ಆಳ್ವಾಸ್ ಕ್ರೀಡಾಪಟುಗಳು ರಾಷ್ಟ್ರೀಯ ಬಾಲ್ ಬ್ಯಾಡ್ಮಿಂಟನ್ ತಂಡಕ್ಕೆ ಆಯ್ಕೆ

ಆಳ್ವಾಸ್ ಕ್ರೀಡಾಪಟುಗಳು ರಾಷ್ಟ್ರೀಯ ಬಾಲ್ ಬ್ಯಾಡ್ಮಿಂಟನ್ ತಂಡಕ್ಕೆ ಆಯ್ಕೆ

ರಾಷ್ಟ್ರೀಯ ಬಾಲ್ ಬ್ಯಾಡ್ಮಿಂಟನ್ ತಂಡಕ್ಕೆ ಆಳ್ವಾಸ್‌ನ ನಾಲ್ವರು ಕ್ರೀಡಾಪಟುಗಳು ಆಯ್ಕೆ

ಮೂಡುಬಿದಿರೆ

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ನಾಲ್ವರು ಕ್ರೀಡಾಪಟುಗಳು ಅಂತಾರಾಷ್ಟ್ರೀಯ ಮಟ್ಟದ ಬಾಲ್‌ಬ್ಯಾಡ್ಮಿಂಟನ್ ಸ್ಪರ್ಧೆಗೆ ಆಯ್ಕೆಯಾಗುವ ಮೂಲಕ ಗಮನಾರ್ಹ ಸಾಧನೆ ಮೆರೆದಿದ್ದಾರೆ.

ದಕ್ಷಿಣ ಏಷ್ಯಾ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್

ಬಿಹಾರದ ಪಾಟ್ನಾದಲ್ಲಿ ಡಿಸೆಂಬರ್ ೨೭ ರಿಂದ ೨೯ರವರೆಗೆ ನಡೆದ ದಕ್ಷಿಣ ಏಷ್ಯಾ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಫ್‌ನಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಜಯಲಕ್ಷ್ಮಿ ಭಾರತ ಮಹಿಳಾ ತಂಡದ ನಾಯಕಿಯಾಗಿ ಸ್ಪರ್ಧೆಯಲ್ಲಿ ಪಾಲ್ಗೊಂಡು, ತಂಡವನ್ನು ಜಯಭೇರಿ ಮೊಳಗಿಸುವಲ್ಲಿ ಯಶಸ್ವಿಯಾದರು. ಅತಿಥೇಯ ಭಾರತವಲ್ಲದೆ ನೇಪಾಳ, ಶ್ರೀಲಂಕಾ ಹಾಗೂ ಭೂತಾನ್ ತಂಡಗಳು ಈ ಪಂದ್ಯಾಟದಲ್ಲಿ ಪಾಲ್ಗೊಂಡಿದ್ದವು.

ಇಂಡೋ–ನೇಪಾಳ ಬಾಲ್ ಬ್ಯಾಡ್ಮಿಂಟನ್ ಟೆಸ್ಟ್ ಸರಣಿ

ಇದರ ಜೊತೆಗೆ, ಜನವರಿ ೧ರಿಂದ ೫, ೨೦೨೬ರವರೆಗೆ ನೇಪಾಳದ ಕಠ್ಮಂಡುವಿನ ಬಿರ್ಗುಂಜ್‌ನಲ್ಲಿ ನಡೆಯುವ ಇಂಡೋ–ನೇಪಾಳ ಬಾಲ್ ಬ್ಯಾಡ್ಮಿಂಟನ್ ಟೆಸ್ಟ್ ಸರಣಿಗೆ ಆಳ್ವಾಸ್ ಪ್ರತಿಷ್ಠಾನದ ವಿದ್ಯಾರ್ಥಿಗಳಾದ ಪ್ರಶಾಂತ್ ಹೆಚ್.ಜಿ., ಸಾವಿತ್ರಿ ರಮೇಶ್ ಕರಿಗಾರ್ ಮತ್ತು ಲಾಂಛನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ವಿದ್ಯಾರ್ಥಿಗಳ ಸಾಧನೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ ಅಭಿನಂದಿಸಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu