-->
1000938341
ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ಪತ್ನಿ ಗೌರಿ ಖಾನ್‌ಗೆ ಇಡಿ ನೋಟಿಸ್‌

ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ಪತ್ನಿ ಗೌರಿ ಖಾನ್‌ಗೆ ಇಡಿ ನೋಟಿಸ್‌


ಮುಂಬೈ: ಬಾಲಿವುಡ್ ಸ್ಟಾರ್ ನಟ ಶಾರುಖ್ ಖಾನ್ ಪತ್ನಿ ಗೌರಿ ಖಾನ್ ಅವರಿಗೆ ಇಡಿ ಮಂಗಳವಾರ ನೋಟಿಸ್ ಜಾರಿಗೊಳಿಸಿದೆ.

ಗೌರಿ ಖಾನ್ ಅವರು ರಿಯಲ್ ಎಸ್ಟೇಟ್ ಕಂಪೆನಿ ತುಲ್ಸಿಯಾನಿ ಗ್ರೂಪ್‌ನ ಬ್ರ್ಯಾಂಡ್‌ ಅಂಬಾಸಿಡ‌ರ್ ಆಗಿದ್ದಾರೆ. ಈ ಸಂಸ್ಥೆಯು ಇದೀಗ ಹೂಡಿಕೆದಾರರು ಹಾಗೂ ಬ್ಯಾಂಕ್‌ಗಳಿಗೆ ಸುಮಾರು 30 ಕೋಟಿ ರೂ. ವಂಚನೆ ಮಾಡಿದೆ ಎಂದು ಆರೋಪಿಸಲಾಗಿದೆ. ಆದ್ದರಿಂದ ಕಂಪನಿ ವಿರುದ್ಧ ಇದೀಗ ವಂಚನೆ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿವೆ.

ಈ 30 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಗೌರಿ ಖಾನ್ ಕೂಡ ತನಿಖೆಗೆ ಒಳಗಾಗಲಿದ್ದಾರೆ. ಈ ಬಗ್ಗೆ ಸದ್ಯಕ್ಕೆ ಗೌರಿ ಖಾನ್‌ರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆದರೆ ಆಕೆಯನ್ನು ಇಡಿ ವಿಚಾರಣೆಗೊಳಪಡಿಸುವ ನಿರೀಕ್ಷೆಯಿದೆ. ಪ್ರಕರಣದ ಹೆಚ್ಚಿನ ವಿವರಗಳನ್ನು ಇನ್ನೂ ನಿರೀಕ್ಷಿಸಲಾಗುತ್ತಿದೆ.

Ads on article

Advertise in articles 1

advertising articles 2

Advertise under the article