ಒಮ್ಮೆಯೂ ಐ ಲವ್​ ಯೂ ಹೇಳ್ಲಿಲ್ಲ, ಮೊದಲು ಕಿಸ್​ ಕೊಟ್ಟಿದ್ದು.... ಆ್ಯಂಕರ್​ ಅನುಶ್ರೀ ಜೊತೆ ರಿಷಬ್ ಬಗ್ಗೆ ಪ್ರಗತಿ ಹೇಳಿದ್ದು.. ( VIDEO)

 

 


ವಿಡಿಯೋ ಕೃಪೆ: Anushree anchor ಯೂಟ್ಯೂಬ್ ಚಾನೆಲ್


 ಕಾಂತಾರ ನಟ ರಿಷಬ್​ ಶೆಟ್ಟಿಯವರ ಪರಿಚಯ ಈಗ ಎಲ್ಲರಿಗೂ ಇದೆ.   ಈಗ ಭಾರತ ಮಾತ್ರವಲ್ಲದೇ ವಿವಿಧ ದೇಶಗಳಲ್ಲಿಯೂ ಚಿರಪರಿಚಿತ ನಟ ಇವರು. ರಿಷಬ್ ಶೆಟ್ಟಿ ಅವರ ಪತ್ನಿ ಪ್ರಗತಿ ಶೆಟ್ಟಿ ಅವರು ಗಂಡನ ಬಗ್ಗೆ ಏನು ಹೇಳ್ತಾರೆ ಎಂಬುದನ್ನು ಅನುಶ್ರೀ ಆ್ಯಂಕರ್ ಯೂಟ್ಯೂಬ್ ಚಾನೆಲ್ ಗೆ ಅನುಶ್ರೀ ಸಂದರ್ಶನದಲ್ಲಿ ತೆರೆದಿಟ್ಟಿದ್ದಾರೆ.  





2017ರಲ್ಲಿ ರಿಷಬ್ ಶೆಟ್ಟಿ ಹಾಗೂ ಪ್ರಗತಿ ಶೆಟ್ಟಿ  ವಿವಾಹವಾದರು.

ಈ ದಂಪತಿಗೆ ಮಗ ರಣ್ವಿತ್ ಶೆಟ್ಟಿ ಹಾಗೂ ಮಗಳು ರಾಧ್ಯ ಶೆಟ್ಟಿ ಎಂಬ ಮಕ್ಕಳಿದ್ದಾರೆ. 

ಸಂದರ್ಶನದಲ್ಲಿ ಆ್ಯಂಕರ್​ ಅನುಶ್ರೀ ಅವರು ಪ್ರಗತಿ ಅವರಿಗೆ ಕೆಲವೊಂದು ಪ್ರಶ್ನೆಗಳನ್ನು ಕೇಳಿದ್ದಾರೆ. ಅದರಲ್ಲಿ ರಿಷಬ್​ ಶೆಟ್ಟಿಯವರಿಗೆ ಮೊದಲ ಬಾರಿಗೆ ಐ ಲವ್​ ಯೂ ಎಂದು ಯಾವಾಗ ಹೇಳಿದ್ದು ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಪ್ರಗತಿಯವರು ಇದುವರೆಗೂ ಒಮ್ಮೆಯೂ ಹೇಳಲಿಲ್ಲ ಎಂದಿದ್ದಾರೆ. ಮೊದಲು ಕಿಸ್​ ಮಾಡಿದ್ದು ಯಾವಾಗ ಎಂದು ಕೇಳಿದಾಗ, ಪ್ರಗತಿ ಅದನ್ನೆಲ್ಲಾ ಹೇಳ್ಲೇ ಬೇಕಾ ಎಂದು ಕೇಳಿದ್ದಾರೆ. ಆಗ ಅನುಶ್ರೀ ರಿಷಬ್​ ಅವರಿಗೇ ಕೇಳ್ತೇನೆ ಬಿಡಿ ಎಂದಾಗ, ಸರಿ ಅವರಿಗೇ ಕೇಳಿ ಎಂದು ನಾಚಿಕೊಂಡಿದ್ದಾರೆ . 

ಆ್ಯಂಕರ್ ಅನುಶ್ರೀ ಅವರ ಸಂದರ್ಶನದ ವಿಡಿಯೋ ನೋಡಿ..




BREAKING NEWS
Loading latest news...
Join our WhatsApp Channel Powered By : Online Pudu