ಲೈಂಗಿಕ ಕಿರುಕುಳ ನೀಡಿದ ಕಾಮುಕನಿಗೆ ನಡುರಸ್ತೆಯಲ್ಲಿಯೇ ಬಾಲಕಿಯಿಂದ ಬೆಲ್ಟ್‌ನಲ್ಲಿ ಥಳಿತ: ವಿಡಿಯೋ ವೈರಲ್


ಹೈದರಾಬಾದ್: ಇತ್ತಿಚೆಗೆ ಲೈಂಗಿಕ ಕಿರುಕುಳ ಪ್ರಕರಣಗಳು ಹೆಚ್ಚಾಗುತ್ತಿವೆ. ಸದ್ಯ ಲೈಂಗಿಕ ಕಿರುಕುಳ ನೀಡಿರುವ ಕಾಮುಕನನ್ನು ಶಾಲಾ ಬಾಲಕಿಯೊಬ್ಬಳು ಬೆಲ್ಟ್‌ ನಿಂದ ಥಳಿಸುತ್ತಿರುವ ವಿಡಿಯೋ ವೈರಲ್ ಆಗಿದೆ.

ಈ ಘಟನೆ ಅಹ್ಮದಾಬಾದ್‌ನಲ್ಲಿ ನಡೆದಿದೆ ಎನ್ನಲಾಗಿದೆ. ನಡುರಸ್ತೆಯಲ್ಲಿಯೇ ಬಾಲಕಿ ಯುವಕನಿಗೆ ಮನಬಂದಂತೆ ಬೆಲ್ಸ್‌ನಲ್ಲಿ ಥಳಿಸಿದ್ದಾಳೆ. ಈತ ಕೆಲದಿನಗಳಿಂದ ಬಾಲಕಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ಇದರಿಂದ ರೋಸಿಹೋಗಿದ್ದ ವಿದ್ಯಾರ್ಥಿನಿ ಆತನಿಗೆ ಮನಸೋಇಚ್ಚೆ ಥಳಿಸಿದ್ದಾಳೆ. 

ಇದೀಗ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಾಮೆಂಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಲೈಂಗಿಕ ಕಿರುಕುಳ ನೀಡುವವರನ್ನು ಇದೇ ರೀತಿ ನಡು ರಸ್ತೆಯಲ್ಲೇ ಅವಮಾನಿಸಬೇಕು, ಮಹಿಳೆಯರು ಯಾವತ್ತೂ ಮಾನ ಮಾರ್ಯದೆಗೆ ಅಂಜಿ ಹಿಂಜರಿಯಬಾರದು” ಎಂದು ಕಾಮೆಂಟ್ ಹಾಕುತ್ತಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu