-->

ಬಂಧನದ ಭೀತಿ ಹಿನ್ನೆಲೆ ಸುಪ್ರೀಂ ಕೋರ್ಟ್ ಮೇಲೇರಿದ್ದ ರಾಖಿ ಸಾವಂತ್ ಅರ್ಜಿ ತಿರಸ್ಕಾರ : ಮಾಜಿ ಪತಿ ಆದಿಲ್ ಗೆ ಗೆಲುವು

ಬಂಧನದ ಭೀತಿ ಹಿನ್ನೆಲೆ ಸುಪ್ರೀಂ ಕೋರ್ಟ್ ಮೇಲೇರಿದ್ದ ರಾಖಿ ಸಾವಂತ್ ಅರ್ಜಿ ತಿರಸ್ಕಾರ : ಮಾಜಿ ಪತಿ ಆದಿಲ್ ಗೆ ಗೆಲುವು


ಮುಂಬೈ: ಬಾಲಿವುಡ್ ನ ವಿವಾದಾತ್ಮಕ ನಟಿ ಮತ್ತು ಬಿಗ್ ಬಾಸ್ ಖ್ಯಾತಿಯ ರಾಖಿ ಸಾವಂತ್ ಬಂಧನದ ಭೀತಿ ಎದುರಿಸುತ್ತಿದ್ದಾರೆ. ಆಕೆ ತನ್ನ ಮಾಜಿ ಪತಿ ಆದಿಲ್‌ ಖಾನ್‌ರ ಖಾಸಗಿ ವೀಡಿಯೋ ಸೋರಿಕೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಆಕೆ ಸಲ್ಲಿಸಿದ್ದ ನಿರೀಕ್ಷಣಾ ಪರಿಹಾರ ಅರ್ಜಿಯನ್ನು ತಿರಸ್ಕರಿಸಿದೆ. ಈ ಹಿಂದೆ ಆದಿಲ್ ಖಾನ್ ದುರಾನಿ ತನ್ನ ಅಶ್ಲೀಲ ವೀಡಿಯೋಗಳನ್ನು ರಾಖಿ ಸಾವಂತ್ ಪ್ರಸಾರ ಮಾಡಿದ್ದರು ಎಂದು ಆರೋಪಿಸಿದ್ದರು.

ಈ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಪಡೆಯಲು ಮತ್ತು ಸಂಭಾವ್ಯ ಬಂಧನದಿಂದ ತಪ್ಪಿಸಿಕೊಳ್ಳುವ ಸಲುವಾಗಿ ರಾಖಿ ಸಾವಂತ್, ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಇದೀಗ ಆಕೆ ಹಾಕಿಕೊಂಡಿದ್ದ ಲೆಕ್ಕಾಚಾರಗಳು ತಲೆಕೆಳಗಾಗಿದ್ದು, ಅರ್ಜಿ ತಿರಸ್ಕರಿಸಿದ ಕೋರ್ಟ್, ನಾಲ್ಕು ವಾರಗಳಲ್ಲಿ ಶರಣಾಗುವಂತೆ ನಟಿಗೆ ತಿಳಿಸಿದೆ. ಬಾಂಬೆ ಹೈಕೋರ್ಟ್ ಈ ಹಿಂದೆ ಆಕೆಯ ಮನವಿಯನ್ನು ವಜಾಗೊಳಿಸಿತ್ತು, ಈ ತೀರ್ಪನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲು ರಾಖಿಗೆ ಹೇಳಲಾಗಿತ್ತು. ಅದರಂತೆಯೇ ಮಾಡಿದ ಸಾವಂತ್‌ಗೆ ಇದೀಗ ಭಾರೀ ಮುಖಭಂಗ ಎದುರಾಗಿದೆ.

ಮಾಜಿ ಪತಿ ಆದಿಲ್ ರಾಖಿ ವಿರುದ್ಧ ದೂರು ಸಲ್ಲಿಸಿದ ನಂತರ ಈ ಗೊಂದಲ ಸೃಷ್ಟಿಯಾಯಿತು. ತನ್ನ ಖಾಸಗಿ, ಲೈಂಗಿಕ-ಅಶ್ಲೀಲ ವೀಡಿಯೊಗಳನ್ನು ಆನ್‌ಲೈನ್‌ನಲ್ಲಿ ಪ್ರಸಾರ ಮಾಡಿದ್ದಾರೆ ಎಂದು ಆದಿಲ್‌ ಆರೋಪಿಸಿದ್ದರು. ರಾಖಿ ಮತ್ತು ಆದಿಲ್ 2022ರಲ್ಲಿ ವಿವಾಹವಾದರು ಎಂದು ಮೂಲಗಳು ತಿಳಿಸಿವೆ. ಆದರೆ, 2023ರ ಜನವರಿಯಲ್ಲಿ ನಟಿ ತಾನು ಮದುವೆಯಾದ ಬಗ್ಗೆ ಅಧಿಕೃತವಾಗಿ ಘೋಷಿಸಿದ್ದರು.

Ads on article

Advertise in articles 1

advertising articles 2

Advertise under the article