Mangalore- ಸೈನಿಕನೆಂದು ಹೇಳಿ ಹಿರಿಯ ನಾಗರಿಕರಿಗೆ ರೂ 2.41 ಲಕ್ಷ ರೂ ವಂಚನೆ
Tuesday, December 19, 2023
ಮಂಗಳೂರು: ಸೈನಿಕನೆಂದು ಹೇಳಿ ಹಿರಿಯ ನಾಗರಿಕರೊಬ್ಬರಿಗೆ ರೂ 2.41 ಲಕ್ಷ ರೂ ವಂಚಿಸಿದ ಘಟನೆ ನಗರದಲ್ಲಿ ನಡೆದಿದೆ.
ಹಿರಿಯ ನಾಗರೀಕರಾಗಿದ್ದು ಮನೆಯಲ್ಲಿಯೇ ಇದ್ದು, ತಮ್ಮ ಅಪಾರ್ಟ್ ಮೆಂಟ್ ಒಂದು ಖಾಲಿ ಇದ್ದು ಅಪಾರ್ಟ್ ಮೆಂಟ್ ನ ಬಗ್ಗೆ MAGIC BRICK ನಲ್ಲಿ ಜಾಹೀರಾತು ನೀಡಿದ್ದರು. ಡಿಸೆಂಬರ್ 8 ರಂದು ಯಾರೋ ಅಪರಿಚಿತ ವ್ಯಕ್ತಿ ತನ್ನ ದೂರವಾಣಿ ಸಂಖ್ಯೆ-9256568140 ಮತ್ತು 7077619515 ನೇದರಿಂದ ಕರೆ ಮಾಡಿ ತಾನು ಆಶೀಶ್ ಕುಮಾರ್ ಹಾಗೂ ತಾನು ಭಾರತೀಯ ಸೇನೆಯಲ್ಲಿ ನೌಕರನಾಗಿರುವುದಾಗಿ ಪಿರ್ಯಾದುದಾರರಿಗೆ ತಿಳಿಸಿ MAGIC BRICK ನಲ್ಲಿ ಅಪಾರ್ಟ್ ಮೆಂಟ್ ಖಾಲಿ ಇರುವ ಬಗ್ಗೆ ಮಾತನಾಡಿದ್ದಾನೆ. ನಂತರ ಬಾಡಿಗೆ ವಿಷಯವಾಗಿ ವಿಚಾರಿಸಿಕೊಂಡು ನಂತರ ಮುಂಗಡ ಹಣ ಪಾವತಿಸುವುದಾಗಿಯೂ ಹಾಗೂ ಆರ್ಮಿ ಇಲಾಖೆಯಿಂದ ಕಮಾಂಡಿಂಗ್ ಪೇಮೆಂಟ್ ನಿಂದ ಹಣ ಸಂದಾಯವಾಗುವುದಾಗಿ ತಿಳಿಸಿದ್ದಾನೆ. ಮೊದಲಿಗೆ 1/-ರೂ,5/-ರೂ ,49,999/-ರೂ ಮತ್ತು 49994/-ರೂಗಳ UPI CODE ಗಳನ್ನು ಅವರಿಗೆ ವಾಟ್ಸ ಆಪ್ ಮುಖಾಂತರ ಕಳುಹಿಸಿದ್ದಾನೆ. ನಂತರ ಈ ಸಂಗತಿಯನ್ನು ಸತ್ಯವೆಂದು ಭಾವಿಸಿ ತಮ್ಮ ಹೆಚ್ ಡಿ ಎಫ್ ಸಿ ಬ್ಯಾಂಕ್, ಮಲ್ಲೇಶ್ವರಂ ಶಾಖೆ ಖಾತೆ ನಂಬ್ರ ನೇದರಿಂದ ಗೂಗಲ್ ಪೇ ಮುಖಾಂತರ ದಿನಾಂಕ ಡಿಸೆಂಬರ್ 8 ರಂದು 1,41,999/-ರೂಪಾವತಿಸಿರುತ್ತಾರೆ ನಂತರ ದಿನಾಂಕ ಡಿ.9 ರಂದು ಈ ಅಪರಿಚಿತ ವ್ಯಕ್ತಿ ಮತ್ತೊಮ್ಮೆ ಕರೆ ಮಾಡಿ ಅದೇ ರೀತಿ ಮತ್ತೊಮ್ಮೆ ಪಾವತಿ ಮಾಡಬೇಕೆಂದು ಹಾಗೂ ಈ ಹಣ ಆರ್ಮಿ ಇಲಾಖೆಯಿಂದ ಕಮಾಂಡಿಂಗ್ ಪೇಮೆಂಟ್ ನಿಂದ ದೊರೆಯುವುದಾಗಿ ನಂಬಿಸಿದಂತೆ ಅದೇ ರೀತಿ ಐ ಎಂ ಪಿ ಎಸ್ ಮುಖಾಂತರ 1,00,000/-ರೂ ಹಣ ಪಾವತಿಸಿರುತ್ತಾರೆ.ಈ ರೀತಿಯಾಗಿ ಯಾರೋ ಅಪರಿಚಿತ ವ್ಯಕ್ತಿ ಆನ್ ಲೈನ್ ಮುಖಾಂತರ ಆಶೀಶ್ ಕುಮಾರ್ ಎಂದು ಪರಿಚಯಿಸಿಕೊಂಡು ತಾನು ಆರ್ಮಿ ಯಲ್ಲಿ ನೌಕರನೆಂದು ನಂಬಿಸಿ ಆನ್ ಲೈನ್ ಮುಖಾಂತರ ಒಟ್ಟು 2,41,999/- ರೂಗಳನ್ನು ಆನ್ ಲೈನ್ ಮುಖಾಂತರ ಮೋಸದಿಂದ ವರ್ಗಾಯಿಸಿಕೊಂಡು ಆನ್ ಲೈನ್ ವಂಚನೆ ಮಾಡಿರುತ್ತಾರೆ ಎಂದು ಸೆನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.