-->
1000938341
ಟಾಕ್ ಶೋನಲ್ಲಿ ಹನಿಮೂನ್ ಬಗ್ಗೆ ಪ್ರಶ್ನೆ ಕೇಳಿದ ನಿರೂಪಕನೊಂದಿಗೆ ವಾಗ್ವಾದ ಮಾಡಿ ಕಪಾಳಮೋಕ್ಷ ಮಾಡಿದ ಗಾಯಕಿ

ಟಾಕ್ ಶೋನಲ್ಲಿ ಹನಿಮೂನ್ ಬಗ್ಗೆ ಪ್ರಶ್ನೆ ಕೇಳಿದ ನಿರೂಪಕನೊಂದಿಗೆ ವಾಗ್ವಾದ ಮಾಡಿ ಕಪಾಳಮೋಕ್ಷ ಮಾಡಿದ ಗಾಯಕಿ


ನವದೆಹಲಿ: ಪಾಕಿಸ್ತಾನಿ ಗಾಯಕಿ ಶಾಜಿಯಾ ಮಂಜೂರ್ ಟಿವಿಯೊಂದರ ಲೈವ್ ಕಾರ್ಯಕ್ರಮದಲ್ಲಿ ಕೋಪಗೊಂಡು ಸಹ-ನಿರೂಪಕನಿಗೆ ಕಪಾಳಮೋಕ್ಷ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. 'ಹನಿಮೂನ್' ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಗಾಯಕಿ ಸಹ ನಿರೂಪಕನ ಮೇಲೆ ಕೋಪಗೊಂಡಿರುವುದು ತಿಳಿದುಬಂದಿದೆ.

ಪಾಕಿಸ್ತಾನಿ ಟಾಕ್​​ ಶೋಗಳು ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನಪ್ರಿಯವಾಗುತ್ತಿದೆ. ಇತ್ತೀಚಿಗಷ್ಟೇ ಟಾಕ್​​ ಶೋವೊಂದರಲ್ಲಿ ಪಾಕಿಸ್ತಾನಿ ಗಾಯಕಿ ಶಾಜಿಯಾ ಮಂಜೂರ್ ಲೈವ್​​​​ ಕಾರ್ಯಕ್ರಮದಲ್ಲೇ ಸಹ ನಿರೂಪಕನಿಗೆ ಸರಿಯಾಗಿ ಬೈದು ಕಪಾಳಮೋಕ್ಷ ಮಾಡಿರುವ ವಿಡಿಯೋ ಭಾರೀ ವೈರಲ್​​ ಆಗಿದೆ. ‘ಹನಿಮೂನ್’ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಗಾಯಕಿ ಸಹ ನಿರೂಪಕ ವಿರುದ್ಧ ಕೋಪಗೊಂಡಿರುವುದನ್ನು ವೀಡಿಯೋದಲ್ಲಿ ಕಾಣಬಹುದು.

ವೈರಲ್​​ ವಿಡಿಯೋದಲ್ಲಿ ಹಾಸ್ಯನಟ ಹಾಗೂ ಸಹ-ನಿರೂಪಕ ಶೆರ್ರಿ ನನ್ಹಾ 'ನಮ್ಮ ಮದುವೆಯ ಬಳಿಕ ಹನಿಮೂನ್​​​ಗಾಗಿ ನಾನು ನಿಮ್ಮನ್ನು ನೇರವಾಗಿ ಮಾಂಟೆ ಕಾರ್ಲೋಗೆ ಕರೆದುಕೊಂಡು ಹೋಗುತ್ತೇನೆ' ಎಂದು ಗಾಯಕಿ ಶಾಜಿಯಾ ಅವರಿಗೆ ಹಾಸ್ಯಸ್ಪದವಾಗಿ ಹೇಳಿದ್ದಾನೆ.

ಲೈವ್​​ ಕಾರ್ಯಕ್ರಮದಲ್ಲಿ ಹಾಸ್ಯನಟನ ಮಾತಿಗೆ ಗಾಯಕಿ ಕೋಪಗೊಂಡಿದ್ದಾಳೆ. “ಕಳೆದ ಬಾರಿಯೂ ನೀವು ಹೀಗೆಯೇ ವರ್ತಿಸಿದ್ದೀರಿ. ಪ್ರತೀ ಬಾರಿಯೂ ತಮಾಷೆಯಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಮಹಿಳೆಯರೊಂದಿಗೆ ಈ ರೀತಿ ಅಸಭ್ಯವಾಗಿ ಮಾತನಾಡುವುದು ಎಷ್ಟು ಸರಿ?” ಎಂದು ಗಾಯಕಿ ವಾಗ್ವಾದಕ್ಕಿಳಿದ್ದಿದ್ದಾರೆ. ಇದಲ್ಲದೆ ಸಹ ನಿರೂಪಕನಿಗೆ ಕಪಾಳಮೋಕ್ಷ ಮಾಡಿದ್ದಾಳೆ.

Ads on article

Advertise in articles 1

advertising articles 2

Advertise under the article