-->

ಸಿನಿಮಾ ನಟಿಯರ ಕ್ಯಾರವನ್‌ನಲ್ಲಿ ರಹಸ್ಯ ಕೆಮರಾ: ರಾಧಿಕಾ ಆರೋಪ | CARAVAN

ಸಿನಿಮಾ ನಟಿಯರ ಕ್ಯಾರವನ್‌ನಲ್ಲಿ ರಹಸ್ಯ ಕೆಮರಾ: ರಾಧಿಕಾ ಆರೋಪ | CARAVAN


      

ತಿರುವನಂತಪುರ: ಮಲಯಾಳ ಚಿತ್ರ­ರಂ­ಗದಲ್ಲಿ ಮತ್ತೊಂದು ಆರೋಪ ಕೇಳಿಬಂದಿದ.  ಮಾಲಿವುಡ್ ನಲ್ಲಿ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿದೆ. ನಟಿಯರ ಕ್ಯಾರವಾನ್‌­­ಗಳಲ್ಲಿ ರಹ­ಸ್ಯವಾಗಿ ಕೆಮ­ರಾಗಳನ್ನಿಟ್ಟು ಅವರ ಬೆತ್ತಲೆ ಚಿತ್ರಗಳನ್ನು ಚಿತ್ರೀಕರಣ ಮಾಡಲಾಗು­ತ್ತಿದೆ ಎಂದು ನಟಿ ರಾಧಿಕಾ ಶರತ್‌ ಕುಮಾರ್‌ ಹೇಳಿದ್ದಾರೆ.


ಕ್ಯಾರವಾನ್‌­­ಗಳಲ್ಲಿ ರಹ­ಸ್ಯವಾಗಿ ಕೆಮ­ರಾಗಳನ್ನಿಟ್ಟ ವಿಷಯವು ತಿಳಿದ ಬಳಿಕ ನಾನು ಕ್ಯಾರವಾನ್‌ ಬಳಸುವುದು ಬಿಟ್ಟುಬಿಟ್ಟೆ ಎಂದಿ­ದ್ದಾರೆ. ಅಲ್ಲದೇ 46 ವರ್ಷಗಳಿಂದ ಚಿತ್ರರಂಗದಲ್ಲಿರುವ ನಾನು ನಟಿಯ­ರೊಂದಿಗೆ ಅನುಚಿತವಾಗಿ ವರ್ತಿಸುವ ಸಾಕಷ್ಟು ಮಂದಿಯನ್ನು ಎದುರಿಸಿದ್ದೇನೆ’ ಎಂದು ಅವರು ಹೇಳಿದ್ದಾರೆ.


ಕ್ಯಾರವಾನ್ ವಿಶೇಷತೆ ಏನು?


 ಕಾರವಾನ್ ಮೊಬೈಲ್  ವಾಹನ.  ಅದು ಸಿನಿಮಾ ರಂಗದಲ್ಲಿ ತಾತ್ಕಾಲಿಕ ಕಚೇರಿ, ಡ್ರೆಸ್ಸಿಂಗ್ ರೂಮ್ ಅಥವಾ ಚಿತ್ರೀಕರಣದ ಸಮಯದಲ್ಲಿ ನಟರು, ನಿರ್ದೇಶಕರು ಅಥವಾ ಇತರ ಸಿಬ್ಬಂದಿಗೆ ವಸತಿಯಾಗಿ ಕಾರ್ಯನಿರ್ವಹಿಸುತ್ತದೆ.  ಕಾರವಾನ್‌ಗಳನ್ನು ಸಾಮಾನ್ಯವಾಗಿ ಚಲನಚಿತ್ರ ಸೆಟ್‌ಗಳಲ್ಲಿ  ಸಿಬ್ಬಂದಿಗೆ ವಿಶ್ರಾಂತಿ, ತಯಾರಿ ಅಥವಾ ಟೇಕ್‌ಗಳ ನಡುವೆ ಕೆಲಸ ಮಾಡಲು ಖಾಸಗಿ ಜಾಗವನ್ನು ಒದಗಿಸಲು ಬಳಸಲಾಗುತ್ತದೆ.


  ಕಾರವಾನ್‌ಗಳು ಮೇಕಪ್ ಮತ್ತು ವಾರ್ಡ್ರೋಬ್ ಕೇಂದ್ರಗಳು, ಪೂರ್ವಾಭ್ಯಾಸದ ಸ್ಥಳಗಳು,  ಅಡುಗೆ ಸೌಲಭ್ಯಗಳು,  ಆರಾಮದಾಯಕ ಆಸನ ಪ್ರದೇಶಗಳು,  ಮೇಜುಗಳು ಮತ್ತು ಸಂವಹನ ಉಪಕರಣಗಳನ್ನು ಒಳಗೊಂಡಿದೆ.


 

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article