ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿ ಗದ್ದೆಗೆ ಬಿದ್ದ ಬಸ್



ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿದ ಬಸ್ಸೊಂದು ನೇರವಾಗಿ ಗದ್ದೆಗಿಳಿದ ಘಟನೆ ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ಕೊಟ್ಟುಂಜದಲ್ಲಿ ನಡೆದಿದೆ.

ಸರಪಾಡಿ- ಬಿ.ಸಿ.ರೋಡು ನಡುವೆ ಸಂಚರಿಸುವ ಖಾಸಗಿ ಬಸ್ಸು ಕೊಟ್ಟುಂಜಕ್ಕೆ ಬರುತ್ತಿತ್ತು. ಈ ವೇಳೆ ವಿಪರೀತ ಮಳೆ ಸುರಿಯುತ್ತಿತ್ತು. ಪರಿಣಾಮ ಚಾಲಕನಿಗೆ ರಸ್ತೆ ಕಾಣಿಸದೆ ನಿಯಂತ್ರಣ ತಪ್ಪಿದ ಬಸ್ ನೇಜಿ ನಾಟಿ ಮಾಡಿದ್ದ ಗದ್ದೆಗೆ ಬಿದ್ದಿದೆ. ಆದರೆ ಬಸ್‌ನಲ್ಲಿದ್ದ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಆದರೆ ಬಸ್ ಬಿದ್ದು ಭತ್ತದ ಕೃಷಿಗೂ ಹಾನಿಯಾಗಿದೆ.

BREAKING NEWS
Loading latest news...
Join our WhatsApp Channel Powered By : Online Pudu