯಾಸೀನ್ ಎಂದು ಗುರುತಿಸಲಾಗಿತ್ತು.



ಪೊಲೀಸರರು ಆತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಈ ಕೃತ್ಯಗಳ ಹಿಂದೆ ಹಿಂದೂ ಸಂಘಟನೆಯ ಹೆಸರಲ್ಲಿ ಕಾರ್ಯಾಚರಿಸುತ್ತಿದ್ದ ಸಾಮಾಜಿಕ ಮುಖಂಡನ ನಿಜವಾದ ಮುಖವಾಡ ಅನಾವರಣಗೊಂಡಿತು.



ಆತನೇ ಈ ಅನಿಲ್ ಪ್ರಭು. ದನ ಕಳವು ಮಾಡಿ ಮಾಂಸ ಮಾಡಿ ಮಾರಾಟ ಮಾಡಲು ಈತನದ್ದೇ ಕೃಪಾಶ್ರಯ ಸಿಗುತ್ತಿತ್ತು. ರಸ್ತೆ ಬದಿಯ ಬಿಡಾಡಿ ದನಗಳನ್ನು ಕದ್ದುಸಾಗಿಸಲು ಈ ಅನಿಲ್ ಪ್ರಭು ಸಹಕಾರ ನೀಡುತ್ತಿದ್ದ. ಅದನ್ನು ಕಸಾಯಿ ಖಾನೆಗೆ ಸಾಗಿಸಿ ಮಾಂಸ ಮಾಡಿ ಮಾರಾಟ ಮಾಡಲು ಎಲ್ಲ ರಕ್ಷಣೆ ನೀಡುತ್ತಿದ್ದ. ಇದರಿಂದ ಬಂದ ಪಾಪದ ಹಣದಲ್ಲಿ ಅನಿಲ್ ಪ್ರಭು ಪಾಲು ಪಡೆಯುತ್ತಿದ್ದ.




ತನಿಖೆಯಲ್ಲಿ ವಿಚಾರ ಬಯಲಾಗುತ್ತಿದ್ದಂತೆಯೇ, ಕಾರ್ಕಳ ಪೊಲೀಸರು ಅನಿಲ್ ಪ್ರಭುವನ್ನು ಬಂಧಿಸಿ ಕೋಳ ತೊಡಿಸಿದ್ದಾರೆ. ಅನಿಲ್ ಪ್ರಬುವಿಗೂ ತಮ್ಮ ಸಂಘಟನೆಗೂ ಯಾವುದೇ ಸಂಬಂಧ ಇಲ್ಲ ಎಂದು ಕಾರ್ಕಳ ಭಜರಂಗದಳ ಘೋಷಿಸಿಕೊಂಡಿದೆ.

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article