ಬೆಂಗಳೂರು:
ರಾಜ್ಯದ ಖಾಸಗಿ ಆಸ್ಪತ್ರೆಗಳಲ್ಲಿ ಕ್ಯಾನ್ಸರ್ ಸೇರಿದಂತೆ ಗಂಭೀರ ಕಾಯಿಲೆಗಳಿಗೆ ಬಳಸಲಾಗುವ ಕ್ರಿಟಿಕಲ್ ಔಷಧಗಳ ಖರೀದಿ ದರ (ಲ್ಯಾಂಡಿಂಗ್ ದರ) ಹಾಗೂ ಮಾರಾಟ ದರದ (ಎಂಆರ್‌ಪಿ) ನಡುವೆ ಆಕಾಶ-ಭೂಮಿಯಷ್ಟು ಅಂತರವಿದ್ದು, ಬರೋಬ್ಬರಿ ಶೇಕಡಾ 5000ದಷ್ಟು ಹೆಚ್ಚಿನ ದರಕ್ಕೆ ಮಾರಾಟ ಮಾಡಿ ರೋಗಿಗಳನ್ನು ಲೂಟಿ ಮಾಡಲಾಗುತ್ತಿದೆ ಎಂಬ ಆಘಾತಕಾರಿ ಸತ್ಯವನ್ನು ಆರೋಗ್ಯ ಸಚಿವ ಯು.ಟಿ. ಖಾದರ್ ಬಹಿರಂಗಪಡಿಸಿದ್ದಾರೆ .
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಅಧಿಕಾರಿಗಳು ವಿವಿಧ ಆಸ್ಪತ್ರೆಗಳಲ್ಲಿ ನಡೆಸಿದ ತಪಾಸಣೆ ಮತ್ತು ಪರಿಶೀಲನೆ ವೇಳೆ ಈ ದಂಧೆ ಬೆಳಕಿಗೆ ಬಂದಿದೆ ಎಂದು ತಿಳಿಸಿದರು .
ದರ ಪಟ್ಟಿ ಪ್ರಕಟಿಸಲು ಆಗ್ರಹ – ಕೇಂದ್ರದ ಕಾನೂನಿಗೆ ಮನವಿ:
- ಪ್ರತಿಯೊಂದು ಖಾಸಗಿ ಆಸ್ಪತ್ರೆ ಹಾಗೂ ಫಾರ್ಮಸಿಗಳು ಔಷಧಗಳ ಅಸಲಿ ಖರೀದಿ ದರ (ಲ್ಯಾಂಡಿಂಗ್ ದರ) ಮತ್ತು ಮಾರಾಟ ದರವನ್ನು ಪ್ರತ್ಯೇಕವಾಗಿ ಪಟ್ಟಿ ಮಾಡಿ ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು
. - ಔಷಧಗಳ ಬೆಲೆ ನಿಯಂತ್ರಣ ಮಾಡುವ ಅಧಿಕಾರ ರಾಜ್ಯ ಸರ್ಕಾರಗಳ ಕೈಯಲ್ಲಿಲ್ಲದ ಕಾರಣ, ಕೇಂದ್ರ ಸರ್ಕಾರವೇ ಈ ಕುರಿತು ಕಟ್ಟುನಿಟ್ಟಿನ ಕಾನೂನು ರೂಪಿಸಬೇಕೆಂದು ಒತ್ತಾಯಿಸಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು
.
ಔಷಧಗಳ ಅಸಲಿ ಬೆಲೆ vs ಆಸ್ಪತ್ರೆಗಳ ಮಾರಾಟ ದರ (ಎಂಆರ್‌ಪಿ):
| ಔಷಧ / ವೈದ್ಯಕೀಯ ಉಪಕರಣ | ಲ್ಯಾಂಡಿಂಗ್ ದರ (ರೂ.) | ಎಂಆರ್‌ಪಿ / ಮಾರಾಟ ದರ (ರೂ.) |
| ಗುಫ್ಲೋಲ್ | ₹86 | ₹4,528 |
| ಗುಫಿಸೈಕ್ಲಿನ್-50 ಇಂಜೆಕ್ಷನ್ | ₹160 | ₹7,110 |
| ಟರ್ಲಿಸಿಟ್ | ₹118 | ₹4,416 |
| ಟ್ಯಾಕ್ಟೋಕೇರ್ 120 ಎಂಜಿ | ₹1,000 | ₹21,617 |
| ಕ್ಯಾನ್ಮ್ಯಾಬ್ 440 ಎಂಜಿ | ₹6,600 | ₹57,457 |
| ಬೆವಾಟಿಸ್ 400 ಎಂಜಿ | ₹5,850 | ₹62,690 |
| ಸೈಟ್ಯಾಕ್ಸ್ 100 (ಕ್ಯಾನ್ಸರ್ ಔಷಧ) | ₹342 | ₹3,836 |
| ನೆಬ್ಯುಲೈಸರ್ ಮಾಸ್ಕ್ | ₹44.50 | ₹950 |
| ಐವಿ ಸೆಟ್ | ₹14.75 | ₹295 |
| ಪಾಲಿಫೀಟಿ ಪಿಆರ್‌ಓ ಕ್ಯಾನುಲಾ | ₹33.21 | ₹548 |
