ರೆಸಾರ್ಟ್ ಗೆ ಬಂದಿದ್ದ ಬಾಲಕ ಸ್ವಿಮ್ಮಿಂಗ್ ಫೂಲ್ ಗೆ ಬಿದ್ದು ದುರ್ಮರಣ


ಕುಂದಾಪುರ: ಖಾಸಗಿ ರೆಸಾರ್ಟೊಂದರಲ್ಲಿನ ಸ್ವಿಮ್ಮಿಂಗ್ ಫೂಲ್ ನಲ್ಲಿ ಮುಳುಗಿ ಹತ್ತು ವರ್ಷದ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ಕುಂದಾಪುರ ತಾಲೂಕಿನ ಹೆಂಗವಳ್ಳಿ ಎಂಬಲ್ಲಿ ನಡೆದಿದೆ. 

ಹೂಡೆ ನಿವಾಸಿ ಮುಹಮ್ಮದ್ ಅರೀಝ್ (10) ಮೃತಪಟ್ಟ ಬಾಲಕ.

ಹೂಡೆಯ ದಾರುಸ್ಸಲಾಮ್ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ 4ನೇ ತರಗತಿಯಲ್ಲಿ ಓದುತ್ತಿದ್ದ ಅರೀಝ್ ಬೇಸಿಗೆ ರಜೆಯ ಕಾರಣ ಕುಟುಂಬದೊಂದಿಗೆ ಹೆಂಗವಳ್ಳಿಯ ಖಾಸಗಿ ರೆಸಾರ್ಟ್ ಗೆ ತೆರಳಿದ್ದಾನೆ. ಈ ವೇಳೆ ರೆಸಾರ್ಟಿನ ಸ್ವಿಮಿಂಗ್ ಪೂಲ್ ನ ನೀರಿಗೆ ಮುಹಮ್ಮದ್ ಅರೀಝ್ ಬಿದ್ದಿದ್ದಾನೆ. ತೀವ್ರ ಅಸ್ವಸ್ಥಗೊಂಡಿದ್ದ ಮುಹಮ್ಮದ್‌ನನ್ನು ತಕ್ಷಣ ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಮುಹಮ್ಮದ್ ಕೊನೆಯುಸಿರೆಳೆದಿದ್ದಾನೆ. ಟಿನ್ ಟಾನ್ ಎನ್ವೆಂಚರ್ಸ್‌ ರೆಸಾರ್ಟ್ ವಿರುದ್ಧ ಪೋಷಕರು ದೂರು ದಾಖಲಿಸಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu