-->
1000938341
ಮೈಸೂರಿನಲ್ಲಿ ಪುತ್ರನ ಆಟವನ್ನು ವೀಕ್ಷಿಸಿದ ರಾಹುಲ್ ದ್ರಾವಿಡ್: ಸರಳತೆಗೆ ಭರಪೂರ ಮೆಚ್ಚುಗೆ

ಮೈಸೂರಿನಲ್ಲಿ ಪುತ್ರನ ಆಟವನ್ನು ವೀಕ್ಷಿಸಿದ ರಾಹುಲ್ ದ್ರಾವಿಡ್: ಸರಳತೆಗೆ ಭರಪೂರ ಮೆಚ್ಚುಗೆ

ಬೆಂಗಳೂರು: ಭಾರತ ಕ್ರಿಕೆಟ್ ನ ಮಾಜಿ ಆಟಗಾರ, ಸದ್ಯ ಟೀಂ ಇಂಡಿಯಾದ ಮುಖ್ಯ ಕೋಚ್​ ರಾಹುಲ್​ ದ್ರಾವಿಡ್​ ಹಾಗೂ ಡಾ.ವಿಜೇತಾ ದಂಪತಿ ಶುಕ್ರವಾರ ಮೈಸೂರಿನಲ್ಲಿ ಪುತ್ರ ಸಮಿತ್​ ದ್ರಾವಿಡ್​ ಆಟಕ್ಕೆ ಸಾಕ್ಷಿಯಾದರು.

ಮೈಸೂರಿನ ಮಾನಸಗಂಗೋತ್ರಿಯ ಒಡೆಯರ್​ ಮೈದಾನದಲ್ಲಿ ನಡೆಯುತ್ತಿರುವ 19ರ ವಯೋಮಿತಿಯ ಕೂಚ್​ ಬಿಹಾರ್​ ಟ್ರೋಫಿ ಚತುರ್ದಿನ ಕ್ರಿಕೆಟ್​ ಟೂರ್ನಿಯ ಪಂದ್ಯ ನಡೆಯಿತು. ಉತ್ತರಾಖಂಡದ ಎದುರು ಸಮಿತ್​ ಆತಿಥೇಯ ಕರ್ನಾಟಕ ತಂಡವನ್ನು ಪ್ರತಿನಿಧಿಸುತ್ತಿದ್ದು, ಮೊದಲ ದಿನದಾಟದಲ್ಲಿ 5 ಓವರ್​ ಬೌಲಿಂಗ್​ ಮಾಡಿ 11 ರನ್​ ಬಿಟ್ಟುಕೊಟ್ಟರು.

ರಾಷ್ಟ್ರೀಯ ತಂಡದ ಕೋಚ್​ ಎಂಬ ಅಹಂ ಇಲ್ಲದೆ ಓರ್ವ ಸಾಮಾನ್ಯ ಅಪ್ಪನಾಗಿ ದ್ರಾವಿಡ್​ ತಮ್ಮ ಪುತ್ರನ ಆಟವನ್ನು ವೀಕ್ಷಿಸಿ ಆನಂದಿಸಿದರು. ಸರಳವಾಗಿ ಮೈದಾನದ ಮೆಟ್ಟಿಲ ಮೇಲೆ ಕುಳಿತು ಪಂದ್ಯ ವೀಕ್ಷಿಸುತ್ತಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಅವರ ಸರಳತೆಗೆ ಭಾರಿ ಮೆಚ್ಚುಗೆಯೂ ವ್ಯಕ್ತವಾಗಿದೆ.

Ads on article

Advertise in articles 1

advertising articles 2

Advertise under the article