ಕಣ್ಣಿನ ಉರಿಯನ್ನು ಕಡಿಮೆ ಮಾಡುವ ಮನೆಮದ್ದು ಯಾವುದೂ
Wednesday, March 20, 2024
ಕೆಲವು ಸಮಯದಲ್ಲಿ ಉಷ್ಣತೆಯ ಕಾರಣದಿಂದ ಕಣ್ಣು ಉರಿ ಬರುತ್ತದೆ ಅದಲ್ಲದೆ ಹೆಚ್ಚಾಗಿ ಕಂಪ್ಯೂಟರ್, ಲ್ಯಾಪ್ಟಾಪ್, ಟಿವಿ, ಮೊಬೈಲ್ ನೋಡುವ ಅಭ್ಯಾಸದಿಂದಲೂ ಕಣ್ಣು ಉರಿ ಬರತ್ತದೆ
ಕಣ್ಣಿನ ಉರಿ ಸಮಸ್ಯೆಯಿಂದ ಹೊರಬರಲು ಈ ಮನೆ ಮದ್ದುಗಳನ್ನು ಉಪಯೋಗಿಸಿ.
* ಕೊತ್ತಂಬರಿ ಬೀಜದ ಕಷಾಯ ಮಾಡಿ. ಅದರಲ್ಲಿ ಹತ್ತಿಯನ್ನು ಅದಿ, ಆ ಕಣ್ಣುಗಳ ಮೇಲೆ ಇಟ್ಟರೆ ಕಣ್ಣುಗಳ ಉರಿ ಕಡಿಮೆಯಾಗುತ್ತದೆ.
* ಗರಿಕೆಯನ್ನು ಪೇಸ್ಟ್ ಮಾಡಿ ಅದನ್ನು ರಾತ್ರಿ ಮಲಗುವ ಮುನ್ನ ಕಣ್ಣಿನ ರೆಪ್ಪೆ ಮೇಲೆ ಲೇಪ ಮಾಡಿ 1 ಗಂಟೆ ಬಿಟ್ಟು ತೊಳೆದರೆ ಕಣ್ಣು ಉರಿ ನಿವಾರಣೆಯಾಗುತ್ತದೆ.
* ನುಗ್ಗೆ ಸೊಪ್ಪನ್ನು ಅರೆದು ಸೋಸಿ ಆ ರಸವನ್ನು ಕಣ್ಣಿನ ರೆಪ್ಪೆ ಮೇಲೆ ಹಚ್ಚಿದರೆ ಕಣ್ಣುಗಳ ಉರಿ ಕಡಿಮೆಯಾಗುತ್ತದೆ.
* ಬೆಟ್ಟದ ನೆಲ್ಲಿಕಾಯಿ ಪುಡಿಗೆ ತುಪ್ಪ ಮತ್ತು ಬೆಚ್ಚಗಿನ ನೀರು ಸೇರಿಸಿ ಪ್ರತಿದಿನ ರಾತ್ರಿ ಕುಡಿದರೆ ಕಣ್ಣುಗಳ ಉರಿ ಕಡಿಮೆ ಆಗುತ್ತದೆ
* ಹೆಸರು ಕಾಳಿನ ಪುಡಿಯನ್ನು ನೀರಲ್ಲಿ ಕಲಸಿ ಮುಖ ಮತ್ತು ರೆಪ್ಪೆಗೆ ಲೇಪ ಮಾಡಿದರೆ ಕಣ್ಣುಗಳ ಉರಿ ಕಡಿಮೆಯಾಗುತ್ತದೆ.
* ಕಣ್ಣು ಉರಿ ಇದ್ದಾಗ ಬಸಳೆ ಸೊಪ್ಪಿನ ರಸಕ್ಕೆ ಬೆಣ್ಣೆ ಹಾಕಿ ಕಲಸಿ ಅದನ್ನು ಹತ್ತಿಯಲ್ಲಿ ಅದ್ದಿ ಕಣ್ಣುಗಳ ಮೇಲೆ ಇಡಬೇಕು.
* ಪೇರಳೆ ಮರದ ಹೂಗಳನ್ನು ದಾಳಿಂಬೆ ಚಿಗುರಿನ ಜೊತೆ ಕಷಾಯದಿಂದ ಕಣ್ಣುಗಳನ್ನು ತೊಳೆದರೆ ಕಣ್ಣುಗಳ ಉರಿ ಹೋಗುತ್ತದೆ
* ಶ್ರೀಗಂಧವನ್ನು ರೋಸ್ ವಾಟರ್‌ನಲ್ಲಿ ಕಲಸಿ ರೆಪ್ಪೆಗಳ ಮೇಲೆ ಹಚ್ಚಿ ಸ್ವಲ್ಪ ಹೊತ್ತಿನ ನಂತರ ತೊಳೆದರೆ ಕಣ್ಣುಗಳ ಉರಿ ಕಡಿಮೆಯಾಗುತ್ತದೆ.