-->
1000938341
ನಾಲ್ಕು ವರ್ಷದ ಪ್ರೇಮ ವಿವಾಹಕ್ಕೆ ಬ್ರೇಕ್: ಬಿಗ್ ಬಾಸ್ ಜೋಡಿ ಡೈವರ್ಸ್‌- ಚಂದನ್ ಶೆಟ್ಟಿಗೆ ವಿಚ್ಚೇದನ ನೀಡಿದ ನಿವೇದಿತಾ

ನಾಲ್ಕು ವರ್ಷದ ಪ್ರೇಮ ವಿವಾಹಕ್ಕೆ ಬ್ರೇಕ್: ಬಿಗ್ ಬಾಸ್ ಜೋಡಿ ಡೈವರ್ಸ್‌- ಚಂದನ್ ಶೆಟ್ಟಿಗೆ ವಿಚ್ಚೇದನ ನೀಡಿದ ನಿವೇದಿತಾ

ನಾಲ್ಕು ವರ್ಷದ ಪ್ರೇಮ ವಿವಾಹಕ್ಕೆ ಬ್ರೇಕ್: ಬಿಗ್ ಬಾಸ್ ಜೋಡಿ ಡೈವರ್ಸ್‌- ಚಂದನ್ ಶೆಟ್ಟಿಗೆ ವಿಚ್ಚೇದನ ನೀಡಿದ ನಿವೇದಿತಾ

ಚಿತ್ರರಂಗದಲ್ಲಿ ಕ್ಯೂಟ್ ಜೋಡಿ ಎನಿಸಿಕೊಂಡಿರುವ ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಅವರು ವಿಚ್ಛೇದನ ಪಡೆದುಕೊಳ್ಳುತ್ತಿದ್ದಾರೆ ಎಂದು ವರದಿ ಆಗಿದೆ. 


ವೃತ್ತಿಜೀವನದ ಒಳಿತಿನ ದೃಷ್ಟಿಯಿಂದ ಅವರು ಡಿವೋರ್ಸ್ ಪಡೆಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ. ಇಂದೇ ಅವರು ಡಿವೋರ್ಸ್ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳುವುದು ಬಾಕಿ ಇದೆ.

ಕರಿಯರ್ ದೃಷ್ಟಿಯಿಂದ ಪರಸ್ಪರ ಒಪ್ಪಿಗೆ ಮೂಲಕ ವಿಚ್ಛೇದನ ಪಡೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ಇಂದು ಶಾಂತಿನಗರ ಕೋರ್ಟ್ ನಲ್ಲಿ ದಂಪತಿ ವಿಚ್ಛೇದನ ಪಡೆದುಕೊಳ್ಳಲಿದ್ದಾರೆ ಎನ್ನಲಾಗಿದೆ. ಬಿಗ್‌ಬಾಸ್‌ನಲ್ಲಿ ಇಬ್ಬರು ಪರಸ್ಪರ ಭೇಟಿಯಾಗಿದ್ದು. ಆಮೇಲೆ ಮದುವೆ ಕೂಡ ಆದ್ರು. 

ಮದುವೆಯಾದ ಹೊಸತರಲ್ಲಿ ಇವರಿಬ್ಬರ ರೀಲ್ಸ್ ಕೂಡ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

ಇತ್ತ ಚಂದನ್ ಶೆಟ್ಟಿ ಸಂಗೀತದ ಜೊತೆಗೆ ಸಿನಿಮಾಗಳಲ್ಲಿ ಆ್ಯಕ್ಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಅತ್ತ ನಿವೇದಿತಾ ಗೌಡ ಕಾಮಿಡಿ ಶೋಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಡಿವೋರ್ಸ್ ಸುದ್ದಿ ಫ್ಯಾನ್ಸ್‌ ಗೆ ಶಾಕ್ ಉಂಟುಮಾಡಿದೆ.

ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯ ಈ ದಂಪತಿಯ ವಿಚ್ಚೇದನ ಪ್ರಕಟಿಸಿದೆ ಎನ್ನಲಾಗಿದೆ. ನ್ಯಾಯಾಲಯದಿಂದ ಹೊರ ಬರುವಾಗಲೂ ಈ ಜೋಡಿ ಕೈಕೈ ಹಿಡಿದುಕೊಂಡೇ ಬಂದಿರುವುದು ಮತ್ತೊಂದು ಸೋಜಿಗವಾಗಿದೆ.


ಯಾವ ಕಾರಣಕ್ಕೆ ಈ ಜೋಡಿ ವಿಚ್ಚೇದನ ಪಡೆದುಕೊಂಡರು ಎಂಬುದು ಗಾಂಧಿನಗರದ ಪಂಡಿತರಲ್ಲಿ ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ.


Ads on article

Advertise in articles 1

advertising articles 2

Advertise under the article