-->
ವಾಹನ ಚಾಲನಕಾರೆ ಇಲ್ಲಿ ಗಮನಿಸಿ

ವಾಹನ ಚಾಲನಕಾರೆ ಇಲ್ಲಿ ಗಮನಿಸಿ


 
ಬೆಂಗಳೂರು:  ಭದ್ರತೆ ಜೊತೆ ಸುರಕ್ಷತೆಯ  ದೃಷ್ಟಿಯಿಂದ ದೇಶದ ಎಲ್ಲಾ ವಾಹನಗಳಿಗೆ HSRP ನಂಬರ್ ಪ್ಲೇಟ್ ಕಡ್ಡಾಯವಾಗಿ ಅಳವಡಿಸಬೇಕೆಂದು ಸರ್ಕಾರ ಕಳೆದ ವರ್ಷದ ಹೊರಡಿಸಿತ್ತು.ಆದರೂ ಇನ್ನೂ ಅನೇಕ ವಾಹನ ಮಾಲೀಕರು ಇನ್ನೂ ಕೂಡ ನಂಬರ್ ಪ್ಲೇಟ್ ಬದಲಿಸುವ ಗೋಜಿಗೆ ಹೋಗಿಲ್ಲ. ಈ‌ ಹಿಂದೆ ಒಂದು ಬಾರಿ ಗಡುವು ನೀಡಿ ಮತ್ತೆ ಸರ್ಕಾರ ಜೂನ್ 12 ರಂದು ಅಂತಿಮ ಗಡುವು ನೀಡಿದೆ. ಅಂದರೆ ನಾಳೆಯೊಳಗೆ ವಾಹನ ಸವಾರರು ಹೊಸ ನಂಬರ್ ಪ್ಲೇಟ್ ಅಳವಡಿಕೆ ಮಾಡಿಸಿಕೊಳ್ಳದಿದ್ದಲ್ಲಿ‌ ಸಾರಿಗೆ ಇಲಾಖೆ ದಂಡ  ಪ್ರಯೋಗಿಸಲಿದೆ.

2019 ಕ್ಕಿಂತ ಮೊದಲು ನೋಂದಣಿಯಾದ ಎಲ್ಲಾ ವಾಹನಗಳಿಗೆ ಸಾರಿಗೆ ಇಲಾಖೆ HSRP ಕಡ್ಡಾಯ ರೂಲ್ಸ್ ಜಾರಿ ಮಾಡಿದೆ ಅದರೂ ಯಾರು ಕೂಡ ಕೇರ್ ಮಾಡುತ್ತಿಲ್ಲ 
ಹೀಗಾಗಿ HSRP ನಂಬರ್ ಪ್ಲೇಟ್ ಆಳವಡಿಕೆಗೆ ಜೂನ್12 ಕ್ಕೆ ಅಂತಿಮ ಡೆಡ್ಲೈನ್ ನೀಡಲಾಗಿದೆ.
ಜೂನ್ 12 ವರೆಗೆ HSRP ನಂಬರ್ ಪ್ಲೇಟ್ ಆಳವಡಿಕೆ ಮಾಡದ ವಾಹನ ಸವಾರರ ಮೇಲೆ ಕ್ರಮವಿಲ್ಲ ಎಂದು ಸಾರಿಗೆ ಇಲಾಖೆ ಹೇಳಿತ್ತು.
 ಆದರೆ, ಇದೀಗ HSRP ನಂಬರ್ ಪ್ಲೇಟ್ ಆಳವಡಿಕೆ ಅವಧಿ ಮತ್ತೆ ವಿಸ್ತರಣೆಯಿಲ್ಲ, ಡೆಡ್ಲೈನ್ ನೀಡಿದ್ರೂ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ ಆಳವಡಿಸದ ವಾಹನ ಸವಾರರ ಮೇಲೆ RTO ಅಧಿಕಾರಗಳು ದಂಡ ವಿಧಿಸಲಿದ್ದಾರೆ.
 ಇಲ್ಲಿಯವರೆಗೆ ರಾಜ್ಯದಲ್ಲಿ ಇಲ್ಲಿಯವರೆಗೆ 35 ಲಕ್ಷ ವಾಹನಗಳಿಗೆ ಮಾತ್ರ HSRP ನಂಬರ್ ಪ್ಲೇಟ್ ಆಳವಡಿಕೆ ಮಾಡಲಾಗಿದೆ. ಇನ್ನೂ 1.54 ಕೋಟಿ ವಾಹನಗಳಿಗೆ ನಂಬರ್ ಪ್ಲೇಟ್ ಆಳವಡಿಸಬೇಕಿದೆ.
ಈಗಾಗಲೇ ಸಾರಿಗೆ ಇಲಾಖೆ ಮೂರು ಬಾರಿ ಡೆಡ್ಲೈನ್ ವಿಸ್ತರಣೆ ಮಾಡಿದೆ. ಇದೀಗ HSRP ನಂಬರ್ ಪ್ಲೇಟ್ ಆಳವಡಿಕೆಗೆ ಒಂದು ದಿನವಷ್ಟೇ ಬಾಕಿ ಇದೆ. ಆದ್ರೂ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಆಳವಡಿಕೆಗೆ ವಾಹನ ಸವಾರರು ಆಸಕ್ತಿ ತೋಡುತ್ತಿಲ್ಲ. ಜೂನ್ 13 ರಿಂದ ನಂಬರ್ ಪ್ಲೇಟ್ ಆಳವಡಿಸಿಕೊಳ್ಳದ ವಾಹನ ಸವಾರರಿಗೆ ಭಾರೀ ಶಾಕ್ ಕಾದಿದೆ.

Ads on article

Advertise in articles 1

advertising articles 2

Advertise under the article