-->

ಅಂಬಾನಿ ಪುತ್ರಿ ಇಶಾ ಅಂಬಾನಿಗೆ ಸೇರಿದ ಮನೆಯಲ್ಲಿ ಸಾಮಾನ್ಯರೂ ಇರಬಹುದು: ಒಂದು ದಿನದ ವೆಚ್ಚ ಇಷ್ಟು

ಅಂಬಾನಿ ಪುತ್ರಿ ಇಶಾ ಅಂಬಾನಿಗೆ ಸೇರಿದ ಮನೆಯಲ್ಲಿ ಸಾಮಾನ್ಯರೂ ಇರಬಹುದು: ಒಂದು ದಿನದ ವೆಚ್ಚ ಇಷ್ಟು



ರಾಜಸ್ಥಾನದ ಜುಂಜುನು ಜಿಲ್ಲೆಯ ಬಾಗರ್ ಎಂಬ ಪುಟ್ಟ ಪಟ್ಟಣದಲ್ಲಿರುವ ಈ ಐಷಾರಾಮಿ ಮನೆ ಕೇವಲ ಅರಮನೆಯಲ್ಲ, ಇದು 20ನೇ ಶತಮಾನದ ಆರಂಭದ ಭಾರತದ ಕೈಗಾರಿಕೆಯ ಅಭಿವೃದ್ಧಿಯ ಸಂಕೇತವೆಂದರೆ ತಪ್ಪಲ್ಲ. ಪಿರಮಲ್ ಕುಟುಂಬದ ಸೇಠ್ ಪಿರಮಲ್ ಚತುರ್ಭುಜ್ ಮಖಾರಿಯಾ ಈ ಮನೆಯನ್ನು ನಿರ್ಮಿಸಿದ್ದರು. ಈ ಮನೆ ಪಿರಮಲ್ ಸಾಮ್ರಾಜ್ಯಕ್ಕೆ ಅಡಿಪಾಯ ಹಾಕಿರುವ ಕಾಲಕ್ಕೆ ಸೇರಿದೆ.

ಸೇಠ್ ಪಿರಮಲ್ ಅವರು, ಆಗ 50 ರೂ. ಜೇಬಲ್ಲಿಟ್ಟುಕೊಂಡು ಬಾಗರ್‌ನಿಂದ ಮುಂಬೈಗೆ ಬಂದಿದ್ದರು. ಮುಂಬೈನಲ್ಲಿ ಜವಳಿ ವ್ಯವಹಾರವನ್ನು ಪ್ರಾರಂಭಿಸಿದರು. ಅದು ಇಡೀ ಪಿರಮಲ್ ಸಾಮ್ರಾಜ್ಯವನ್ನೇ ನಿರ್ಮಾಣ ಮಾಡಿತು.

ಇಂದು ಈ ಪಿರಮಲ್ ಅರಮನೆಯು ಪಾರಂಪರಿಕ ಹೋಟೆಲ್ ಆಗಿ ಬದಲಾಗಿದೆ. ಇದರ ಹಿಂದೆ ಭಾರತದ ಭವ್ಯ ಪರಂಪರೆ ರಕ್ಷಿಸುವ ಮತ್ತು ಅವುಗಳನ್ನು ಸುಂದರ ಹೋಟೆಲ್‌ಗಳಾಗಿ ಪರಿವರ್ತಿಸುವಲ್ಲಿ ಹೆಸರುವಾಸಿಯಾದ ನೀಮ್ರಾನಾ ಹೋಟೆಲ್‌ಗಳ ಕೈವಾಡವಿದೆ. ಈ ಪಿರಮಲ್ ಮನೆಯ ಗೋಡೆಗಳ ಮೇಲೆ ಕೈಯಿಂದ ಮಾಡಿರುವ ಸುಂದರ ವರ್ಣರಂಜಿತ ಚಿತ್ರಕಲೆಗಳಿವೆ. ಈ ಚಿತ್ರಗಳು ಭಾರತ ಆಧುನೀಕರಣದತ್ತ ಸಾಗುತ್ತಿದ್ದ ಆ ಕಾಲದ ಕಥೆಯನ್ನು ಹೇಳುತ್ತದೆ.

ಇಂತಹ ಹೊಟೇಲ್ ನಲ್ಲಿ ಉಳಿದುಕೊಳ್ಳುವುದು ಕನಸಿನ ಮಾತು ಅಂದುಕೊಂಡರೆ, ನಿಮ್ಮ ಬಜೆಟ್‌ಗೆ ದುಬಾರಿ ಎಂದು ನೀವು ಭಾವಿಸಿದರೆ ಅದು ತಪ್ಪಾಗುತ್ತದೆ. ಪಿರಮಲ್ ಹವೇಲಿಯಲ್ಲಿ ನೀವು ಕೇವಲ 5,625 ರೂ.ಗೆ ಹೆರಿಟೇಜ್ ಕಂಫರ್ಟ್ ಟ್ವಿನ್ ರೂಮ್ ಅನ್ನು ಬುಕ್ ಮಾಡಬಹುದು. ಯಾವುದೇ ದೊಡ್ಡ ವ್ಯಕ್ತಿ ಅಥವಾ ವ್ಯಾಪಾರ ಉದ್ಯಮಿ ಎಂಬ ಗುರುತುಗಳಿಲ್ಲದವರಿಗೂ ಇಲ್ಲಿ ಉಳಿದುಕೊಳ್ಳಲು ಅವಕಾಶವಿದೆ. ಇದು ನಿಜಕ್ಕೂ ಆಕರ್ಷಕವಾಗಿದೆ.

ಈಶಾ ಅಂಬಾನಿ ಮತ್ತು ಆನಂದ್ ಪಿರಮಲ್‌ ಅವರ ರಾಜಸ್ಥಾನದ ಈ ಪಾರಂಪರಿಕ ಮನೆ ವಿಭಿನ್ನ ರೀತಿಯ ಸಮೃದ್ಧಿಯನ್ನು ತರುತ್ತದೆ.‌ ಇದು ಇತಿಹಾಸ, ಕಲೆ ಮತ್ತು ಈ ಕುಟುಂಬದ ಆಳವಾದ ಪರಂಪರೆಯನ್ನು ತೋರಿಸುತ್ತಿದೆ.

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article