ಪ್ರಖ್ಯಾತ ಫುಡ್ ಬ್ಲಾಗರ್ ನತಾಶಾ ದೀದಿ ನಿಧನ


ಪುಣೆ:  ಪ್ರಖ್ಯಾತ ಫುಡ್ ಬ್ಲಾಗರ್ ನತಾಶಾ ದೀದಿ (50) ಅಲ್ಪಕಾಲದ ಅಸೌಖ್ಯದಿಂದ ಪುಣೆಯಲ್ಲಿ ನಿಧನರಾಗಿದ್ದಾರೆ. ಬಾಣಸಿಗರಾಗಿದ್ದ ನತಾಶಾ ಮೃತಪಟ್ಟ ವಿಚಾರವನ್ನು ಅವರ ಪತಿ ಸಾಮಾಜಿಕ ಜಾಲತಾಣಗಳ ಮೂಲಕ ತಿಳಿಸಿದ್ದಾರೆ.

'ನನ್ನ ಪತ್ನಿ ನತಾಶಾ ದೀದಿ ಅವರ ನಿಧನವನ್ನು ಘೋಷಿಸಲು ದುಃಖವಾಗುತ್ತಿದೆ' ಎಂದು ಅವರು ಸಾಮಾಜಿಕ ಮಾಧ್ಯಮದಲ್ಲಿ ಬರೆದಿದ್ದಾರೆ. ಆದರೂ 'ದಿ ಗಟ್‌ಲೆಸ್‌ ಫುಡೀ' ಎಂಬ ಇನ್‌ಸ್ಟಾಗ್ರಾಂ ಖಾತೆಯನ್ನು ಸಕ್ರಿಯವಾಗಿಯೇ ಇರಿಸಿಕೊಳ್ಳುವುದಾಗಿಯೂ ಅವರು ಮಾಹಿತಿ ನೀಡಿದ್ದಾರೆ. 

"ನತಾಶಾ ಅವರ ಪೋಸ್ಟ್‌ಗಳು ಮತ್ತು ಕಥೆಗಳು ಅನೇಕ ಜನರಿಗೆ ಸ್ಫೂರ್ತಿ ನೀಡುತ್ತಿತ್ತು. ಆಕೆಯ ಅನೇಕ ಅನುಯಾಯಿಗಳು ಆಕೆಯ ಪಾಕವಿಧಾನಗಳನ್ನು ಎದುರು ನೋಡುತ್ತಿದ್ದಾರೆ. ಅವರ ಹಲವಾರು ವೀಡಿಯೊಗಳು ಅನೇಕ ಜನರಿಗೆ ಸ್ಫೂರ್ತಿ ನೀಡಿವೆ ಎಂದು ನನಗೆ ತಿಳಿದಿದೆ" ನತಾಶಾ ಅವರ ಪತಿ ಹೇಳಿದ್ದಾರೆ. 

ಈ ಹಿಂದೆ ಅವರು ಅನೇಕ ಸಂದರ್ಶನಗಳಲ್ಲಿ, ತನಗೆ ಆರೋಗ್ಯ ಸಮಸ್ಯೆಗಳಿವೆ ಎಂದು ಬಹಿರಂಗಪಡಿಸಿದರು. ಹೊಟ್ಟೆಯಲ್ಲಿ ಗೆಡ್ಡೆಗಳು ಕಾಣಿಸಿಕೊಂಡ ಬಳಿಕ, ಸಂಪೂರ್ಣ ಹೊಟ್ಟೆಯನ್ನು ಶಸ್ತ್ರಚಿಕಿತ್ಸೆಯಿಂದ ತೆಗೆದುಹಾಕಲಾಯಿತು. ಆ ಬಳಿಕದಿಂದ ಅವರು ಬಹಳ ಕಡಿಮೆ ಆಹಾರವನ್ನು ಸೇವಿಸುತ್ತಿದ್ದರು. ತಿಂದ ಬಳಿಕ ತನಗೆ ತಲೆತಿರುಗುವಿಕೆ ಮತ್ತು ಸುಸ್ತಾಗುತ್ತಿದೆ ಎಂದು ನತಾಶಾ ಹೇಳಿದ್ದರು. ಹೊಟ್ಟೆಯಿಲ್ಲದೆ ಅವರು 12 ವರ್ಷಗಳ ಕಾಲ ಬದುಕಿದ್ದರು.
BREAKING NEWS
Loading latest news...
Join our WhatsApp Channel Powered By : Online Pudu