ಬಾಗಿಲ ಮೇಲೆ ನೆರೆಯವರ ಹೆಸರು ಬರೆದಿಟ್ಟು 24ರ ಯುವತಿ ಆತ್ಮಹತ್ಯೆ




ಚಾಮರಾಜನಗರ: ಬಾಗಿಲಿನ ಮೇಲೆ ನೆರೆಮನೆಯವರ ಹೆಸರು ಬರೆದಿಟ್ಟು ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಚೆನ್ನಮಲ್ಲಿಪುರ ಗ್ರಾಮದಲ್ಲಿ ನಡೆದಿದೆ.

ಚೆನ್ನಮಲ್ಲಿಪುರ ಗ್ರಾಮದ ಕವನಾ (24) ಮೃತಪಟ್ಟ ಯುವತಿ. ಈಕೆ ಮನೆಯಲ್ಲಿ ಅವರೆಕಾಳಿನ ಗಿಡಗಳಿಗೆ ಹಾಕಲು ತಂದಿಟ್ಟಿದ್ದ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಮತ್ತು ಬಾಗಿಲಿನ ಮೇಲೆ ನೆರೆಮನೆಯವರ ಹೆಸರು ಬರೆದಿಟ್ಟದ್ದಾಳೆ.

ನೆರೆಮನೆಯ ಯುವತಿಗೆ ಯುವಕನೊಬ್ಬ ತನ್ನ ಪುತ್ರಿಯ ಹೆಸರಿನಲ್ಲಿ ಮೆಸೇಜ್ ಮಾಡಿದ್ದನು. ಇದರಿಂದ ನೆರೆಮನೆಯಲ್ಲಿ ಕಲಹ ಉಂಟಾಗಿತ್ತು. ತನ್ನ ಪುತ್ರಿಯೇ ಮೆಸೇಜ್ ಮಾಡಿದ್ದಾಳೆಂದು ನೆರೆಯವರು ಅಪಮಾನ ಮಾಡಿದ್ದರಿಂದ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಮೃತಳ ತಾಯಿ ದೂರು ಕೊಟ್ಟಿದ್ದಾರೆ.

"ತನ್ನ ಪುತ್ರಿ ಡೆತ್‌ನೋಟ್ ಮತ್ತು ಮನೆಯ ಬಾಗಿಲಿನ ಮೇಲೂ ತನ್ನ ಸಾವಿಗೆ ಕಾರಣರಾದ ನಾಲ್ವರು ನೆರೆಮನೆಯವರ ಹೆಸರು ಬರೆದಿದ್ದಾಳೆ. ಮಾನಸಿಕ ಕಿರುಕುಳ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ" ಮೃತಳ ತಾಯಿ ದೂರಿನಲ್ಲಿ ತಿಳಿಸಿದ್ದಾರೆ.

"ಘಟನೆಗೆ ಸಂಬಂಧಿಸಿದಂತೆ ಗುಂಡ್ಲುಪೇಟೆ ಠಾಣೆಯಲ್ಲಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಯುವತಿ ಆತ್ಮಹತ್ಯೆಗೂ ಮುನ್ನ ತನ್ನ ಅಕ್ಕನಿಗೆ ವಿಡಿಯೋ ಕಾಲ್ ಮಾಡಿ ತನಗೆ ಅಪಮಾನ ಆಗಿದೆ, ತಾನು ಮೆಸೇಜ್ ಮಾಡಿಲ್ಲ. ತಾನು ಆತ್ಮಹತ್ಯೆ ಮಾಡುತ್ತಿದ್ದೇನೆ ಎಂದು ಹೇಳಿದ್ದಾಳೆಂದು ಮೃತಳ ತಾಯಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu