ಸ್ಕೂಟರ್ ನಲ್ಲಿ ಸಂಚರಿಸಿ DC ಯಿಂದ ಕಲ್ಲಡ್ಕದಲ್ಲಿ ಹೆದ್ದಾರಿ ಪರಿಶೀಲನೆ

 



ಮಂಗಳೂರು: ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರು ಬುಧವಾರ ಕಲ್ಲಡ್ಕ ಕ್ಕೆ ಭೇಟಿ ನೀಡಿ ಸ್ಕೂಟರ್ ನಲ್ಲಿ ಸಂಚರಿಸಿ ರಾಷ್ಟ್ರೀಯ ಹೆದ್ದಾರಿ ಪರಿಶೀಲನೆ ನಡೆಸಿದರು.

ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆ ನೀರು ಸರಾಗವಾಗಿ ಹರಿಯಲು ಚರಂಡಿ ನಿರ್ಮಾಣ, ಪಾದಾಚಾರಿಗಳು ದಾಟಲು ನಾಲ್ಕು ಕಡೆ ಕಾಲುದಾರಿ ನಿರ್ಮಾಣ, ತ್ಯಾಜ್ಯಗಳನ್ನು ತೆಗೆಯುವುದು ಹಾಗೂ ಹೆದ್ದಾರಿ ಸಮತಟ್ಟುಗೊಳಿಸಲು ನಿರಂತರವಾಗಿ ವೆಟ್ ಮಿಕ್ಸ್ ಹಾಕಲು  ಹೆದ್ದಾರಿ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.



ಜಿಲ್ಲಾಧಿಕಾರಿಗಳು ಸ್ವತಃ  ಸ್ಕೂಟರ್ ನಲ್ಲಿ ಸಂಚರಿಸಿ ಹೆದ್ದಾರಿ ಸ್ಥಿತಿಗತಿ ಖುದ್ದು ವೀಕ್ಷಿಸಿರುವುದು ಗಮನಸೆಳೆಯಿತು.



BREAKING NEWS
Loading latest news...
Join our WhatsApp Channel Powered By : Online Pudu