ಪುತ್ರಿಯ ಮೇಲೇ ಕಣ್ಣು ಹಾಕಿದ್ದ ಪತಿಯನ್ನು ಜೈಲಿಗಟ್ಟಿ, ಮಕ್ಕಳಿಬ್ಬರನ್ನು ಕೊಂದ ಮಹಿಳೆ ಜೈಲಿನಲ್ಲಿ ಆತ್ಮಹತ್ಯೆಗೆ ಶರಣು


ಬೆಂಗಳೂರು: ಮಕ್ಕಳಿಬ್ಬರನ್ನು ಕೊಲೆಗೈದು ಜೈಲು ಪಾಲಾಗಿದ್ದ ಮಹಿಳೆಯೊಬ್ಬಳು ಪರಪ್ಪನ ಅಗ್ರಹಾರ ಜೈಲಿನಲ್ಲಿ ಸೀರೆಯಿಂದ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

ಗಂಗಾದೇವಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. 

ಎ.8ರ ರಾತ್ರಿ ತನ್ನಿಬ್ಬರು ಮಕ್ಕಳನ್ನು ಉಸಿರು ಕಟ್ಟಿಸಿ ಗಂಗಾದೇವಿ ಕೊಲೆಗೈದಿದ್ದಳು. ಮರುದಿನ ಬೆಳಗ್ಗೆ 112ಕ್ಕೆ ಕರೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಳು. ತಕ್ಷಣ ಸ್ಥಳಕ್ಕೆ ದೌಢಾಯಿಸಿದ್ದ ಪೊಲೀಸರು ಗಂಗಾದೇವಿಯನ್ನು ವಶಕ್ಕೆ ಪಡೆದಿದ್ದರು. ವಿಚಾರಣೆಯ ಬಳಿಕ ಆಕರಯನ್ನು ಪರಪ್ಪನ ಅಗ್ರಹಾರ ಜೈಲಿಗೆ ಸ್ಥಳಾಂತರಿಸಲಾಗಿತ್ತು. ಇದೀಗ, ಆರೋಪಿತೆ ಗಂಗಾದೇವಿ ಜೈಲಿನಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಆಂಧ್ರಪ್ರದೇಶ ಮೂಲದ ಗಂಗಾದೇವಿ ಪತಿಯೊಂದಿಗೆ ಬೆಂಗಳೂರಿನ ಜಾಲಹಳ್ಳಿಯಲ್ಲಿ ವಾಸವಾಗಿದ್ದಳು. ಆಕೆಯ ಪತಿಯು ಪುತ್ರಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದ ಎಂದು ಸ್ವತಃ ಗಂಗಾದೇವಿಯೇ ಪತಿಯ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಆದ್ದರಿಂದ ಇತ್ತೀಚೆಗೆ ಆತ ಪೊಕ್ಸೊ ಕೇಸ್‌ನಲ್ಲಿ ಬಂಧಿತನಾಗಿ ಜೈಲಿನಲ್ಲಿದ್ದಾನೆ. 
ಎಪ್ರಿಲ್ 8ರಂದು ರಾತ್ರಿ ತನ್ನ ಪುತ್ರಿ ಲಕ್ಷ್ಮೀ (9) ಹಾಗೂ ಪುತ್ರ ಗೌತಮ್ (7) ನನ್ನು ಗಂಗಾದೇವಿ ತಾನೇ ಕೊಲೆ ಮಾಡಿದ್ದಳು. ಮಹಿಳೆಯನ್ನು ಜಾಲಹಳ್ಳಿ ಪೊಲೀಸರು ಆರೆಸ್ಟ್ ಮಾಡಿದ್ದರು. ಇದೀಗ ಆಕೆ ಜೈಲಿನಲ್ಲೇ ನೇಣಿಗೆ ಶರಣಾಗಿದ್ದಾಳೆ.
BREAKING NEWS
Loading latest news...
Join our WhatsApp Channel Powered By : Online Pudu