-->
1000938341
ನೀಟ್ ಯುಜಿ 2024: ಆಕಾಶ್ ಎಜುಕೇಶನಲ್ ಸರ್ವೀಸಸ್ ಲಿಮಿಟೆಡ್ (AESL)ನ ಮಂಗಳೂರು ಶಾಖೆಯ ಅಮನ್ ಅಬ್ದುಲ್ ಹಕೀಂ ಟಾಪ್ ಸ್ಕೋರರ್

ನೀಟ್ ಯುಜಿ 2024: ಆಕಾಶ್ ಎಜುಕೇಶನಲ್ ಸರ್ವೀಸಸ್ ಲಿಮಿಟೆಡ್ (AESL)ನ ಮಂಗಳೂರು ಶಾಖೆಯ ಅಮನ್ ಅಬ್ದುಲ್ ಹಕೀಂ ಟಾಪ್ ಸ್ಕೋರರ್

ಮಂಗಳೂರು :   ಪರೀಕ್ಷಾ ಪೂರ್ವಸಿದ್ಧತಾ ಸೇವೆಗಳ ಕ್ಷೇತ್ರದಲ್ಲಿ ರಾಷ್ಟ್ರದಲ್ಲೇ ಮುಂಚೂಣಿಯಲ್ಲಿರುವ ಆಕಾಶ್ ಎಜುಕೇಷನಲ್ ಸರ್ವೀಸಸ್ ಲಿಮಿಟೆಡ್ (AESL) ಸಂಸ್ಥೆಯ ಮಂಗಳೂರಿನ ಶಾಖೆಯ ಅಮನ್ ಅಬ್ದುಲ್ ಹಕೀಂ ಪ್ರತಿಷ್ಠಿತ NEET UG 2024 ಪರೀಕ್ಷೆಯಲ್ಲಿ 710 ಅಂಕಗಳೊಂದಿಗೆ ಕ್ರಮವಾಗಿ AIR 592 ಶ್ರೇಯಾಂಕ ಗಳಿಸಿ, ಅತ್ಯುತ್ತಮ ಸಾಧನೆ ಮಾಡಿದ್ದಾರೆ.  

ಈ ಗಮನಾರ್ಹ ಸಾಧನೆಯು ಹಕೀಂ ಅವರ ಕಠಿಣ ಪರಿಶ್ರಮ, ಸಮರ್ಪಣೆ ಮತ್ತು AESL ಒದಗಿಸಿದ ಉತ್ಕೃಷ್ಟ ಗುಣಮಟ್ಟದ ತರಬೇತಿಗೆ ಸಾಕ್ಷಿಯಾಗಿದೆ. ಈ ಪ್ರತಿಷ್ಠಿತ ಫಲಿತಾಂಶವನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಪ್ರಕಟಿಸಿದೆ.
ಹಕೀಂ ಅವರು ಜಾಗತಿಕವಾಗಿ ಕಠಿಣ ಪ್ರವೇಶ ಪರೀಕ್ಷೆಗಳಲ್ಲಿ ಒಂದು ಎಂದು ವ್ಯಾಪಕವಾಗಿ ಪರಿಗಣಿಸಲಾಗಿರುವ NEET ಗಾಗಿ ಪೂರ್ವಸಿದ್ಧತೆ ಮಾಡಿಕೊಳ್ಳಲು AESL ನ ತರಗತಿ ಕಾರ್ಯಕ್ರಮಗಳಿಗೆ ಪ್ರವೇಶ ಪಡೆದಿದ್ದರು. 

 ವಿಷಯಗಳನ್ನು ಸಮರ್ಪಕವಾಗಿ ಅರ್ಥಮಾಡಿಕೊಂಡು ಶಿಸ್ತಿನ ಅಧ್ಯಯನ ವೇಳಾಪಟ್ಟಿಯನ್ನು ಪಾಲಿಸಿರುವುದು ತಮ್ಮ ಯಶಸ್ಸಿಗೆ ಕಾರಣವೆಂದು ಬಣ್ಣಿಸಿದ್ದಾರೆ. "ಈ ಎರಡೂ ವಿಷಯಗಳಲ್ಲಿ ಆಕಾಶ್ ಸಂಸ್ಥೆಯು ಮಾಡಿರುವ ಸಹಾಯಕ್ಕೆ ನಾವು ಕೃತಜ್ಞರಾಗಿರುತ್ತೇನೆ. ಆದರೆ, AESL ನೀಡಿರುವ ವಿಷಯ ಮತ್ತು ತರಬೇತಿ ಇಲ್ಲದಿದ್ದರೆ ಈ ಅಲ್ಪಾವಧಿಯಲ್ಲಿ ನಾನು ವಿವಿಧ ವಿಷಯಗಳಲ್ಲಿ ಅನೇಕ ಪರಿಕಲ್ಪನೆಗಳನ್ನು ಗ್ರಹಿಸಲು ಸಾಧ್ಯವಾಗುತ್ತಿರಲಿಲ್ಲ" ಎಂದು ಹೇಳಿದ್ದಾರೆ.

ವಿದ್ಯಾರ್ಥಿಗಳ ಅಸಾಧಾರಣ ಸಾಧನೆಯ ಕುರಿತು ಹೆಮ್ಮೆ ವ್ಯಕ್ತಪಡಿಸಿ ಅವರನ್ನು ಅಭಿನಂದಿಸಿರುವ ಆಕಾಶ್ ಎಜುಕೇಷನಲ್ ಸರ್ವೀಸಸ್ ಲಿಮಿಟೆಡ್ (AESL) ಸಂಸ್ಥೆಯ ಮುಖ್ಯ ಶೈಕ್ಷಣಿಕ ಮತ್ತು ವ್ಯವಹಾರ ಮುಖ್ಯಸ್ಥರಾದ ಧೀರಜ್ ಕುಮಾರ್ ಮಿಶ್ರಾ ಅವರು,  "ಈ ವಿದ್ಯಾರ್ಥಿಯ ಅಮೋಘ ಸಾಧನೆಗಾಗಿ ನಾವು ಅಭಿನಂದಿಸುತ್ತೇವೆ. ದೇಶದೆಲ್ಲೆಡೆಯ 20 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು NEET 2024 ಪರೀಕ್ಷೆಗೆ ಹಾಜರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನಮ್ಮ ಈ ವಿದ್ಯಾರ್ಥಿಯ ಸಾಧನೆಯು ಅವರ ಕಠಿಣ ಪರಿಶ್ರಮ ಮತ್ತು ಸಮರ್ಪಣೆ ಮತ್ತು ಅವರ ಹೆತ್ತವರ ಬೆಂಬಲವನ್ನು ಬಣ್ಣಿಸುತ್ತದೆ. ನಮ್ಮ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಮಾಡುವ ಎಲ್ಲ ಪ್ರಯತ್ನಗಳಿಗೆ ನಾವು ಶುಭ ಹಾರೈಸುತ್ತೇವೆ" ಎಂದರು.

ಭಾರತದಲ್ಲಿ ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ವೈದ್ಯಕೀಯ (MBBS), ದಂತ ವೈದ್ಯಕೀಯ (BDS) ಮತ್ತು ಆಯುಷ್ - AYUSH (BAMS, BUMS, BHMS, ಇತ್ಯಾದಿ) ಪದವಿಗಳಿಗೆ ಪ್ರವೇಶ ಪಡೆಯಲು ಹಾಗೂ ವಿದೇಶದಲ್ಲಿ ಪ್ರಾಥಮಿಕ ವೈದ್ಯಕೀಯ ಅರ್ಹತೆಯನ್ನು ಪಡೆಯಲು ಬಯಸುವ ವಿದ್ಯಾರ್ಥಿಗಳಿಗಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಪ್ರತಿ ವರ್ಷವೂ ಅರ್ಹತಾ ಪರೀಕ್ಷೆಯಾಗಿ NEET ಅನ್ನು ನಡೆಸುತ್ತದೆ.

ಈ ವೇಳೆ ಸಹಾಯಕ ನಿರ್ದೇಶಕ ಶ್ಯಾಮ ಪ್ರಸಾದ,ಬ್ರಾಂಚ್ ಹೆಡ್ ವಿಶ್ವನಾಥ, ಟಾಪರ್ ಸ್ಟೂಡೆಂಟ್ ಅಮನ್ ಅಬ್ದುಲ್ ಹಕೀಮ್ ,ಸೆಕೆಂಡ್ ಟಾಪರ್ ಸಿಂಚನ ಇದ್ದರು

Ads on article

Advertise in articles 1

advertising articles 2

Advertise under the article