ಕರಾವಳಿಯಲ್ಲಿ ಹೆಚ್ಚಿದ ತಾಪಮಾನ- ಸಮಸ್ಯೆ ತಡೆಯಲು ಈ ರೀತಿ ಮಾಡಿ



ಕರಾವಳಿ ಸೇರಿದಂತೆ ನಾಡಿನ ಹಲವೆಡೆ  ಬಿಸಿಗಾಳಿ ಬೀಸುತ್ತಿದೆ. ಇದರಿಂದ ಉಂಟಾಗುವ ಹತ್ತು ಹಲವು ಸಮಸ್ಯೆ ,ತೊಂದರೆಗಳನ್ನು ತಪ್ಪಿಸಿಕೊಳ್ಳಲು ಜಿಲ್ಲಾಡಳಿತ ಸಾರ್ವಜನಿಕರಿಗೆ ಕೆಲವು ಸೂಚನೆಗಳನ್ನು ನೀಡಿದೆ.


 ನೀಡಿದ ನಿಯಮಗಳನ್ನು ಸಾಧ್ಯವಿದ್ದಷ್ಟು ಪಾಲಿಸಿ ಬಿಸಿ ಗಾಳಿಯ ಸಮಸ್ಯೆಯಿಂದ ಪಾರಾಗುವಂತೆ ತಿಳಿಸಲಾಗಿದೆ 


ಯಾವ ಯಾವ ನಿಯಮ ಪಾಲನೆ ಕಡ್ಡಾಯ :

ಸಾಧ್ಯವಿದ್ದಷ್ಟು ತಂಪಾದ ಸ್ಥಳಗಳಲ್ಲಿ ಉಳಿಯಲು ಪ್ರಯತ್ನಿಸಬೇಕು

 ನೇರ ಸೂರ್ಯನ ಬೆಳಕು ಅಥವಾ ಬಿಸಿಗಾಳಿ ಮೈಗೆ ಸೋಕದಂತೆ ನೋಡಿಕೊಳ್ಳಬೇಕು.

ಬಿಸಿಲಿಗೆ ಹೋಗುವಾಗ ಕೊಡ/ಛತ್ರಿ ಬಳಸಬೇಕು. 

ತೆಳುವಾದ ಸಡಿಲವಾದ ಹತ್ತಿಯ ಉಡುಪುಗಳನ್ನು ಧರಿಸಬೇಕು. 

ಅದರಲ್ಲೂ ಬಿಳಿ ಬಣ್ಣದ ಬಟ್ಟೆಗಳು ದೇಹಕ್ಕೆ ಒಳ್ಳೆಯದು. 

ಹತ್ತಿಯ ಟೋಪಿ ಅಥವಾ ಟರ್ಬನ್/ಕೂಲಿಂಗ್ ಗ್ಲಾಸ್ ಧರಿಸಿದರೆ ಉತ್ತಮ.

ಬೆಳಿಗ್ಗೆ 11ರಿಂದ ಸಂಜೆ 4ರವರೆಗೆ ಹೊರಾಂಗಣ ದೈಹಿಕ ಚಟುವಟಿಕೆಯನ್ನು ಕಡಿಮೆ ಮಾಡಲು ಪ್ರಯತ್ನಿನ ಬೇಕು. 

ಸಾಕಷ್ಟು ನೀರು ಕುಡಿಯಬೇಕು. 

ಮಜ್ಜಿಗೆ ಮತ್ತು ಗೂಕೋಸ್ ನೀರನ್ನು (ಓಆ‌ರ್.ಎಸ್) ಉಪಯೋಗಿಸಬೇಕು.

 ಕೊಠಡಿಯ ತಾಪಮಾನವನ್ನು ಕಡಿಮೆ ಮಾಡಲು ಸೂಕ್ತಕ್ರಮಗಳನ್ನು ತೆಗೆದುಕೊಳ್ಳ ಬೇಕು. (ಕಿಟಕಿ, ನೆರಳಿನ ವ್ಯವಸ್ಥೆ, ಫ್ಯಾನ್, ಗಾಳಿ-ಬೆಳಕು ಸಂಚರಿಸಲು ಸರಿಯಾದ ವ್ಯವಸ್ಥೆ ಇತ್ಯಾದಿ).

ಹೀಟ್ ಸ್ಟೋಕ್ ಲಕ್ಷಣಗಳನ್ನು ಹೊಂದಿರುವ ವ್ಯಕ್ತಿಯನ್ನು ತಂಪಾದ ಜಾಗಕ್ಕೆ ಸ್ಥಳಾಂತರಿಸಬೇಕು.

 ಶಾಖದ ಹೊಡೆತದಿಂದ ಬಳಲುತ್ತಿರುವ ವ್ಯಕ್ತಿಯು ಕನಿಷ್ಟ ಬಟ್ಟೆಯನ್ನು ಹೊಂದಿರುವಂತೆ ನೋಡಿಕೊಳ್ಳ ಬೇಕು. 

ಹೀಟ್ ವೇವ್ ಸ್ಟೋಕ್ ನಿಂದ ಬಳಲುತ್ತಿರುವ ವ್ಯಕ್ತಿಗೆ ತಣ್ಣೀರಿನಿಂದ ಸ್ಪಾಂಜ್ ಮಾಡಬೇಕು, ಐಸ್ ಪ್ಯಾಕ್‌ಗಳನ್ನು ಉಪಯೋಗಿಸಬೇಕು. ಶಾಖದ ಹೊಡೆತದಿಂದ ಬಳಲುತ್ತಿರುವ ವ್ಯಕ್ತಿಯನ್ನು ಐನ್ ಬ್ಲಾಕ್ಸ್‌ಗಳ ನಡುವೆ ಇಡಬೇಕು.

ಹೀಟ್‌ವೇವ್ ಸ್ಟೋಕ್‌ಗೆ ಒಳಗಾದ ವ್ಯಕ್ತಿಗೆ ಯಾವುದೇ ಸುಧಾರಣೆ ಕಂಡುಬರದಿದ್ದರೆ, ಅವರನ್ನು ತಕ್ಷಣ ಕೂಲಿಂಗ್ ವ್ಯವಸ್ಥೆ ಯೊಂದಿಗೆ ಆಸ್ಪತ್ರೆಗೆ ಸ್ಥಳಾಂತರಿಸ ಬೇಕು. ಬೇಸಿಗೆಯಲ್ಲಿ ಹೊರಗಿನಿಂದ ಬಂದ ತಕ್ಷಣ ನೀರು/ಒಆರ್‌ಎಸ್/ಮಜ್ಜಿಗೆ ಯಂತಹ ಪಾನೀಯ ಕುಡಿಯಬಹುದು.


ಏನು ಮಾಡಬಾರದ್ದು : 

ಬೇಸಿಗೆ ಕಾಲದಲ್ಲಿ ಕಪ್ಪು ಮತ್ತು ಸಿಂಥೆಟಿಕ್, ದಪ್ಪ ಬಟ್ಟೆಗಳನ್ನು ಬಳಕೆ ಮಾಡುವುದು. 

ಛತ್ರಿ, ಟೋಪಿ ಇಲ್ಲದೇ ಬಿಸಿಲಿನಲ್ಲಿ ಓಡಾಡುವುದು.

 ಸೂರ್ಯನ ಬಿಸಿಲಿನಲ್ಲಿ ಶ್ರಮದಾಯಕ ದೈಹಿಕ ಚಟುವಟಿಕೆಗೆ ಮಾಡುವುದು. ಕಾರ್ಬೊನೇಟೆಡ್ ಪಾನೀಯಗಳು / ಮಾಂಸ / ಮದ್ಯ / ಚಹಾ / ಶಾಪಿ ಇತ್ಯಾದಿ ಬಳಸುವುದು, ಗಾಳಿ ಬಿಸಿಯಾಗಿರುವ ಕೋಣೆಯಲ್ಲಿ ಇರುವುದು.

ಶಾಖದ ಹೊಡೆತದಿಂದ ಬಳಲುತ್ತಿರುವ ವ್ಯಕ್ತಿಯನ್ನು ತಂಪಾದ ಸ್ಥಳಕ್ಕೆ ಸ್ಥಳಾಂತರಿಸುವಲ್ಲಿ ವಿಳಂಬ ಮಾಡುವುದು. ಹೀಟ್ ಸ್ಟೋಕ್‌ನಿಂದ ಬಳಲುತ್ತಿರುವ ವ್ಯಕ್ತಿ ದಪ್ಪ ಬಟ್ಟೆಯನ್ನು ಧರಿಸಿರುವುದು. 

ಇಂಥ ವ್ಯಕ್ತಿಗೆ ಬಿಸಿನೀರಿನಿಂದ ಸ್ಪಾಂಜ್ ಮಾಡುವುದು, ಬಿಸಿಗಾಳಿಗೆ ಒಡ್ಡುವುದು.

ಬೆಳಗ್ಗೆ 11ರಿಂದ ಸಂಜೆ 4ರವರೆಗೆ ಮನರಂಜನೆ/ಪ್ರವಾಸ/ಪಿಕ್ನಿಕ್ ಇತ್ಯಾದಿ ಚಟುವಟಿಕೆ ಮಾಡುವುದು. 

ಹೊರಗಿನಿಂದ ಬಂದ ತಕ್ಷಣ ಟೀ/ಕಾಫಿ/ ಕಾರ್ಬೋನೇಟೆಡ್ ಪಾನೀಯಗಳನ್ನು ಕುಡಿಯುವುದು