ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನಲ್ಲಿ ಉದ್ಯೋಗಾವಕಾಶ: 85 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭ

ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನಲ್ಲಿ ಉದ್ಯೋಗಾವಕಾಶ: 85 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭ





ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌, ಚಿಕ್ಕಮಗಳೂರು ಇಲ್ಲಿ ಉದ್ಯೋಗಾವಕಾಶ ಲಭ್ಯವಾಗಿದ್ದು, 85 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ.


ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಆಸಕ್ತಿಯುಳ್ಳ ಅಭ್ಯರ್ಥಿಗಳು ನೇಮಕಾತಿ ಕೋರಿ ಅರ್ಜಿ ಸಲ್ಲಿಸಬಹುದು.


ಹುದ್ದೆಯ ವಿವರಗಳು ಈ ಕಳಗಿನಂತಿವೆ.


ಸಹಾಯಕ ವ್ಯವಸ್ಥಾಪಕರು: 04 ಹುದ್ದೆಗಳು

ಪ್ರಥಮ ದರ್ಜೆ ಸಹಾಯಕರು/ ಮೇಲ್ವಿಚಾರಕರು : 18 ಹುದ್ದೆಗಳು

ಕಿರಿಯ ಸಹಾಯಕರು : 53 ಹುದ್ದೆಗಳು

ಸಹಾಯಕರು/ಅಟೆಂಡರ್‌ಗಳು : 10 ಹುದ್ದೆಗಳು


ಒಟ್ಟು ಹುದ್ದೆ: 85 ಹುದ್ದೆಗಳು


ವೇತನ ಶ್ರೇಣಿ

ಸಹಾಯಕ ವ್ಯವಸ್ಥಾಪಕರು : ರೂ. 36000/- ರಿಂದ ರೂ. 67550/-

ಪ್ರಥಮ ದರ್ಜೆ ಸಹಾಯಕರು/ ಮೇಲ್ವಿಚಾರಕರು: ರೂ. 27650/- ರಿಂದ ರೂ. 52650/-

ಕಿರಿಯ ಸಹಾಯಕರು: ರೂ. 21400/- ರಿಂದ ರೂ. 42000/-

ಸಹಾಯಕರು/ಅಟೆಂಡರ್‌ಗಳು : ರೂ. 18600/- ರಿಂದ ರೂ. 32600/-


ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 27, ನವೆಂಬರ್ 2024


ಅರ್ಜಿಗಳನ್ನು ಆನ್‌ಲೈನ್ ಮೂಲಕ ಮಾತ್ರ ಸಲ್ಲಿಸತಕ್ಕದ್ದು. ಖುದ್ದಾಗಿ, ಅಂಚೆ ಮೂಲಕ ಯಾ ಕೊರಿಯರ್ ಮೂಲಕ ಸಲ್ಲಿಸಲು ಅವಕಾಶ ಇಲ್ಲ.


ಅರ್ಜಿ ಶುಲ್ಕವನ್ನು ಪಾವತಿಸಲು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಪಾವತಿ ಮಾಡಬಹುದು.


ನೇಮಕಾತಿಗೆ ಸಂಬಂಧಿಸಿದ ಅರ್ಜಿ ನಮೂನೆ, ಅರ್ಜಿ ಸಲ್ಲಿಸುವ ವಿಧಾನ, ಮೀಸಲಾತಿ ವರ್ಗೀಕರಣ, ವಿದ್ಯಾರ್ಹತೆ, ವಯೋಮಿತಿ ಮತ್ತು ಅರ್ಜಿ ಶುಲ್ಕ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಈ ಕೆಳಗೆ ನೀಡಲಾದ ಲಿಂಕ್‌ನ್ನು ಕ್ಲಿಕ್ ಮಾಡಬಹುದು.


www.chikkamagalurudccbank.com

BREAKING NEWS
Loading latest news...
Join our WhatsApp Channel Powered By : Online Pudu