ಬೆಂಗಳೂರು: ರಾಹುಲ್ ದ್ರಾವಿಡ್ ಕಾರಿಗೆ ಗೂಡ್ಸ್ ವಾಹನ ಡಿಕ್ಕಿ: ವಾಗ್ವಾದ , ವೀಡಿಯೋ ವೈರಲ್



ಬೆಂಗಳೂರು: ಭಾರತದ ಕ್ರಿಕೆಟ್ ಟೀಂನ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರ ಕಾರಿಗೆ ಗೂಡ್ಸ್ ಗಾಡಿಯೊಂದು ಢಿಕ್ಕಿಯಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಈ ಅಪಘಾತದಲ್ಲಿ ಯಾವುದೇ ಗಾಯವಾಗಲಿ, ಪ್ರಾಣಾಪಾಯದಂತಹ ಘಟನೆಗಳು ಸಂಭವಿಸಿಲ್ಲ. ರಾಹುಲ್ ಕಾರಿಗೆ ಮತ್ತೊಂದು ವಾಹನ ಡಿಕ್ಕಿಯಾಗಿದೆ. ಈ ವೇಳೆ ರಾಹುಲ್ ದ್ರಾವಿಡ್ ಕಾರಿನಿಂದ ಕೆಳಗಿಳಿದು ಕಾರನ್ನು ಪರಿಶೀಲಿಸಿದ್ದಾರೆ. ಮಾತ್ರವಲ್ಲ ರಾಹುಲ್ ದ್ರಾವಿಡ್ ಹಾಗೂ ಗೂಡ್ಸ್‌ ಆಟೋ ಚಾಲಕನ ನಡುವೆ ಸಣ್ಣ ವಾಗ್ವಾದ ನಡೆದಿದೆ.


 ಸದ್ಯ ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ. ಘಟನೆ ಸಂದರ್ಭದಲ್ಲಿ ದ್ರಾವಿಡ್ ಹಾಗೂ ಗೂಡ್ಸ್ ಚಾಲಕನ ನಡುವೆ ಸಣ್ಣ ಮಾತಿನ ಚಕಮಕಿ ನಡೆದಿದೆ. ವಾಗ್ವಾದ ನಡೆದ ಬಳಿಕ ರಾಹುಲ್ ದ್ರಾವಿಡ್ ಅಲ್ಲಿಂದ ತೆರಳಿದ್ದಾರೆ.

BREAKING NEWS
Loading latest news...
Join our WhatsApp Channel Powered By : Online Pudu