ಬ್ರೇಕಿಂಗ್ ನ್ಯೂಸ್

[getTicker results="10" label="recent" type="ticker"]

ಬಾಲಿವುಡ್ ಸಿನಿಮಾಗಳಲ್ಲಿ ಭಾರತವನ್ನು ಕೆಟ್ಟದಾಗಿ ತೋರಿಸಲಾಗಿದೆ - ರಿಷಭ್ ಶೆಟ್ಟಿ


ಬೆಂಗಳೂರು: ಕಾಂತಾರ ಸಿನಿಮಾದ ನಟನೆಗಾಗಿ ರಾಷ್ಟ್ರಪ್ರಶಸ್ತಿ ಪಡೆದ ನಟ, ನಿರ್ದೇಶಕ ರಿಷಭ್ ಶೆಟ್ಟಿಯವರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ತಮ್ಮ ನಿರ್ದೇಶನದ ಮೂಲಕ ಒಳ್ಳೆಯ ಸಿನಿಮಾಗಳನ್ನು ನೀಡಿರುವ ರಿಷಭ್ ಶೆಟ್ಟಿ ಇದೀಗ ಬಾಲಿವುಡ್‌ನ ಕುರಿತು ನೀಡಿರುವ ಹೇಳಿಕೆ ಚರ್ಚಾಸ್ಪದವಾಗಿದೆ.

ರಿಷಭ್ ಶೆಟ್ಟಿ ನಿರ್ಮಿಸಿ ಪ್ರಮೋದ್ ಶೆಟ್ಟಿ ನಾಯಕನಾಗಿ ನಟಿಸಿರುವ ಲಾಫಿಂಗ್ ಬುದ್ಧ ಸಿನಿಮಾ ಪ್ರಚಾರದ ವೇಳೆ ರಿಷಭ್ ಶೆಟ್ಟಿ ಬಾಲಿವುಡ್‌ನ ಸಿನಿಮಾಗಳ ಕುರಿತು ಮಾತನಾಡಿದ್ದಾರೆ. ಬಾಲಿವುಡ್‌ನವರು ಸಿನಿಮಾ ಮಾಡುವುದಕ್ಕೂ ದಕ್ಷಿಣ ಭಾರತದವರು ಸಿನಿಮಾ ಮಾಡುವುದಕ್ಕೂ ಬಹಳಷ್ಟು ವ್ಯತ್ಯಾಸಗಳಿದೆ. ಇದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ ಎಂದು ನಟ ಹೇಳಿದ್ದಾರೆ.

ಭಾರತೀಯ ಸಿನಿಮಾಗಳು ಅದರಲ್ಲೂ ವಿಶೇಷವಾಗಿ ಬಾಲಿವುಡ್ ಚಿತ್ರಗಳಲ್ಲಿ ಭಾರತವನ್ನು ಕೆಟ್ಟದಾಗಿ ತೋರಿಸಲಾಗುತ್ತಿದೆ. ಇದೇ ಸಿನಿಮಾ ಮಾಡೋ ಆರ್ಟ್ಸ್ ಎಂದುಕೊಂಡು ಹೊರದೇಶಗಳಿಗೆ ಹೋಗಿ ಅವಾರ್ಡ್‌ಗಳನ್ನು ಗೆದ್ದು ಬಂದಿದ್ದನ್ನು ನೋಡಿದ್ದೇನೆ. ನಮ್ಮ ದೇಶ ನಮ್ಮ ಹೆಮ್ಮೆ, ನನ್ನ ರಾಜ್ಯ ನನ್ನ ಹೆಮ್ಮೆ, ನನ್ನ ಭಾಷೆ ನನ್ನ ಹೆಮ್ಮೆ. ನಮ್ಮಲ್ಲಿರೋದನ್ನು ಪಾಸಿಟಿವ್‌ ನೋಟ್‌ನಲ್ಲಿ ತೋರಿಸಬಹುದಲ್ಲ ಎಂದು ನಟ ರಿಷಭ್ ಶೆಟ್ಟಿ ಹೇಳಿದ್ದಾರೆ.

ಇತ್ತ ರಿಷಭ್ ಶೆಟ್ಟಿ ಹೇಳಿಕೆಯ ವಿಡಿಯೋ ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿದ್ದು, ಹಲವರು ಈ ಹೇಳಿಕೆಯನ್ನು ಬೆಂಬಲಿಸಿದ್ದಾರೆ. ಅವರು ಸರಿಯಾದ ರೀತಿಯಲ್ಲಿ ಮಾತನಾಡಿದ್ದಾರೆ ಎಂದು ಕಮೆಂಟ್‌ಗಳ ಮೂಲಕ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಭಾರತದ ಸಿನಿಮಾ ಇಂಡಸ್ಟ್ರಿಯಲ್ಲಿ ಬಾಲಿವುಡ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದು, ಬೇರೆ ಭಾಷೆಯ ಸಿನಿಮಾಗಳಿಗೂ ಜಾಗತಿಕ ಮಟ್ಟದಲ್ಲಿ ಮನ್ನಣೆ ಸಿಗುವಂತೆ ಮಾಡಿದೆ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ.