-->
1000938341
ರಾಮ ದೇವರ ಪ್ರಾಣಪ್ರತಿಷ್ಠೆಯ ದಿನ ಜನಿಸಿದ ಮಗುವಿಗೆ ರಾಮ್ ರಹೀಂ ಹೆಸರಿಟ್ಟ ಮುಸ್ಲಿಂ ಕುಟುಂಬ

ರಾಮ ದೇವರ ಪ್ರಾಣಪ್ರತಿಷ್ಠೆಯ ದಿನ ಜನಿಸಿದ ಮಗುವಿಗೆ ರಾಮ್ ರಹೀಂ ಹೆಸರಿಟ್ಟ ಮುಸ್ಲಿಂ ಕುಟುಂಬ



ಫಿರೋಜಾಬಾದ್ :  ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ  ನಡೆದ ಶುಭದಿನದಂದು ಜನಿಸಿದ ಗಂಡು ಮಗುವಿಗೆ ಫಿರೋಜಾಬಾದ್‌ದ ಮುಸ್ಲಿಂ ಕುಟುಂಬವೊಂದು 'ರಾಮ್​ ರಹೀಂ'​ ಎಂದು ಹೆಸರಿಡುವ ಮೂಲಕ ಭಾವೈಕ್ಯತೆಯ ಸಂದೇಶ ಸಾರಿದೆ.


ಫಿರೋಜಾಬಾದ್‌ನ ಜಿಲ್ಲಾಸ್ಪತ್ರೆಯಲ್ಲಿ ಫರ್ಜಾನ್ ಎಂಬ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದರು. ಇದೀಗ ಮಗು ಮತ್ತು ತಾಯಿ ಇಬ್ಬರೂ ಆರೋಗ್ಯವಾಗಿದ್ದಾರೆ. ನಿನ್ನೆ ಇದೇ ಆಸ್ಪತ್ರೆಯಲ್ಲಿ 12 ಮಕ್ಕಳು ಜನಿಸಿದ್ದಾರೆ. ರಾಮ ದೇವರ ಪ್ರಾಣ ಪ್ರತಿಷ್ಠಾಪನೆಯಂದು ಮಕ್ಕಳು ಹುಟ್ಟಿರುವುದರಿಂದ ಎಲ್ಲ ಕುಟುಂಬಸ್ಥರು ಸಂತಸಗೊಂಡಿದ್ದಾರೆ ಎಂದು ಡಾ.ನವೀನ್ ಜೈನ್ ಮಾಹಿತಿ ನೀಡಿದರು.

ಮಗುವಿನ ಅಜ್ಜಿ ಹುಸ್ನಾ ಬಾನೊ ಎಂಬವರು ಮಾತನಾಡಿ, "ರಾಮ ಮಂದಿರ ಉದ್ಘಾಟನೆಯಾಗುತ್ತಿರುವ ಪವಿತ್ರ ದಿನ ನಮ್ಮ ಮನೆಗೆ ಪುಟ್ಟ ಅತಿಥಿ ಬಂದಿದ್ದಾನೆ. ಈ ದಿನವನ್ನು ಸ್ಮರಣೀಯವಾಗಿಸಲು ನಾವು ಮಗುವಿಗೆ ರಾಮ್ ರಹೀಮ್ ಎಂದು ಹೆಸರಿಸಲು ನಿರ್ಧರಿಸಿದ್ದೇವೆ" ಎಂದು ತಿಳಿಸಿದ್ದಾರೆ

Ads on article

Advertise in articles 1

advertising articles 2

Advertise under the article