ಉಳ್ಳಾಲ: ಉದ್ಯೋಗದ ನಿಮಿತ್ತ ಸೌದಿ ಅರೇಬಿಯಾಕ್ಕೆ ತೆರಳಲು ಸಿದ್ಧತೆ ನಡೆಸುತ್ತಿದ್ದ ಯುವಕನೋರ್ವನು ರೈಲು ಢಿಕ್ಕಿ ಹೊಡೆದು ಮೃತಪಟ್ಟ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಸಂಕೊಳಿಗೆ ರೈಲ್ವೇ ಹಳಿಯಲ್ಲಿ ಶನಿವಾರ ತಡರಾತ್ರಿ ಸಂಭವಿಸಿದೆ.
ಉಚ್ಚಿಲ ರೈಲ್ವೇ ಗೇಟ್ ಬಳಿಯ ನಿವಾಸಿ ಜಾಫರ್ (22) ಮೃತಪಟ್ಟ ಯುವಕ.
ಜಾಫರ್ ಸಹೋದರ ಸೌದಿ ಅರೇಬಿಯಾದಲ್ಲಿದ್ದು, ಅವರು ಜಾಫರ್ ಗೂ ವೀಸಾ ಕಳಿಸಿದ್ದರು. ಅದಕ್ಕಾಗಿ ಜಾಫರ್ ಇತ್ತೀಚೆಗೆ ಮುಂಬೈಗೂ ಹೋಗಿ ಬಂದಿದ್ದರು. ಜಾಫರ್ ಫೆ.14ಕ್ಕೆ ಸೌದಿ ಅರೇಬಿಯಾಕ್ಕೆ ತೆರಳಲು ಸಿದ್ಧತೆ ನಡೆಸಿದ್ದರು. ಆದರೆ ಇದೀಗ ಅವರು ರೈಲು ಢಿಕ್ಕಿಯಾಗಿ ಮೃತಪಟ್ಟಿದ್ದಾರೆ. ಈ ಬಗ್ಗೆ ರೈಲ್ವೇ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.