-->
1000938341
ನಿಮ್ಮ ಫೋನ್ ಹ್ಯಾಂಗ್ ಆಗುತ್ತಿದ್ಯಾ? ಸ್ಲೋ ಆಗಿದ್ಯಾ? ಹಾಗಿದ್ದರೆ ಹೀಗೆ ಮಾಡಿ!

ನಿಮ್ಮ ಫೋನ್ ಹ್ಯಾಂಗ್ ಆಗುತ್ತಿದ್ಯಾ? ಸ್ಲೋ ಆಗಿದ್ಯಾ? ಹಾಗಿದ್ದರೆ ಹೀಗೆ ಮಾಡಿ!


ಸ್ಮಾರ್ಟ್ ಫೋನ್‌ಗಳು ಸಮಯ ಕಳೆದಂತೆ  ಸ್ಲೋ ಆಗುತ್ತಾ  ಹೋಗುತ್ತದೆ  . ಹೀಗಾಗಿ ಅವುಗಳು ಎಲ್ಲರ ಬದುಕಿನ ಭಾಗ ಎನಿಸಿವೆ. ಆದರೆ, ಕೆಲವೊಮ್ಮೆ ಸ್ಮಾರ್ಟ್ ಪೋನ್‌ಗಳು ಸ್ಲೋ ಆಗುತ್ತಾ ಹೋಗುತ್ತದೆ .


ಆದರೆ, ನಮ್ಮ ಆಂಡ್ರಾಯ್ಡ್ ಫೋನ್‌ನ್ನು ವೇಗಗೊಳಿಸಲು  ಕೆಲವೊಂದು ಮಾರ್ಗಗಳಿವೆ. ಇವುಗಳನ್ನು ಪಾಲಿಸಿಕೊಂಡು ಹೋದರೆ ಫೋನ್ ಸ್ಟೋ ಆಗುವ ಕಷ್ಟದಿಂದ ಕೊಂಚ ಮುಕ್ತಿ ಪಡೆಯುವ ಸಾಧ್ಯತೆ ಇರುತ್ತದೆ . 

ಸಾಫ್ಟ್‌ವೇರ್ ಅಪ್‌ಡೇಟ್ :
ನಿಮ್ಮ ಆಂಡ್ರಾಯ್ಡ್ ಫೋನ್ನ ಸಾಫ್ಟ್‌ವೇರ್ ಅನ್ನು ಅಪ್ ಡೇಟ್ ಮಾಡಿಟ್ಟುಕೊಳ್ಳಿ. ಸಿಸ್ಟಮ್ ಅಪ್‌ಡೇಟ್ ಅನ್ನು ಸೆಟ್ಟಿಂಗ್ ಸಾಫ್ಟ್‌ವೇರ್ ಅಪ್‌ಡೇಟ್‌ಗೆ ಹೋಗಿ ಚೆಕ್ ಮಾಡಿಕೊಳ್ಳಿ. ಇಲ್ಲಿ ಯಾವುದಾದರೂ ಅಪ್‌ಡೇಟ್‌ಗಳಿದ್ದರೆ ಇನ್‌ಸ್ಟಾಲ್ ಮಾಡಿಕೊಳ್ಳಿ.


ಫೋನ್ ರೀಸ್ಟಾರ್ಟ್ ಮಾಡಿ :
ವಾರಕ್ಕೆ ಒಮ್ಮೆಯಾದರೂ ನಿಮ್ಮ ಮೊಬೈಲ್ ಫೋನ್ ಅನ್ನು ರೀಸ್ಟಾರ್ಟ್ ಮಾಡುವ ಅಭ್ಯಾಸ ರೂಢಿಸಿಕೊಳ್ಳಿ ಫೋನ್ ರೀಸ್ಟಾರ್ಟ್ ಮಾಡುವುದರಿಂದ ಬ್ಯಾಕ್‌ಗೌಂಡ್ ಪ್ರೋಸೆಸ್‌ಗಳನ್ನು ನಿಲ್ಲಿಸುತ್ತದೆ. ಇದು ನಿಮ್ಮ ಡಿವೈಜ್ ಉತ್ತಮ ಕಾರ್ಯಕ್ಷಮತೆ ತೋರಿಸಲು ಸಹಾಯ ಮಾಡುತ್ತದೆ.


ಬ್ಯಾಕ್‌ಗೌಂಡ್ ಡಾಟಾ ಡಿಸೇಬಲ್ ಮಾಡಿ  :
ಹಲವು ಆಪ್‌ಗಳು ಸಕ್ರಿಯವಾಗಿ ಬಳಕೆಯಲ್ಲಿ ಇಲ್ಲದ ಸಂದರ್ಭದಲ್ಲೂ ಬ್ಯಾಕ್‌ಗೌಂಡ್ ಡಾಟಾವನ್ನು ಬಳಸಿಕೊಳ್ಳುತ್ತವೆ. ಹೀಗಾಗಿ, ಬ್ಯಾಕ್‌ಗೌಂಡ್ ಡಾಟಾಗಳನ್ನು ಡಿಸೇಬಲ್ ಮಾಡಿಟ್ಟುಕೊಳ್ಳುವುದು ಉತ್ತಮ. ಸೆಟ್ಟಿಂಗ್ > ಆಪ್ಸ್>(ಆಪ್ ಹೆಸರುಗಳಿರುತ್ತವೆ) > ಮೊಬೈಲ್ ಡಾಟಾ ಮತ್ತು ಇಲ್ಲಿ ನೀವು ಆಯ್ಕೆ ಮಾಡಿದ ಆಪ್‌ನ ಬ್ಯಾಕ್‌ಗೌಂಡ್ ಡಾಟಾ' ಆಯ್ಕೆಯನ್ನು ಡಿಸೇಬಲ್ ಮಾಡಿ.


ಕ್ಯಾಶೆ ಕ್ಲಿಯರ್ ಮಾಡಿ :
ದಿನ ಕಳೆದಂತೆ ಕ್ಯಾಶೆ ಡೇಟಾ ಸಂಗ್ರಹವಾಗುತ್ತಾ ಹೋಗುತ್ತದೆ. ಇದು ನಿಮ್ಮ ಫೋನನ್ನು ನಿಧಾನಗೊಳಿಸುತ್ತದೆ. ಹೀಗಾಗಿ ಕ್ಯಾಶೆ ಡೇಟಾ ಕ್ಲಿಯರ್ ಮಾಡುವುದು ಬಹಳ ಅಗತ್ಯ. ಅದಕ್ಕೆ ನೀವು ಸೆಟ್ಟಿಂಗ್‌ಗೆ > ಸ್ಟೋರೇಜ್ > ಕ್ಯಾಶೆಡ್ ಡೇಟಾಕ್ಕೆ ಹೋಗಿ ಕ್ಲಿಯರ್ ಮಾಡಬೇಕು. ಹೀಗೆ ಆಗಾಗ ಕ್ಯಾಶೆ ಡೇಟಾ ಕ್ಲಿಯರ್ ಮಾಡುತ್ತಿದ್ದರೆ ಮೆಮೋರಿ ಸ್ಪೇಸ್ ಫ್ರೀ ಆಗುತ್ತದೆ ಮತ್ತು ನಿಮ್ಮ ಡಿವೈಜ್‌ನ ಪರ್ಫಾರ್ಮೆನ್ಸ್ ಉತ್ತಮವಾಗುತ್ತದೆ.


ಫ್ಯಾಕ್ಟರಿ ರೀಸೆಟ್ ಮಾಡಿ :
ಈ ಎಲ್ಲಾ ಕ್ರಮಗಳ ಬಳಿಕವೂ ನಿಮ್ಮ ಫೋನ್ ಸೋ ಆಗುತ್ತಿದ್ದರೆ ಕೊನೆಗೆ ಇರುವ ಆಯ್ಕೆ ಫ್ಯಾಕ್ಟರಿ ರೀಸೆಟ್   mm    ಫ್ಯಾಕ್ಟರಿ ರೀಸೆಟ್‌ನಿಂದ ನಿಮ್ಮ ಪೋನ್ ಹೊಸ ಆರಂಭವನ್ನು ಪಡೆಯುತ್ತದೆ. ಆದರೆ ಒಂದು ಪ್ರಮುಖ ಸಂಗತಿಯನ್ನು ನೆನಪಿಡಿ.


ಫ್ಯಾಕ್ಟರಿ ರೀಸೆಟ್ ಮಾಡುವುದರಿಂದ ನಿಮ್ಮ ಮೊಬೈಲ್‌ನಲ್ಲಿ ಇರುವ ಎಲ್ಲಾ ಡೇಟಾಗಳು ಅಳಿಸಿ ಹೋಗುತ್ತವೆ. ಇದನ್ನು ಮರೆಯಬೇಡಿ. ಹೀಗಾಗಿ, ಫ್ಯಾಕ್ಟರಿ ರೀಸೆಟ್ ಮಾಡಬೇಕೆಂದು ಬಯಸಿದರೆ ಮೊದಲು ಅಗತ್ಯವಾದ ಫೈಲ್‌ಗಳು ಮತ್ತು ಕಾಂಟ್ಯಾಕ್ಟ್‌ಗಳ ಬ್ಯಾಕಪ್ ಮಾಡಿಟ್ಟುಕೊಳ್ಳಬಹುದು 

Ads on article

Advertise in articles 1

advertising articles 2

Advertise under the article