-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಬಿಲ್ ಕ್ಲಿಂಟನ್ ಗೆ ಹದಿ ಹರೆಯದ ಯುವತಿಯರೆ ಬೇಕಿತ್ತಂತೆ!

ಬಿಲ್ ಕ್ಲಿಂಟನ್ ಗೆ ಹದಿ ಹರೆಯದ ಯುವತಿಯರೆ ಬೇಕಿತ್ತಂತೆ!




ನ್ಯೂಯಾರ್ಕ್: ಅಮೆರಿಕ ಮಾಜಿ ಅಧ್ಯಕ್ಷ ಡೆಮಾಕ್ರಾಟ್ ಪಕ್ಷದ ಮಾಜಿ ನಾಯಕ ಬಿಲ್ ಕ್ಲಿಂಟನ್(bill clinton) ಇಳಿ ವಯಸ್ಸಿನಲ್ಲಿ ಆರೋಪವೊಂದಕ್ಕೆ ತುತ್ತಾಗಿದ್ದಾರೆ. 


ಕುಖ್ಯಾತ ಜೆಫ್ರಿ ಎಪ್‌ಸ್ಟೀನ್-ಘಿಸ್‌ನ್ ಮ್ಯಾಕ್ಸ್‌ವೆಲ್ ವೇಶ್ಯಾವಾಟಿಕೆ ಪ್ರಕರಣದಲ್ಲಿ ಕ್ಲಿಂಟನ್ ಹೆಸರೂ ನಮೂ ದಾಗಿದೆ. ಕ್ಲಿಂಟನ್ ಹದಿಹರೆಯದ 'ಹೆಣ್ಣು ಮಕ್ಕಳನ್ನು ಇಷ್ಟಪಡುತ್ತಿದ್ದರು' ಎಂಬ ಎಪ್ ಸ್ಟೀನ್ ಹೇಳಿಕೆ ಈಗ  ಸದ್ದು ಮಾಡಿದೆ.


ನ್ಯೂಯಾರ್ಕ್‌ನ ದಕ್ಷಿಣ ಜಿಲ್ಲಾ ನ್ಯಾಯಾ ಲಯವೊಂದರ ಬಳಿ ಮುಚ್ಚಿದ ಲಕೋಟೆಯ ಲ್ಲಿದ್ದ 1000 ಪುಟಗಳ ದಾಖಲೆಗಳು ಈಗ ಬಹಿರಂಗಗೊಂಡಿದೆ. ಅದರಲ್ಲಿ ಮೇಲಿನ ಆರೋಪವಿದೆ. ಹಗರಣದಲ್ಲಿ ಶಿಕ್ಷೆಗೊಳಗಾಗಿದ್ದ ಎಪ್‌ಸ್ಟೀನ್ 2019ರಲ್ಲೇ ಆತ್ಮಹತ್ಯೆ ಮಾಡಿ ಕೊಂಡಿರುವುದರಿಂದ, 76 ವರ್ಷದ ಕ್ಲಿಂಟನ್ ಇದರಿಂದ ಸಮಸ್ಯೆಯಾಗುವ ಸಾಧ್ಯತೆಯೇನಿಲ್ಲ.


ಯಾರಾರ ಬಗ್ಗೆ ಉಲ್ಲೇಖ?:


ರಿಪಬ್ಲಿಕನ್ ನಾಯಕ, ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ವಿಶ್ವ ವಿಖ್ಯಾತ ವಿಜ್ಞಾನಿ ಸ್ಟೀಫನ್ ಹಾಕಿಂ ಗ್ ಹೆಸರೂ ತೆರೆಯಲ್ಪಟ್ಟಿರುವ ದಾಖಲೆಗಳಲ್ಲಿದೆ. ಲೈಂಗಿಕ ದಂಧೆ ನಡೆಸಲು ಅಕ್ರಮವಾಗಿ ಹೆಣ್ಣುಮಕ್ಕಳ ಸಾಗಣೆ ಮಾಡುತ್ತಿದ್ದ ಪ್ರಕರಣದಲ್ಲಿ ಜೆಫ್ರಿ ಎಪ್‌ಸ್ಟೀನ್ ಪಾಲ್ಗೊಂಡಿದ್ದ. ಈತನ ವಿಮಾನದಲ್ಲಿ ಕ್ಲಿಂಟನ್ ಪದೇ ಪದೆ ಪ್ರಯಾಣಿಸುತ್ತಿದ್ದರು, ಅವನೊಂದಿ ಗೆ ಊಟ ಮಾಡಿದ್ದರೆಂಬ ಉಲ್ಲೇಖ ಇವೆ.


ಎಪ್‌ಸ್ಟೀನ್ ಅಮೆ ರಿಕ, ವಿದೇಶಗಳಲ್ಲಿ ಹಣಕಾಸು ಸೇವೆ ಒದಗಿ ಸುತ್ತಿದ್ದ ಖ್ಯಾತನಾಮ ವ್ಯಕ್ತಿ. ಆತ ಘಿಸ್‌ಲೇನ್ ಮ್ಯಾಕ್ಸ್‌ವೆಲ್ ಜತೆ ಪ್ರಣಯ ಸಂಬಂಧ ಹೊಂದಿದ್ದ, ಅದು 1990ರ ಹೊತ್ತಿಗೆ ಲೈಂಗಿಕ ದಂಧೆಯಾಗಿತ್ತು.ವೇಶ್ಯಾವಾಟಿಕೆ, ಹೆಣ್ಣು ಮಕ್ಕ ಳ ಸಾಗಣೆಯಿಂದ ಆತನಿಗೆ ಶಿಕ್ಷೆಯಾಗಿತ್ತು.

Ads on article

Advertise in articles 1

advertising articles 2

Advertise under the article

ಸುರ