-->
Terror Wall Writing- Accused arrested | ಉಗ್ರ ಬರಹದ ಕೈಗಳಿಗೆ ಬೇಡಿ ಹಾಕಿದ ಮಂಗಳೂರು ಪೊಲೀಸರು: ಇನ್ನಷ್ಟು ಆರೋಪಿಗಳ ಬಂಧನ ಸಾಧ್ಯತೆ

Terror Wall Writing- Accused arrested | ಉಗ್ರ ಬರಹದ ಕೈಗಳಿಗೆ ಬೇಡಿ ಹಾಕಿದ ಮಂಗಳೂರು ಪೊಲೀಸರು: ಇನ್ನಷ್ಟು ಆರೋಪಿಗಳ ಬಂಧನ ಸಾಧ್ಯತೆ

ಮಂಗಳೂರು, ಇಮುಂಗಾರು ವರದಿ:- ಮಂಗಳೂರು ನಗರದ ಹೃದಯಭಾಗದಲ್ಲಿ ಭಯೋತ್ಪಾದಕ ಸಂಘಟನೆಗಳನ್ನು ಉಲ್ಲೇಖಿಸಿ ಉಗ್ರವಾದದಿಂದ ಕೂಡಿದ ಗೋಡೆ ಬರಹದ ಹಿಂದಿರುವ ಕಿಲಾಡಿಗಳನ್ನು ಪೊಲೀಸರು ಬಂಧಿಸಿದ್ದಾರೆ. 


ಕರಾವಳಿಯನ್ನು ಬೆಚ್ಚಿ ಬೀಳಿಸಿದ್ದ ಈ ಗೋಡೆ ಬರಹದ ಹಿಂದಿರುವ ವ್ಯಕ್ತಿ ಇದೇ ರಾಜ್ಯದ ನಿವಾಸಿ ಎಂದು ಪೊಲೀಸರು ದೃಢಪಡಿಸಿದ್ದಾರೆ.


emungaru report


ವಿಶೇಷ ತಂಡದ ನೇತೃತ್ವದಲ್ಲಿ ಕದ್ರಿ ಠಾಣೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಆರೋಪಿಯನ್ನು ಯಶಸ್ವಿಯಾಗಿ ಬಂಧಿಸಲಾಗಿದೆ.


ಆರೋಪಿ ಶಿವಮೊಗ್ಗ ನಿವಾಸಿ ಮಹಮ್ಮದ್ ನಜೀರ್ ಎಂದು ಗುರುತಿಸಲಾಗಿದೆ. ಯಾವ ಕಾರಣಕ್ಕಾಗಿ ಈತ ಈ ರೀತಿಯ ಕೃತ್ಯ ನಡೆಸಿದ ಎಂಬುದು ಇನ್ನಷ್ಟೇ ಬಹಿರಂಗವಾಗಬೇಕಾಗಿದೆ.


emungaru report


ಇದು ಕೇವಲ ಒಬ್ಬ ವ್ಯಕ್ತಿಯಿಂದ ನಡೆದ ಕೃತ್ಯವಲ್ಲ ಎಂಬುದಾಗಿ ಜನ ಅನುಮಾನ ಪಟ್ಟಿದ್ದು, ಇದರ ಹಿಂದಿರುವ ಜಾಲವನ್ನು ಭೇದಿಸಬೇಕು ಎಂದು ಆಗ್ರಹಿಸಿದ್ದಾರೆ.



ಆಧುನಿಕ ತಂತ್ರಜ್ಞಾನ ಬಳಸಿ ಗೂಗಲ್ ಅರ್ಥ್ ವೀಡಿಯೋ ಬಳಸಿ ಆರೋಪಿಯನ್ನು ಫೋಟೋ ಸಹಿತ ಬಂಧಿಸಲಾಗಿದೆ ಎಂದು ಹೇಳಲಾಗಿದೆ. ಆರೋಪಿ ಶಿವಮೊಗ್ಗ ಮೂಲದವನಾದರೂ ಸ್ಥಳೀಯರ ಸಹಕಾರ ಇದ್ದೇ ಇರಬೇಕು ಎಂಬ ಸಂಶಯ ಬಲವಾಗಿದೆ.


ಆರೋಪಿಯನ್ನು ರಹಸ್ಯ ಸ್ಥಳದಲ್ಲಿ ವಿಚಾರಣೆಗೊಳಪಡಿಸಿದ್ದು, ಈತನ ಜೊತೆಗೆ ಇನ್ನಷ್ಟು ಮಂದಿ ಕೈಜೋಡಿಸುವ ಸಾಧ್ಯತೆಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ. 


emungaru report

Ads on article

Advertise in articles 1

advertising articles 2

Advertise under the article

WhatsApp Image 2021-10-17 at 10.29.15 PM (1).jpeg