ದ್ವಿತೀಯ ಪಿಯುಸಿ ಪರೀಕ್ಷೆ ಇಂದಿನಿಂದ ಶುರು ನಿಯಮ ಪಾಲನೆಯ ಬಗ್ಗೆ ಇಲ್ಲಿದೆ ವಿವರ

2023-24ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗಳು ಮಾರ್ಚ್ 1ರಿಂದ ಆರಂಭವಾಗಿದೆ

ಒಟ್ಟು ರಾಜ್ಯದಾತ್ಯಂತ 1124 ಕೇಂದ್ರಗಳಲ್ಲಿ 6.98 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಮೊದಲ ದಿನ ಕನ್ನಡ ಮತ್ತು ಅರೇಬಿಕ್ ವಿಷಯದ ಪರೀಕ್ಷೆಗಳು ನಡೆಯಲಿದೆ.

 ದ್ವಿತೀಯ ಪಿಯುಸಿ ಪರೀಕ್ಷೆ 80-20 ಮಾದರಿಯಲ್ಲಿ ಇರುತ್ತದೆ  ವಿದ್ಯಾರ್ಥಿಗಳು ಲಿಖಿತ ರೂಪದಲ್ಲಿ 80 ಅಂಕಗಳಿಗೆ ಪರೀಕ್ಷೆ ಬರೆಯುತ್ತಾರೆ. ಇನ್ನು ಉಳಿದ 20 ಅಂಕಗಳು ಆಂತರಿಕ ಮೌಲ್ಯಮಾಪನದ ಮೂಲಕ ನೀಡಲಾಗುತ್ತದೆ. 
ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ಕಡ್ಡಾಯವಾಗಿ ಪಾಲಿಸಬೇಕದ ನಿಯಮಗಳು 
1) ವಿದ್ಯಾರ್ಥಿಗಳು, ಸರಳ ಕ್ಯಾಲ್ಕುಲೇಟರ್ಗಳನ್ನು ಮಾತ್ರ ಬಳಸಲು ಅವಕಾಶ
2) ಸ್ಮಾಟಿಸ್ಟಿಕ್ಸ್ ವಿಷಯದಲ್ಲಿ ಮಾತ್ರ ಸೈಂಟಿಫಿಕ್ ಕ್ಯಾಲ್ಕುಲೇಟರ್ ಬಳಸಲು ಅನುಮತಿ
3) ಪರೀಕ್ಷೆಯ ಅಂತಿಮ ಬೆಲ್ ಹೊಡೆಯುವ ಮುನ್ನ ಪರೀಕ್ಷಾ ಕೊಠಡಿಯಿಂದ ಹೊರಡುವ
ವಿದ್ಯಾರ್ಥಿಗಳಿಂದ ಉತ್ತರ ಪತ್ರಿಕೆ ಮತ್ತು ಪ್ರಶ್ನೆ ಪತ್ರಿಕೆಗಳನ್ನು ಕಡ್ಡಾಯವಾಗಿ ಪಡೆಯಲಾಗುತ್ತದೆ.
4) ಗುರುತಿನ ಚೀಟಿ ಹಾಗೂ ಹಾಲ್ ಟಿಕೆಟ್ ಕಡ್ಡಾಯ
5  ಪಿಯುಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಪ್ರವೇಶ ಪತ್ರ ತೋರಿಸಿ ಬಿಎಂಟಿಸಿ ಹಾಗೂ
ಕೆಎಸ್ ಆರ್ ಟಿಸಿ ಬಸ್ ನಲ್ಲಿ ಪ್ರಯಾಣ ಮಾಡಬಹುದಾಗಿದೆ.
6) ಮೊಬೈಲ್ ಫೋನ್, ಎಲೆಕ್ನಿಕ್ ಉಪಕರಣಗಳ ಬಳಕೆ ನಿಷೇಧ
7) ಪರೀಕ್ಷಾ ಅವಧಿಗಿಂತ ಮುಂಚೆ ಹೊರಕ್ಕೆ ಹೋಗುವ ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ ನೀಡಲಾಗುವುದಿಲ್ಲ.

ಆರಾಮಾಗಿ ಪರೀಕ್ಷೆ ಬರೆಯಿರಿ , all the best 
ಉನ್ನತ ಶಿಕ್ಷಣದ ಗುರಿ ಮತ್ತು ಶಿಕ್ಷಣ ಕ್ಷೇತ್ರದಲ್ಲಿನ ಪೈಪೋಟಿ ಪರೀಕ್ಷಾ ವಿಧಾನಗಳಲ್ಲಿ ಆದ ಸುಧಾರಣಾ ಕ್ರಮಗಳಿಂದ ಮತ್ತು ಫಲಿತಾಂಶ ವೃದ್ಧಿಗೆ ನಡೆಸಿದ ಯತ್ನಗಳಿಂದ ಇತ್ತೀಚಿನ ದಿನಗಳಲ್ಲಿ ಪಾಸ್ ಆಗುವುದು ದೊಡ್ಡ ವಿಷಯವೇ ಅಲ್ಲ. ಈಗೇನಿದ್ದರೂ ಶೇ.90 ಪ್ಲಸ್ ಫಲಿತಾಂಶದ ಗುರಿಯಷ್ಟೇ. ಈ ಗುರಿ ಬೆನ್ನೇರಿದ ಅನೇಕರು ಇಂದು ಅನವಶ್ಯ ಒತ್ತಡಕ್ಕೆ ಸಿಲುಕುತ್ತಿದ್ದಾರೆ. ಕೆಲ ತಪ್ಪು ತಿಳಿವಳಿಕೆ ಮತ್ತು ಮಾಹಿತಿಯಿಂದ ತಮ್ಮ ಸಾಮರ್ಥ್ಯ ಹಾಗೂ ವಿಶ್ವಾಸದ ಮೇಲೆ ಅನುಮಾನ ಪಟ್ಟು ಅನಗತ್ಯ ಮಾನಸಿಕ ಒತ್ತಡ ಸೃಷ್ಟಿಸಿಕೊಳ್ಳುತ್ತಿದ್ದಾರೆ.
ಸ್ಪರ್ಧಾತ್ಮಕ ಜಗತ್ತಿನಲ್ಲಿ ಉತ್ತಮ ಫಲಿತಾಂಶಕ್ಕೆ ಒತ್ತು ಕೊಟ್ಟು ಸಾಗುತ್ತಿರುವಾಗ ಅಲ್ಲೆಲ್ಲೋ ಅದರಲ್ಲಿ ಎಡವಿದಾಗ ಸಮಾಜ ಎಲ್ಲಿ ತನ್ನನ್ನು ಧಿಕ್ಕರಿಸುವುದೋ ಎಂಬ ಆತಂಕ ವಿದ್ಯಾರ್ಥಿಗಳನ್ನು ಕಾಡಲಾರಂಭಿಸುತ್ತದೆ. ಜತೆಗೆ ಪಾಲಕರ ಸಾಮಾಜಿಕ ಸ್ಟೇಟಸ್‌ಗೆ ಎಲ್ಲಿ ಧಕ್ಕೆ ಬರುವುದೋ ಎನ್ನುವ ಪ್ರಶ್ನೆಯು ಎದುರಾಗುತ್ತದೆ. ಪದೇಪದೆ ಗುರಿ ಬದಲಾಯಿಸಬಾರದು. ಸತತ ಪರಿಶ್ರಮ, ಪ್ರಾಮಾಣಿಕ ಪ್ರಯತ್ನ ಮತ್ತು ಆತ್ಮವಿಶ್ವಾಸ ಈ ಮೂರು ಇದ್ದಲ್ಲಿ ಸಾಧನೆಯ ಶಿಖರ ಏರುವುದು ದೊಡ್ಡ ಮಾತಲ್ಲ ಆಲ್ ದಿ ಬೆಸ್ಟ್ ಮಕ್ಕಳೇ... ಎಲ್ಲರೂ ಗೆಲ್ಲುತ್ತೀರಿ.. ಗೆದ್ದವರು ಮಾತ್ರ ಗೆಲುವಲ್ಲ ಸೋತವರಿಗೂ ಇಲ್ಲಿ ಉತ್ತಮ ಅವಕಾಶ ಇದೆ . ಗುಡ್ ಲಕ್!