ಮನೆಗೆ ಹೋಗಲು‌ Auto ದಲ್ಲಿ ಹೋಗುತ್ತಿದ್ದ ನರ್ಸಿಂಗ್ ವಿದ್ಯಾರ್ಥಿನಿಯ ಮೇಲೆ ಬಲಾತ್ಕಾರ



ಮುಂಬೈ: ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಲ್ಲಿ ಆಟೊ ಚಾಲಕನೊಬ್ಬ ಪರ್ಸಿಂಗ್ ವಿದ್ಯಾರ್ಥಿನಿಗೆ, ಅಮಲು ಬರಿಸುವ ಅಂಶ ಮಿಶ್ರಣ ಮಾಡಿದ್ದ ನೀರು ಕುಡಿಸಿ, ಅತ್ಯಾಚಾರ ಎಸಗಿದ್ದಾನೆ.


ವಿದ್ಯಾರ್ಥಿಗಳು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದು, ತಪ್ಪಿತಸ್ಥನ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ಸಿಸಿಟಿವಿ ಕ್ಯಾಮೆರಾದ ದೃಶ್ಯಗಳನ್ನು ವಶಕ್ಕೆ ಪಡೆದಿದ್ದಾರೆ.


ರಾಜ್ಯದ ಠಾಣೆ ಜಿಲ್ಲೆಯ ಬದ್ಲಾಪುರದಲ್ಲಿ ಇಬ್ಬರು ನರ್ಸರಿ ವಿದ್ಯಾರ್ಥಿನಿಯರ ಮೇಲೆ ಇತ್ತೀಚೆಗೆ ಲೈಂಗಿಕ ದೌರ್ಜನ್ಯ ನಡೆದಿದ್ದು, ಅದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಕೃತ್ಯ ನಡೆದ ನಂತರ ಮಹಾರಾಷ್ಟ್ರ ಸರ್ಕಾರ ಇರಿಸುಮುರಿಸಿಗೆ ಒಳಗಾಗಿತ್ತು. ಅದರ ಬೆನ್ನಲ್ಲೇ ಮತ್ತೊಂದು ಕೃತ್ಯ ನಡೆದಿದೆ.


ವರದಿ ಪ್ರಕಾರ, ನರ್ಸಿಂಗ್ ವಿದ್ಯಾರ್ಥಿನಿ ತನ್ನ ಮನೆಗೆ ತೆರಳಲು ಆಟೊ ಏರಿದ್ದಳು. ಮಾರ್ಗದಲ್ಲಿ ಅಮಲು ಬರಿಸುವ ಅಂಶ ಮಿಶ್ರಣ ಮಾಡಿದ್ದ ನೀರನ್ನು ಆಟೊ ಚಾಲಕ ನೀಡಿದ್ದ ಬಳಿಕ ಪ್ರಜ್ಞೆ ತಪ್ಪಿದ್ದ ವಿದ್ಯಾರ್ಥಿನಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕೃತ್ಯ ಎಸಗಿ, ಅಲ್ಲೇ ಬಿಟ್ಟು ಪರಾರಿಯಾಗಿದ್ದ.

'ಆರೋಪಿಯ ಪತ್ತೆಗೆ ಮಹಿಳಾ ಅಧಿಕಾರಿಯ ನೇತೃತ್ವದಲ್ಲಿ 11 ಸದಸ್ಯರ ತಂಡ ರಚಿಸಲಾಗಿದೆ' ಎಂದು ಜಿಲ್ಲಾ ಪೊಲೀಸ್  ವರಿಷ್ಠಾಧಿಕಾರಿ ಧನಂಜಯ್ ಹೇಳಿದ್ದಾರೆ.

BREAKING NEWS
Loading latest news...
Join our WhatsApp Channel Powered By : Online Pudu