ಬೆಳ್ತಂಗಡಿ: ಶಿವರಾತ್ರಿಯಂದೇ ಶಿವನಪಾದ ಸೇರಿದ ಧರ್ಮಸ್ಥಳದ ಕ್ಷೇತ್ರದ ಆನೆ 'ಲತಾ'


ಬೆಳ್ತಂಗಡಿ: ನಾಡಿನ ಪ್ರಸಿದ್ಧ ಶಿವಾಲಯ ಶ್ರೀಕ್ಷೇತ್ರ ಧರ್ಮಸ್ಥಳದ ಆನೆ 'ಲತಾ' ಶಿವರಾತ್ರಿಯ ದಿನವಾದ ಇಂದೇ ಶಿವನಪಾದ ಸೇರಿದ್ದಾಳೆ.

60ವರ್ಷ ಪ್ರಾಯದ ಲತಾ ಕಳೆದ 50ವರ್ಷಗಳಿಂದ ಧರ್ಮಸ್ಥಳ ಕ್ಷೇತ್ರದ ಆಕೆಯಾಗಿ ಎಲ್ಲರ ಗಮನ ಸೆಳೆದಿತ್ತು. ಇಂದು ಮಧ್ಯಾಹ್ನದ ವೇಳೆ ಲತಾ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದೆ. ಕಳೆದ 50ವರ್ಷಗಳ ಅವಧಿಯಲ್ಲಿ ಧರ್ಮಸ್ಥಳ ಕ್ಷೇತ್ರದ ಜಾತ್ರಾಮಹೋತ್ಸವ, ಇನ್ನಿತರ ಉತ್ಸವಗಳಲ್ಲಿ ಲತಾ ಆನೆ ಗಾಂಭೀರ್ಯದ ಹೆಜ್ಜೆ ಹಾಕಿ ಎಲ್ಲರ ಆಕರ್ಷಣೆಗೆ ಪಾತ್ರವಾಗಿತ್ತು.








ಧರ್ಮಸ್ಥಳದಲ್ಲಿ ಸದ್ಯ ಲಕ್ಷ್ಮಿ, ಶಿವಾನಿ ಎಂಬ ಎರಡು ಆನೆಗಳಿವೆ‌. ಲತಾ ಆನೆ ಈ ಎರಡು ಆನೆಗಳಿಗೂ ತಾಯಿ, ಅಜ್ಜಿಯಾಗಿ ಪ್ರೀತಿಯಿಂದ ವರ್ತಿಸುತ್ತಿತ್ತು. ಶಿವಾನಿ ಆನೆ ತಾಯಿ ಲಕ್ಷ್ಮಿ ಆನೆಗಿಂತಲೂ ಹೆಚ್ಚು ಲತಾ ಆನೆಯೊಂದಿಗೆ ಸಲುಗೆಯಿಂದ ವರ್ತಿಸುತ್ತಿತ್ತು‌. ಲತಾ ಆನೆಯ ಅಂತ್ಯ ಸಂಸ್ಕಾರ ಇಂದು ಸಂಜೆ ವೇಳೆ ನಡೆಯುವ ಸಾಧ್ಯತೆಯಿದೆ.
BREAKING NEWS
Loading latest news...
Join our WhatsApp Channel Powered By : Online Pudu