ಮಕ್ಕಳಿಗೆ ಬರುವ ಜ್ವರವನ್ನು ಕಡಿಮೆ ಮಾಡುವ ಮನೆಮದ್ದು ಬಗ್ಗೆ ನಿಮಗೆ ಗೊತ್ತಾ


ವಾತಾವರಣದಲ್ಲಿ ಆಗುವ ಬದಲಾವಣೆಯ ಜೊತೆ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿಯ ಕೊರತೆಯಿಂದ ಪದೇ ಪದೇ ಮಕ್ಕಳ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ  ಆಗ ಪೋಷಕರು ಮಕ್ಕಳನ್ನು ವೈದ್ಯರ ಬಳಿ ಕರೆದುಕೊಂಡು ಹೋಗುತ್ತಾರೆ  ಆಗ ವೈದ್ಯರು ನೀಡುವ ಆಂಟಿಬಯೋಟಿಕ್  ಮಗುವಿಗೆ ದೀರ್ಘಕಾಲದ ಸಮಸ್ಯೆಗೆ ಕಾರಣ ಆಗುತ್ತದೆ ಆದ ಕಾರಣ ಆಂಟಿಬಯೋಟಿಕ್ ನ್ನು ಬಳಸುವ ಮೊದಲು ಯೋಚನೆ ಮಾಡಿ. ಆದಷ್ಟು ಮನೆ ಮದ್ದು ಬಳಸುವ ಪ್ರಯತ್ನ ಮಾಡಿ . ಮನೆಮದ್ದು ತಯಾರಿಸುವ ಬಗ್ಗೆ ಇಲ್ಲಿದೆ ಮಾಹಿತಿ

* ಸಾಸಿವೆ ಎಣ್ಣೆ ಬಿಸಿ ಮಾಡಿ ಅದಕ್ಕೆ 2-3 ಬೆಳ್ಳುಳ್ಳಿ, ಲವಂಗ, ಓಂಕಾಳನ್ನು ಸೇರಿಸಿ ಇದನ್ನು ಮಗುವಿನ ಕಾಲು ಬೆನ್ನು ಮತ್ತು ಎದೆಗೆ ಉಜ್ಜಿ.

*ನೀರನ್ನು ಸಾಕಷ್ಟು ಪ್ರಮಾಣದಲ್ಲಿ ಕುಡಿಸಿ. ಇದರಿಂದ ರಕ್ತದಲ್ಲಿರುವ ಬ್ಯಾಕ್ಟಿರಿಯಾಗಳು ಮೂತ್ರದ ಮೂಲಕ ಹೊರಹೋಗುತ್ತವೆ.
* ನೀರಿಗೆ ಉಪ್ಪು ಮಿಕ್ಸ್ ಮಾಡಿ ಬಾಯನ್ನು ಮುಕ್ಕಳಿಸಿ  ಇದರಿಂದ ಗಂಟಲಿನಲ್ಲಿರುವ ಬ್ಯಾಕ್ಟಿರಿಯಾಗಳು ಸಾಯುತ್ತದೆ.
*ಜ್ವರ ಅತೀಯಾಗಿದ್ದರೆ ತಜ್ಞ ವೈದ್ಯರನ್ನು ಸಂಪರ್ಕಿಸಿ.