-->

ನವದೆಹಲಿ: ಮೊದಲ ಪ್ರಯತ್ನದಲ್ಲಿಯೇ ಐಎಎಸ್ ಪರೀಕ್ಷೆ ಪಾಸ್ ಮಾಡಿದ 22ರ ಯುವತಿ - ಈಕೆಯ ಸಾಧನೆಯ ಹಿಂದಿದೆ ಈ ಪರಿಶ್ರಮ

ನವದೆಹಲಿ: ಮೊದಲ ಪ್ರಯತ್ನದಲ್ಲಿಯೇ ಐಎಎಸ್ ಪರೀಕ್ಷೆ ಪಾಸ್ ಮಾಡಿದ 22ರ ಯುವತಿ - ಈಕೆಯ ಸಾಧನೆಯ ಹಿಂದಿದೆ ಈ ಪರಿಶ್ರಮ


ನವದೆಹಲಿ: ಅತ್ಯಂತ ಕ್ಲಿಷ್ಟವಾದ ಪರೀಕ್ಷೆ, ತೇರ್ಗಡೆಯಾಗೋದೇ ಕಷ್ಟ ಎನ್ನುವ ಐಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಕೆಲವರು ಏನೆಲ್ಲಾ ಪ್ರಯತ್ನ ಮಾಡುತ್ತಾರೆ. ಆದರೆ ಉತ್ತರಪ್ರದೇಶದ ಪ್ರಯಾಗರಾಜ್ ಜಿಲ್ಲೆಯ 22 ವರ್ಷದ ಯುವತಿಯೊಬ್ಬಳು ಮೊದಲ ಪ್ರಯತ್ನದಲ್ಲೇ ಐಎಎಸ್ ಪರೀಕ್ಷೆ ತೇರ್ಗಡೆ ಹೊಂದಿ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದ್ದಾಳೆ.

ಎಸೆಸೆಲ್ಸಿ ಹಾಗೂ ಪಿಯುಸಿಯಲ್ಲಿ ಜಿಲ್ಲೆಗೇ ಮೊದಲ ಸ್ಥಾನ ಪಡೆದಿದ್ದ ಅನನ್ಯಾ ಸಿಂಗ್ ಎಂಬ ಈ ಯುವತಿ ಪದವಿ ಪೂರೈಸಿದ ಬಳಿಕ ಒಂದೇ ವರ್ಷದಲ್ಲಿಯೇ ಯುಪಿಎಸ್ಸಿ ಪರೀಕ್ಷೆಯಲ್ಲಿಯೂ ಪಾಸ್ ಆಗಿದ್ದಾಳೆ. ದೆಹಲಿಯ ಶ್ರೀರಾಮ್ ಕಾಲೇಜಿನಲ್ಲಿ ಎಕನಾಮಿಕ್ಸ್ ವಿಷಯದಲ್ಲಿ ಪದವಿ ಗಳಿಸಿದ್ದ ಅನನ್ಯಾಗೆ ಸಣ್ಣ ವಯಸ್ಸಿನಲ್ಲಿಯೇ ಸರ್ಕಾರಿ ಅಧಿಕಾರಿ ಆಗಬೇಕೆಂಬ ಕನಸಿತ್ತು. ಇದೇ ಹಿನ್ನೆಲೆಯಲ್ಲಿ ಐಎಎಸ್ ಪರೀಕ್ಷೆ ಬರೆಯಲು 2019ರಿಂದಲೇ ಸಿದ್ಧತೆ ನಡೆಸಿದ್ದಳು. ಇದೀಗ ಪರೀಕ್ಷೆ ಬರೆದು ರಾಷ್ಟ್ರಮಟ್ಟದಲ್ಲಿಯೇ 51ನೇ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾಳೆ. 

ಪರೀಕ್ಷೆಯ ಉತ್ತರಗಳನ್ನು ಬರೆಯುತ್ತಲೇ ಅಭ್ಯಾಸದಲ್ಲಿ ತೊಡಗಿದ್ದೆ. ಇದರಿಂದಲೇ ನನಗೆ ಮೊದಲ ಪ್ರಯತ್ನದಲ್ಲೇ ಸಾಧನೆ ಮಾಡಲು ಸಾಧ್ಯವಾಯಿತು ಎಂದಿದ್ದಾರೆ. ಇದೀಗ ಪಶ್ಚಿಮ ಬಂಗಾಳ ಕೇಡರಿನಲ್ಲಿ ಸೇವೆ ಮಾಡುವುದಕ್ಕೆ ಅನನ್ಯಾ ಆಯ್ಕೆ ಮಾಡಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಈಕೆ ಸಕ್ರಿಯಳಾಗಿದ್ದಾಳೆ. ಈಕೆಗೆ ಇನ್ ಸ್ಟಾಗ್ರಾಂನಲ್ಲಿ 48ಸಾವಿರ ಮಂದಿ ಫಾಲೋವರ್ಸ್ ಇದ್ದಾರೆ.

Ads on article

Advertise in articles 1

advertising articles 2

Advertise under the article