-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಪತ್ನಿಯ ಶೀಲ ಶಂಕಿಸಿದ ಕಿರಾತಕ ಪೊಲೀಸ್ ಪತಿ: ನಕಲಿ‌ ಖಾತೆಯಿಂದ ಮೆಸೇಜ್ ಕಳುಹಿಸಿ ತಗಲಾಕ್ಕೊಂಡ

ಪತ್ನಿಯ ಶೀಲ ಶಂಕಿಸಿದ ಕಿರಾತಕ ಪೊಲೀಸ್ ಪತಿ: ನಕಲಿ‌ ಖಾತೆಯಿಂದ ಮೆಸೇಜ್ ಕಳುಹಿಸಿ ತಗಲಾಕ್ಕೊಂಡ


ಹರ್ದೋಯಿ: ಅವರದ್ದು ಸುಂದರವಾದ ಸಂಸಾರ. ಆದರೆ ಪತಿಗೆ ಅನುಮಾನದ ಕಾಯಿಲೆ. ಪತ್ನಿ ಫೋನ್ ನೋಡಿದರೂ ಅನುಮಾನ, ಮಾತನಾಡಿದರೂ ಅನುಮಾನ. ಹಾಗೆಂದು ಬಾಯಿಬಿಟ್ಟು ಹೇಳೂ ಇಲ್ಲ, ಕೇಳೂ ಇಲ್ಲ. ಪತ್ನಿಯ ಚಾರಿತ್ರ್ಯ ಮೇಲೆ ಅನುಮಾನ ಹೆಚ್ಚಾದ ಕಾರಣ ಪರೀಕ್ಷಿಸಲು ಮುಂದಾಗಿದ್ದಾನೆ. ನಕಲಿ ಇನ್‌ಸ್ಟಾಗ್ರಾಂ ಖಾತೆ ಸೃಷ್ಟಿಸಿ ಪತ್ನಿಯ ಚಾರಿತ್ಯ ಪರೀಕ್ಷಿಸಲು ಭರ್ಜರಿ ಐಡಿಯಾ ಮಾಡಿದ್ದಾನೆ. ಅದರಂತೆ ಪತ್ನಿಗೆ, ನೀವು ಹಾಟ್ ಆಂಟಿ, ಹೈಟ್ ವೈಟೂ ಸೂಪರ್ ಸೇರಿದಂತೆ ಹದ್ದು ಮೀರಿದ ಮೆಸೇಜ್ ಕಳುಹಿಸಲು ಆರಂಭಿಸಿದ್ದಾನೆ. ಆದರೆ ಪತ್ನಿಯನ್ನು ಪರೀಕ್ಷಿಸಲು ಹೋದ ಈತ ತಾನೇ ಲಾಕ್ ಆಗಿದ್ದಾನೆ. ವಿಶೇಷ ಅಂದರೆ ಈ ಕಿರಾತಕ ಪತಿ ಪೊಲೀಸ್ ಕಾನ್ಸ್‌ಸ್ಟೇಬಲ್. ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ರಾಯಬರೇಲಿಯಲ್ಲಿ.

ರಾಯಬರೇಲಿ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಪೇದೆಯಾಗಿರುವ ರಾಕೇಶ್ ಕುಮಾರ್‌ಗೆ ಪತ್ನಿ ಶೀಲದ ಬಗ್ಗೆ ವಿಪರೀತ ಅನುಮಾನ. ಪತ್ನಿಯ ಶೀಲ ಬಗ್ಗೆ ಅನುಮಾನ ಬಗೆಹರಿಸಲು ರಾಕೇಶ್ ಕುಮಾರ್ ಒಂದೆರೆಡು ಇನ್‌ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಕ್ರಿಯೇಟ್ ಮಾಡಿದ್ದಾರೆ. ಗೌರವ್ ಕುಮಾರ್ ಅನ್ನುವ ನಕಲಿ ಇನ್‌ಸ್ಟಾಗ್ರಾಂ ಖಾತೆ ಮೂಲಕ ಪತ್ನಿಗೆ ಮೆಸೇಜ್ ಮಾಡಲು ಆರಂಭಿಸಿದ್ದಾನೆ. 


ನೀವು ಹಾಟ್, ನೀವು ಸೂಪರ್ ಆಂಟಿ, ನಿಮ್ಮ ನೋಟ, ನಡೆ ಚಂದ, ಕಾಯುತ್ತಿದ್ದೇನೆ ಎಂದೆಲ್ಲಾ ಮೆಸೇಜ್‌ಗಳನ್ನು ಕಳುಹಿಸಿದ್ದಾನೆ. ಈ ಮೆಸೇಜ್‌ಗಳು ಎಲ್ಲೆ ಮೀರಿದೆ. ಇತ್ತ ಅನಾಮಿಕ ವ್ಯಕ್ತಿಯ ಮೆಸೇಜ್‌ಗೆ ಪ್ರತಿಕ್ರಿಯೆ ನೀಡದೆ ಆಕೆ ಆ ನಂಬರ್‌ಗಳನ್ನು ಬ್ಲಾಕ್ ಮಾಡಿದ್ದಾರೆ. ಆದರೆ ಬೇರೆಬೇರೆ ಖಾತೆಗಳಿಂದ ಮೆಸೇಜ್ ಕಳುಹಿಸಲು ಆರಂಭಿಸಿದ್ದಾನೆ. ಒಂದು ಬಾರಿ ಪತಿಯ ಗಮನಕ್ಕೂ ತಂದಿದ್ದ ಪತ್ನಿಗೆ ಈ ಕಿರಿಕಿರಿಯಿಂದ ಮುಕ್ತಿ ಇಲ್ಲದಾಗಿದೆ. ಆದ್ದರಿಂದ ನೇರವಾಗಿ ರಾಯಬರೇಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. 


ಪತ್ನಿ ಬಳಿ ಸೂಚಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಕಾರಣ ಪತ್ನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಆದರೆ ಪತಿಗೆ ಈ ವಿಚಾರವೇ ಗೊತ್ತಿಲ್ಲ. ಇತ್ತ ಸೈಬರ್ ಪೊಲೀಸರು ನಕಲಿ ಖಾತೆ ಮಾಹಿತಿ ಪಡೆದು ತನಿಖೆ ಆರಂಭಿಸಿದ್ದಾರೆ. ನಕಲಿ ಖಾತೆ ಎಲ್ಲಿಂದ ಕಾರ್ಯನಿರ್ವಹಿಸುತ್ತಿದೆ. ಟವರ್ ಲೋಕೇಶನ್ ಸೇರಿದಂತೆ ಒಂದೊಂದೆ ಮಾಹಿತಿ ಕಲೆ ಹಾಕಿದ್ದಾರೆ. ಈ ಮಾಹಿತಿಗಳನ್ನು ಆಧರಿಸಿ ಪೊಲೀಸರು ನೇರವಾಗಿ ಆರೋಪಿಯನ್ನು ಅರೆಸ್ಟ್ ಮಾಡಲು ತೆರಳಿದ್ದಾರೆ. 


ಅರೆಸ್ಟ್ ಮಾಡಲು ಹೋದ ಪೊಲೀಸರು ಬೆಚ್ಚಿ ಬಿದ್ದಿದ್ದಾರೆ. ಈ ರೀತಿ ನಕಲಿ ಖಾತೆಯಿಂದ ಮೆಸೇಜ್ ಕಳುಹಿಸುತ್ತಿದ್ದ ಕಿರಾತಕ ಪೊಲೀಸ್ ಪೇದೇ ರಾಕೇಶ್ ಕುಮಾರ್. ಈತನ ವಶಕ್ಕೆ ಪಡೆದ ಪೊಲೀಸರು ಮೊಬೈಲ್ ವಶಪಡಿಸಿಕೊಂಡು ಪರಿಶೀಲಿಸಿದ್ದಾರೆ. ಈ ವೇಳೆ ಪತ್ನಿಯ ಚಾರಿತ್ಯ ಪರೀಕ್ಷಿಸಲು ಈ ರೀತಿ ಮಾಡಿರುವುದಾಗಿ ಹೇಳಿಕೊಂಡಿದ್ದಾನೆ. ಆದರೆ ಪೊಲೀಸರಿಗೆ ಹಲವಾರು ಅನುಮಾನಗಳು ಸೃಷ್ಟಿಯಾಗಿದೆ. ಇದೀಗ ಪೊಲೀಸರು ಈ ರಾಕೇಶ್ ಕುಮಾರ್ ವಿರುದ್ಧ ತನಿಖೆ ಚುರುಕುಗೊಳಿಸಿದ್ದಾರೆ. ಈ ವೇಳೆ ರಾಕೇಶ್ ಕುಮಾರ್ ಪತ್ನಿಗೆ ವರದಕ್ಷಿಣೆ ಸೇರಿದಂತೆ ವಿವಿಧ ರೀತಿಯ ಕಿರುಕುಳ ನೀಡಿರುವುದು ಪತ್ತೆಯಾಗಿದೆ. ಇದಕ್ಕಾಗಿ ಪತ್ನಿಗೆ ಬೇರೊಂದು ಸಂಬಂಧವಿದೆ ಎಂದು ಸೃಷ್ಟಿಸುವ ಹುನ್ನಾರ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ. ಪತ್ನಿಯ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿ ದೂರವಾಗಿಸುವ ಅಥವಾ ಆಕೆಯಿಂದ ನಷ್ಟ ಪರಿಹಾರ ಪಡೆದುಕೊಳ್ಳಲು ಪ್ಲಾನ್ ಮಾಡಿರುವ ಸಾಧ್ಯತೆಯಿದೆ ಎಂದು ಪೊಲೀಸರು ಹೇಳಿದ್ದಾರೆ. ಆದರೆ ಕಿರಾತಕ ಪೊಲೀಸ್ ಪೇದೆಯ ಐಡಿಯಾ ವರ್ಕೌಟ್ ಆಗಿಲ್ಲ. 


Ads on article

Advertise in articles 1

advertising articles 2

Advertise under the article

ಸುರ