ಮಂಗಳೂರು: ಮಾದಕದ್ರವ್ಯ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರು ಅರೆಸ್ಟ್

ಮಂಗಳೂರು: ಇಲ್ಲಿನ ಕಾವೂರು ಠಾಣಾ ವ್ಯಾಪ್ತಿಯ ಬೋಂದೆಲ್ ಬಳಿಯ ಮೈದಾನದ ಬಳಿ ಬೈಕ್ ನಲ್ಲಿ ಮಾದಕದ್ರವ್ಯ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದ ಪೊಲೀಸರು 19 ಗ್ರಾಂ ತೂಕದ 57,000 ಮೌಲ್ಯದ ಮೆಥಪಟೈನ್ ಮಾದಕದ್ರವ್ಯವನ್ನು ವಶಪಡಿಸಿಕೊಂಡಿದ್ದಾರೆ.

ಮಂಗಳೂರು ನಿವಾಸಿ ಹಿಮನೀಶ್ (26), ಕೋಟೆಕಾರು ತಾರಿಪಡ್ಪು ನಿವಾಸಿ ಪವನ್ ರಾಜ್ ಪಿ(28) ಬಂಧಿತ ಆರೋಪಿಗಳು.


ಆರೋಪಿಗಳು ಕಾವೂರಿನ ಬೊಂದೆಲ್ ಬಳಿಯ ಮೈದಾನದ ಬಳಿ ಬೈಕ್ ನಲ್ಲಿ ಪ್ಲಾಸ್ಟಿಕ್ ಕವರ್ ಗಳಲ್ಲಿ ಮೆಥಪಟೈನ್ ಮಾದಕದ್ರವ್ಯವನ್ನು ಮಾರಾಟಕ್ಕೆ ಯತ್ನಿಸುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಮಾದಕದ್ರವ್ಯವನ್ನು ಸೇರಿದಂತೆ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡಿದ್ದಾರೆ. 

ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.
BREAKING NEWS
Loading latest news...
Join our WhatsApp Channel Powered By : Online Pudu