-->
1000938341
11ತಿಂಗಳ ಶಿಶುವಿನ ಗಂಟಲಲ್ಲಿ ಸಿಕ್ಕಿಕೊಂಡ ಮೀನು: ಪ್ರಾಣಾಪಾಯದಿಂದ ಪಾರು‌ಮಾಡಿದ ವೈದ್ಯರು

11ತಿಂಗಳ ಶಿಶುವಿನ ಗಂಟಲಲ್ಲಿ ಸಿಕ್ಕಿಕೊಂಡ ಮೀನು: ಪ್ರಾಣಾಪಾಯದಿಂದ ಪಾರು‌ಮಾಡಿದ ವೈದ್ಯರು


ಶಿವಮೊಗ್ಗ: ಮೀನೊಂದನ್ನು ನುಂಗಿ ಉಸಿರಾಡಲಾಗದೆ ಜೀವನ್ಮರಣದ ನಡುವೆ ಹೋರಾಡುತ್ತಿದ್ದ 11 ತಿಂಗಳ ಶಿಶುವನ್ನು ಶಿವಮೊಗ್ಗ ಸರ್ಜಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಮಕ್ಕಳ ತಜ್ಞ ವೈದ್ಯರು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. 

ಹೊನ್ನಾಳಿ ತಾಲೂಕು ನ್ಯಾಮತಿ ಬಳಿಯ ಗಂಜೇನಹಳ್ಳಿಯ ಯೋಗೀಶ್‌ ಮತ್ತು ರೋಜಾ ದಂಪತಿಯ 11 ತಿಂಗಳ ಶಿಶು ಪ್ರತೀಕ್‌ ಮನೆಯೊಳಗೆ ಆಟವಾಡುತ್ತಿದ್ದ. ಈ ವೇಳೆ ಮೀನನ್ನು ನುಂಗಿದ್ದಾನೆ. ಇದನ್ನು ಗಮನಿಸಿದ ಪೋಷಕರು ತಕ್ಷಣವೇ ಮೀನನ್ನು ಶಿಶುವಿನ ಬಾಯಿಯಿಂದ ಹೊರತೆಗೆಯಲು ಯತ್ನಿಸಿದ್ದಾರೆ. ಆದರೆ ಯಶಸ್ವಿ ಆಗಿರಲಿಲ್ಲ, ಅಷ್ಟೊತ್ತಿಗಾಗಲೇ ಮಗುವಿನ ಸ್ಥಿತಿಯು ಗಂಭೀರವಾಗಿತ್ತು. 

ಆದ್ದರಿಂದ ಪೋಷಕರು ಶಿಶುವನ್ನು ಸರ್ಜಿ ಆಸ್ಪತ್ರೆಗೆ ಕರೆ ತಂದಿದ್ದಾರೆ. ತಕ್ಷಣ ತಪಾಸಣೆ ನಡೆಸಿದ ತಜ್ಞ ವೈದ್ಯರು ತೀವ್ರ ನಿಗಾಘಟಕದಲ್ಲಿರಿಸಿ, ಗಂಟಲಲ್ಲಿ ಸಿಕ್ಕಿಕೊಂಡಿದ್ದ 11.3 ಸೆಂ.ಮೀ. ಉದ್ದದ ಮೀನನ್ನು ಹೊರತೆಗೆದು ಶಿಶುವಿನ ಜೀವವನ್ನು ಉಳಿಸಿದ್ದಾರೆ. ಈ 11ತಿಂಗಳ ಹಸುಗೂಸಿಗೆ ಮಕ್ಕಳ ತಜ್ಞ ವೈದ್ಯ ಡಾ.ಪ್ರದೀಪ್‌ ಚಿಕಿತ್ಸೆ ನೀಡಿದ್ದರು.

Ads on article

Advertise in articles 1

advertising articles 2

Advertise under the article