-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಬೇಸಿಗೆಯಲ್ಲಿ ಮಜ್ಜಿಗೆ ಸೇವನೆಯಿಂದ ದೊರಕುವ ಪ್ರಯೋಜನವೇನು

ಬೇಸಿಗೆಯಲ್ಲಿ ಮಜ್ಜಿಗೆ ಸೇವನೆಯಿಂದ ದೊರಕುವ ಪ್ರಯೋಜನವೇನು


ಮಜ್ಜಿಗೆ ಬೇಸಿಗೆಯ ದಣಿವನ್ನು ನೀಗಿಸಲು ಉತ್ತಮವಾಗಿದೆ. ಮಜ್ಜಿಗೆಯಲ್ಲಿ  ಮೊಸರಿನ ಗುಣಗಳೆಲ್ಲವೂ ಇರುತ್ತದೆ . ಇದರಲ್ಲಿ ಜೀರ್ಣಕ್ರಿಯೆಗೆ ಸಹಕರಿಸುವ
ಪೋಷಕಾಂಶಗಳು ಜೀರ್ಣಾಂಗಗಳ ಹೊರೆಯನ್ನು ಕಡಿಮೆ ಮಾಡುತ್ತವೆ. ಅಲ್ಲದೇ ಮಜ್ಜಿಗೆಯಲ್ಲಿ ಸೇರಿಸಿರುವ ಜೀರಿಗೆ ಪುಡಿ ಮೊದಲಾದ ಮಸಾಲೆ ಪದಾರ್ಥಗಳು ಜೀರ್ಣಕ್ರಿಯೆಗೆ ಇನ್ನಷ್ಟು ಸಹಕರಿಸಿ ಜೀರ್ಣಕ್ರಿಯೆಯನ್ನು ಸುಲಭ ಮತ್ತು ಪರಿಪೂರ್ಣಗೊಳಿಸುತ್ತವೆ

ದೇಹದ ತಾಪಮಾನವನ್ನು ತಣಿಸುತ್ತದೆ
ಬೇಸಿಗೆಯ ಬಿಸಿಯಲ್ಲಿ ದೇಹವನ್ನು ತಂಪಗಿಸಲು ಮಜ್ಜಿಗೆ ಸಹಾಯ ಮಾಡುತ್ತದೆ. ಅತಿ ಹೆಚ್ಚಿನ ಪ್ರಮಾಣದಲ್ಲಿ ಬೆವರು ಹರಿಯಬೇಕಾಗುತ್ತದೆ. ಆಗ ದೇಹದಿಂದ ನಷ್ಟವಾಗುವ ನೀರನ್ನು ಬೇಗನೇ ಭರ್ತಿಮಾಡಿಕೊಳ್ಳದೇ ಇದ್ದರೆ ದ್ರವದ ಪ್ರಮಾಣ ಕಡಿಮೆಯಾಗಿ ದೇಹ ಹೆಚ್ಚು ಬಿಸಿಯಾಗಲು ಕಾರಣವಾಗುತ್ತದೆ. ಮಜ್ಜಿಗೆಯ ಸೇವನೆ ಈ ತೊಂದರೆಯಿಂದ ತಡೆಯುತ್ತದೆ ಹಾಗೂ ದೇಹವನ್ನು ತಂಪಾಗಿಡಲು ನೆರವಾಗುತ್ತದೆ.

ಹೊಟ್ಟೆ ಉಬ್ಬರಿಕೆ ಮೊದಲಾದ ಸಮಸ್ಯೆಗೆ ರಾಮಬಾಣ
ಆಹಾರದಲ್ಲಿ ಹೆಚ್ಚಿನ ಪ್ರಮಾಣದ ಮಸಾಲೆ ಹೊಟ್ಟೆ ಸೇರುವುದರಿಂದ ಇವು ಹೊಟ್ಟೆಯಲ್ಲಿ ಉರಿ, ಆಮ್ಮಿಯತೆ ಮೊದಲಾದ ತೊಂದರೆಗಳನ್ನು ಉಂಟುಮಾಡಬಹುದು. ಆದರೆ ಹಾಲಿನಲ್ಲಿರುವ ಪ್ರೋಟೀನುಗಳು ಮಜ್ಜಿಗೆಯಲ್ಲಿಯೂ ಇದ್ದು ಈ ಉರಿ ತರಿಸುವ ಮಸಾಲೆಗಳನ್ನು ತಟಸ್ಥವಾಗಿಸುತ್ತವೆ. ಆದ್ದರಿಂದ ಊಟದ ಕಡೆಯ ಆಹಾರವಾಗಿ ಮಜ್ಜಿಗೆಯನ್ನು ಸೇವಿಸುವ ಮೂಲಕ ಮಸಾಲೆಗಳ ಕಾರಣ ಎದುರಾಗಬಹುದಾಗಿದ್ದ ಉರಿ, ಆಮ್ಮಿಯತೆ, ಹೊಟ್ಟೆ ಉಬ್ಬರಿಕೆ ಮೊದಲಾದವು ಕಡಿಮೆಯಾಗುತ್ತದೆ.

ರಕ್ತದೊತ್ತಡ ನಿವಾರಣೆಗೆ
ನಿತ್ಯವೂ ಮಜ್ಜಿಗೆಯನ್ನು ಸೇವಿಸುವ ಮೂಲಕ ರಕ್ತದೊತ್ತಡವನ್ನು  ತಡೆಯುತ್ತದೆ. ಹಾಗೂ ದೇಹಕ್ಕೆ ಹಲವು ರೀತಿಯ ಲಾಭಗಳಿವೆ.

Ads on article

Advertise in articles 1

advertising articles 2

Advertise under the article

ಸುರ