ಗೃಹರಕ್ಷಕರ ಸದಸ್ಯತ್ವಕ್ಕೆ ಅರ್ಜಿ ಆಹ್ವಾನ: ಅಕ್ಟೋಬರ್ 10ರಂದು ಕೊನೆ ದಿನ

ಗೃಹರಕ್ಷಕರ ಸದಸ್ಯತ್ವಕ್ಕೆ ಅರ್ಜಿ ಆಹ್ವಾನ: ಅಕ್ಟೋಬರ್ 10ರಂದು ಕೊನೆ ದಿನ





ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಮಂಗಳೂರು, ಉಳ್ಳಾಲ, ಪಣಂಬೂರು, ಸುರತ್ಕಲ್, ಮೂಲ್ಕಿ, ಮೂಡುಬಿದಿರೆ, ಬಂಟ್ವಾಳ, ವಿಟ್ಲ, ಪುತ್ತೂರು, ಕಡಬ, ಉಪ್ಪಿನಂಗಡಿ, ಬೆಳ್ತಂಗಡಿ, ಸುಳ್ಯ, ಬೆಳ್ಳಾರೆ ಮತ್ತು ಸುಬ್ರಹ್ಮಣ್ಯ ಘಟಕಗಳಲ್ಲಿ ಖಾಲಿಯಿರುವ ಗೃಹರಕ್ಷಕರ ಸ್ಥಾನಗಳನ್ನು ಭರ್ತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸ ಲಾಗಿದೆ.


ಎಸ್ಸೆಸ್ಸೆಲ್ಸಿ ಉತ್ತೀರ್ಣಗೊಂಡಿರುವ ಹಾಗೂ 19 ರಿಂದ 45 ವರ್ಷದ ಒಳಗಿರುವ, ದೈಹಿಕ ಸದೃಢತೆ ಹೊಂದಿರುವ ಸ್ಥಳೀಯ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಪಡೆಯಲು ಬರುವಾಗ ಆಧಾರ್ ಕಾರ್ಡ್ ಮತ್ತು ಎಸ್ಸೆಸ್ಸೆಲ್ಸಿ ಮೂಲ ಅಂಕಪಟ್ಟಿ ತರಬೇಕು.


ನಗರದ ಮೇರಿಹಿಲ್‌ನಲ್ಲಿರುವ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಿಂದ ಅರ್ಜಿಯನ್ನು ಸೆಪ್ಟೆಂಬರ್ 15ರಿಂದ ಉಚಿತವಾಗಿ ಪಡೆಯಬಹುದು. ಅರ್ಜಿ ಸಲ್ಲಿಸಲು ಅಕ್ಟೋಬರ್ 10ರಂದು ಕೊನೆಯ ದಿನ ಎಂದು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಸಮಾ ದೇಷ್ಟರು ತಿಳಿಸಿದ್ದಾರೆ.


BREAKING NEWS
Loading latest news...
Join our WhatsApp Channel Powered By : Online Pudu