ಬೆಂಗಳೂರು: ದರ್ಶನ್ ಜೈಲಿನಲ್ಲಿರುವ ಮೊದಲ ಫೋಟೊ ವೈರಲ್ - ಒಂದು ಕೈಯಲ್ಲಿ ಕಾಫಿ ಮಗ್, ಮತ್ತೊಂದು ಕೈಯಲ್ಲಿ ಸಿಗರೇಟ್


ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ವಿಚಾರಣಾಧೀನ ಖೈದಿಯಾಗಿರುವ ನಟ ದರ್ಶನ್ ಕಳೆದ 65 ದಿನಗಳಿಂದ ಜೈಲಿನಲ್ಲಿದ್ದಾರೆ.  ಇಲ್ಲಿಯವರೆಗೆ ಜೈಲಿನಲ್ಲಿದ್ದ ಅವರ ಫೋಟೊ ಆಗಲಿ, ವೀಡಿಯೋ ಆಗಲಿ ಲಭ್ಯವಾಗಿರಲಿಲ್ಲ. ಆದರೆ ಇದೇ ಮೊದಲ ಬಾರಿ ದರ್ಶನ್ ಅವರ ಫೋಟೋ ರಿಲೀಸ್ ಆಗಿದೆ.

ಈ ಫೋಟೋ ವೈರಲ್ ಆಗುತ್ತಿದ್ದಂತೆ, ಅವರಿಗೆ ಜೈಲಿನಲ್ಲಿ ರಾಜಾತಿಥ್ಯ ಸಿಗುತ್ತಿದೆಯಾ ಎಂಬ ಪ್ರಶ್ನೆ ಉದ್ಭವವಾಗುತ್ತಿದೆ. ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರದಲ್ಲಿ ಬೆಂಗಳೂರಿನ ರೌಡಿ ಶೀಟ‌ರ್ ವಿಲ್ಸನ್ ಗಾರ್ಡನ್ ನಾಗನೊಂದಿಗೆ ಕುಳಿತುಕೊಂಡು ದರ್ಶನ್ ಒಂದು ಕೈಯಲ್ಲಿ ಕಾಫಿ ಮಗ್, ಮತ್ತೊಂದು ಕೈಯಲ್ಲಿ ಸಿಗರೇಟ್ ಸೇದುತ್ತಿರುವುದು ಫೋಟೋದಲ್ಲಿ ಕಂಡುಬಂದಿದೆ. ಪರಪ್ಪನ ಅಗ್ರಹಾರದ ಸ್ಪೆಷಲ್ ಬ್ಯಾರಕ್‌ನಲ್ಲಿ ಇರಿಸಲಾಗಿದೆ. ಅಲ್ಲಿ ಅವರು ಆರಾಮಾಗಿ ದಿನ ಕಳೆಯುತ್ತಿರುವಂತಿದೆ.

ಪ್ಲಾಸ್ಟಿಕ್ ಕುರ್ಚಿಯಲ್ಲಿ ಕುಳಿತುಕೊಂಡಿರುವ ದರ್ಶನ್, ಒಂದು ಕೈನಲ್ಲಿ ಟೀ ಕಪ್ ಮತ್ತು ಇನ್ನೊಂದು ಕೈನಲ್ಲಿ ಸಿಗರೇಟ್ ಹಿಡಿದುಕೊಂಡಿದ್ದಾನೆ. ಆತನ ಜೊತೆಗೆ ಮತ್ತೊಬ್ಬ ಕೈದಿಯಾಗಿರುವ ಮ್ಯಾನೇಜ‌ರ್ ನಾಗರಾಜ್ ಕೂಡ ಇದ್ದಾನೆ. ದರ್ಶನ್ ಕೂದಲು ತೆಗೆದಿರುವುದು ಫೋಟೋದಲ್ಲಿ ಕಂಡುಬಂದಿದೆ. ಮತ್ತೋರ್ವ ಕುಳ್ಳ ಸೀನ ಎಂದು ತಿಳಿದುಬಂದಿದೆ. ಮಾತ್ರವಲ್ಲ ಈ ಫೋಟೋ ಹೇಗೆ ಹೊರಗಡೆ ಬಂತು ಎಂಬ ಕಥೆ ಕೂಡ ಕುತೂಹಲವಾಗಿದೆ.

ಜೈಲಿನಲ್ಲಿ ದರ್ಶನ್ ತಲೆ ಬೋಳಿಸಿಕೊಂಡಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಈ ಫೋಟೋ ನೋಡಿದ ಬಳಿಕ ಅದು ಖಚಿತವಾಗಿದೆ. ಅವರ ವಿಗ್ ಕೂಡ ತೆಗೆಸಲಾಗಿದೆ. ಕೊಲೆ ಆರೋಪಿ ದರ್ಶನ್‌ಗೆ ಜೈಲಲ್ಲಿ ಸಿಗರೇಟ್ ಸಿಕ್ಕಿದ್ದು ಹೇಗೆ..? ದುಡ್ಡು ಕೊಟ್ರೆ ಜೈಲಲ್ಲಿ ಏನು ಬೇಕಾದ್ರೂ ಸಿಗುತ್ತಾ? ಜೈಲಲ್ಲೂ ಕೊಲೆ ಆರೋಪಿಯ ಐಷಾರಾಮಿ ಲೈಫ್ ಇರುತ್ತಾ ಎಂಬ ಪ್ರಶ್ನೆಗಳು ಮುನ್ನೆಲೆಗೆ ಬಂದಿವೆ.
BREAKING NEWS
Loading latest news...
Join our WhatsApp Channel Powered By : Online Pudu