ಅಂಬಾನಿ ಪುತ್ರನ ಮದುವೆಗಿಂತಲೂ ಅದ್ದೂರಿಯಾಗಿ ನಡೆಯಲಿದೆ ಅಮೆಜಾನ್ ಸಂಸ್ಥಾಪಕನ ವಿವಾಹ- ಖರ್ಚೆಷ್ಟು ಗೊತ್ತಾ?


ವಾಷಿಂಗ್ಟನ್‌: ಆನ್‌ಲೈನ್‌ ಮಾರುಕಟ್ಟೆಯ ದೈತ್ಯ ಸಂಸ್ಥೆ ಅಮೆಜಾನ್‌ ಸಂಸ್ಥಾಪಕ ಜೆಫ್‌ ಬೆಜೋಜ್‌, ಶೀಘ್ರವೇ ತಮ್ಮ ಸ್ನೇಹಿತೆ, ಪತ್ರಕರ್ತೆ ಲಾರೆನ್‌ ಸ್ಯಾಂಚೆಜ್‌ ಅವರನ್ನು ವಿವಾಹವಾಗಲಿದ್ದಾರೆ. ಈಗಾಗಲೇ ಮದುವೆಗೆ ಭಾರೀ ತಯಾರಿ ನಡೆಸಿದ್ದು, ವಿವಾಹ ಕಾರ್ಯಕ್ರಮದ ಒಟ್ಟಾರೆ ವೆಚ್ಚ 5096 ಕೋಟಿ ರೂ. ದಾಟಲಿದೆ ಎನ್ನಲಾಗಿದೆ.


ಅಮೆರಿಕದ ಕೊಲರಾಡೋದ ಆ್ಯಸ್ಪೆನ್ಸ್‌ನಲ್ಲಿ ಬರುವ ಶನಿವಾರ ವಿವಾಹ ಕಾರ್ಯಕ್ರಮ ನಡೆಯಲಿದೆ ಎಂದು ವರದಿಗಳು ತಿಳಿಸಿವೆ. ಮೊದಲ ಪತ್ನಿ ಮೆಕೆನ್‌ಜಿಗೆ ಜೆಫ್‌ ಬೆಜೋಜ್‌ 2019ರಲ್ಲಿ ವಿಚ್ಛೇದನ ನೀಡಿದ್ದರು. ಈ ಸಂದರ್ಭ ತಮ್ಮ ಮಾಜಿ ಪತ್ನಿಗೆ 3ಲಕ್ಷ ಕೋಟಿ ರೂ.ಪರಿಹಾರ ನೀಡಿದ್ದರು. ಬಳಿಕ ಸ್ಯಾಂಜೆಜ್‌ ಅವರೊಂದಿಗೆ ನಂಟು ಹೊಂದಿದ್ದರು. ಪ್ರಸಕ್ತ ಬೆಜೋಜ್ ಅವರ ಆಸ್ತಿ 20 ಲಕ್ಷ ಕೋಟಿ ರೂ.ನಷ್ಟಿದೆ.

ಕೆಲವು ತಿಂಗಳ ಹಿಂದೆ ಮುಕೇಶ್‌ ಅಂಬಾನಿ ಅವರ ಪುತ್ರ ಅನಂತ್‌ ಅಂಬಾನಿ ಅವರ ವಿವಾಹ ನಡೆದಿತ್ತು. ಈ  ಸಮಾರಂಭದ ಒಟ್ಟು ಖರ್ಚು ಬರೋಬ್ಬರಿ 5000 ಕೋಟಿ ರೂ. ದಾಟಿತ್ತು. ಆದ್ದರಿಂದ ಈ ಮದುವೆ ಅದಕ್ಕಿಂತಲೂ ಅದ್ದೂರಿಯಾಗಿ ನೆರವೇರಲಿದೆ ಎನ್ನಲಾಗಿದೆ.