-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಮಹಿಳೆಯರು ತಮ್ಮ ಪುರುಷ ಸಂಗಾತಿಗೆ ಹೇಳುವ ಏಳು ಸಿಹಿಸುಳ್ಳುಗಳು ಯಾವುದೆಂದು ಗೊತ್ತಾ?

ಮಹಿಳೆಯರು ತಮ್ಮ ಪುರುಷ ಸಂಗಾತಿಗೆ ಹೇಳುವ ಏಳು ಸಿಹಿಸುಳ್ಳುಗಳು ಯಾವುದೆಂದು ಗೊತ್ತಾ?


ಮಹಿಳೆಯರು ತಮ್ಮ ಪುರುಷ ಸಂಗಾತಿಯೊಂದಿಗೆ ಕೆಲವೊಂದು ಸಿಹಿ ಸುಳ್ಳುಗಳನ್ನು ಹೇಳುತ್ತಿರುತ್ತಾರೆ. ಬಹುತೇಕ ಎಲ್ಲಾ ಮಹಿಳೆಯರು  ಕೆಲವೊಂದು ವಿಚಾರಗಳನ್ನು ಗುಟ್ಟು ಮಾಡಿಯೇ ಮಾಡುತ್ತಾರೆ. ಆದರೆ ಕೆಲವೊಂದು ಸಾಮಾನ್ಯ ವಿಚಾರಗಳನ್ನು ಮುಚ್ಚಿಟ್ಟೇ ಮುಚ್ಚಿಡುತ್ತಾರೆ. ಆ ಏಳು ಸುಳ್ಳುಗಳು ಯಾವುದೆಂದು ನೋಡೋಣ ಬನ್ನಿ.

ಮಹಿಳೆಯರು ಯಾವತ್ತಿಗೂ ಶಾಪಿಂಗ್ ಮಾಡುವ ವೇಳೆ ತಾವೆಷ್ಟು ಹಣ ಖರ್ಚು ಮಾಡಿದ್ದೇವೆ ಎಂಬುದನ್ನು ಯಾರಿಗೂ ಹೇಳುವುದಿಲ್ಲ. ಅದರಲ್ಲಿಯೂ ತಮ್ಮ ಪತಿಯಲ್ಲಿ ಕೆಲವೊಬ್ಬರ ಮಹಿಳೆಯರು ಈ ವಿಷಯದ ಬಗ್ಗೆ ಸುಳ್ಳು ಹೇಳುತ್ತಿರುತ್ತಾರೆ. ಹೇಳಿದರೂ ಕಡಿಮೆ ಅಥವಾ ಹೆಚ್ಚು ಬೆಲೆ ಹೇಳುತ್ತಾರೆ. ಹಣ ಉಳಿಸಿಕೊಳ್ಳುವ ಉದ್ದೇಶದಿಂದ ಈ ಸುಳ್ಳು ಹೇಳುತ್ತಾರೆ.

ಮಹಿಳೆಯರು ಯಾವಾಗಲೂ ತಾವು ಇತರರಿಗಿಂತಲೂ ಹೆಚ್ಚಾಗಿ ಸುಂದರವಾಗಿ ಕಾಣಿಸಿಕೊಳ್ಳಲು ಇಷ್ಟಪಡುತ್ತಾರೆ. ಹಾಗಾಗಿ ಯಾರ ಮುಂದೆಯೂ ಅದರಲ್ಲೂ ಪುರುಷರ ಮುಂದೆ ತಮ್ಮ ತೂಕ ಎಷ್ಟಿದೆ ಎಂಬುದನ್ನು ಹೇಳುವುದಿಲ್ಲ. ಸಾಮಾನ್ಯ ತೂಕಗಿಂತ ಕಡಿಮೆ ಹೇಳುವವರ ಸಂಖ್ಯೆ ಹೆಚ್ಚಾಗಿರುತ್ತದೆ.

ಗಂಡಿನ ಸಂಬಳ, ಹೆಣ್ಣಿನ ವಯಸ್ಸು ಕೇಳಬಾರದು ಎಂಬ ಮಾತಿದೆ. ಈ ಮಾತಿನಂತೆ ಮಹಿಳೆಯರು ತಮ್ಮ ವಯಸ್ಸು ಮತ್ತು ಹುಟ್ಟಿದ ವರ್ಷ ಯಾವುದೆಂದು ಯಾವತ್ತಿಗೂ  ಬಿಟ್ಟುಕೊಡಲ್ಲ. ಅತ್ಯಾಪ್ತರ ಬಳಿಯಲ್ಲಿಯೂ ಕೆಲವೊಮ್ಮೆ   ವಯಸ್ಸನ್ನು ಮರೆಮಾಡುತ್ತಾರೆ ಎನ್ನಲಾಗುತ್ತದೆ.

ಕೆಲ ಯುವತಿಯರು ರಿಲೇಶನ್‌ಶಿಪ್‌ನಲ್ಲಿದ್ರೂ  ಆ ವಿಚಾರವನ್ನು ಅತ್ಯಂತ ರಹಸ್ಯವಾಗಿಡಲು ಪ್ರಯತ್ನಿಸುತ್ತಾರೆ. ಮದುವೆಗೂ ಮೊದಲಿನ ಪ್ರೀತಿ ಪ್ರೇಮದ ಬಗ್ಗೆಯೂ ಯಾರ ಬಳಿಯೂ ಹಂಚಿಕೊಳ್ಳುವುದಿಲ್ಲ. ಆದರೆ ಪುರುಷರು  ತಮ್ಮ ಮೊದಲ ಪ್ರೀತಿಯ ವಿಷಯವನ್ನು ಅತ್ಯಂತ ಪ್ರೀತಿಯಿಂದಲೇ ಹೇಳಿಕೊಳ್ಳುತ್ತಿರುತ್ತಾರೆ.

ಸರಿಯಾದ ಸಮಯಕ್ಕೆ ಬರುತ್ತೇನೆ ಎಂದು ಸುಳ್ಳನ್ನು ಮಹಿಳೆಯರು ಸಾಮಾನ್ಯವಾಗಿ ಹೇಳುತ್ತಿರುತ್ತಾರೆ. ಈ ವಿಷಯದಲ್ಲಿ ಪುರುಷರು ಪ್ರಾಮಾಣಿಕರಾಗಿರುತ್ತಾರೆ. ಸಮಯದ ವಿಚಾರದಲ್ಲಿಯೂ ಮಹಿಳೆಯರು  ತಮ್ಮದೇ ಆದ ಕೆಲವು  ಕಾರಣಗಳಿಂದ ಈ ಮಾತನ್ನು ಉಳಿಸಿಕೊಳ್ಳಲು ವಿಫಲರಾಗುತ್ತಾರೆ.

ಇನ್ನು ಮಹಿಳೆಯರು  ತಾವು ಎಲ್ಲಿದ್ದೇವೆ ಎಂಬುದನ್ನು ನಿಖರವಾಗಿ  ಹೇಳಲ್ಲ ಎಂಬ ಮಾತಿದೆ. ಅದರಲ್ಲಿಯೂ ವಿಶೇಷವಾಗಿ ಯುವತಿಯರು ತಾವು ಎಲ್ಲಿ ಹೋಗುತ್ತಿದ್ದೇವೆ  ಎಂಬುದರ ಬಗ್ಗೆ  ಸಣ್ಣದಾದ ಸುಳ್ಳನ್ನು ಹೇಳುತ್ತಿರುತ್ತಾರೆ. 



ಮಹಿಳೆಯರು ತಮ್ಮ ಆರೋಗ್ಯದ ವಿಚಾರಗಳನ್ನು ಭಾಗಶಃ ಮರೆಮಾಡುತ್ತಾರೆ. ಅನಾರೋಗ್ಯದಿಂದ ಬಳಲುತ್ತಿದ್ದರೂ ಚೆನ್ನಾಗಿಯೇ ಇದ್ದೇವೆ ಎಂದು  ಎಲ್ಲರಿಗೂ ಹೇಳುತ್ತಿರುತ್ತಾರೆ. ಹಾಗೆಯೇ ಮಹಿಳೆಯರು  ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಹಿಂದೇಟು ಹಾಕಿದ್ದಾರೆ.


Disclaimer: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ನಾವು ದೃಢೀಕರಿಸುವುದಿಲ್ಲ.

Ads on article

Advertise in articles 1

advertising articles 2

Advertise under the article

ಸುರ