ಮಂಗಳೂರು: ಗಂಟೆಗಳ ಕಾಲ ಕಾದು ಕುಳಿತು ಔಷಧಿ ಸಿಗದೆ ಬೇಸತ್ತ ರೋಗಿಯ ಸಂಬಂಧಿಯಿಂದ ಆಸ್ಪತ್ರೆಯ ಮೆಡಿಕಲ್ ಸಿಬ್ಬಂದಿ ವಿರುದ್ಧ ವೀಡಿಯೋ ಮಾಡಿ ತರಾಟೆಗೆ



ಮಂಗಳೂರು: ಗಂಟೆಗಳ ಕಾಲ ಕಾದು ಕುಳಿತರೂ ಔಷಧಿ ದೊರೆತಿಲ್ಲವೆಂದು ಆಕ್ರೋಶಗೊಂಡ ರೋಗಿಯೊಬ್ಬರ ಸಂಬಂಧಿ ವೀಡಿಯೋ ಮಾಡಿ ಆಸ್ಪತ್ರೆಯ ಮೆಡಿಕಲ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಘಟನೆ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ನಡೆದಿದೆ.

ಆಸ್ಪತ್ರೆಯ ಮೆಡಿಕಲ್‌ ಸಿಬ್ಬಂದಿ ಬೇಜವಾಬ್ದಾರಿಯಿಂದ ಬೇಸತ್ತು ರೋಗಿಯ ಸಂಬಂಧಿಯೊಬ್ಬರು ವೀಡಿಯೋ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ. ರೋಗಿಗೆ ಅವಶ್ಯಕತೆ ಇರುವ ಔಷಧಿಗಾಗಿ ಸಂಬಂಧಿಕರು ಆಸ್ಪತ್ರೆಯ ಮೆಡಿಕಲ್ ಗಂಟೆಗಳ ಕಾಲ ಕುಳಿತರೂ ಅವರಿಗೆ ದೊರಕಬೇಕಾದ ಔಷಧಿ ಸಿಬ್ಬಂದಿ ನೀಡಿರಲಿಲ್ಲ. ಆದ್ದರಿಂದ ರೋಗಿಯ ಸಂಬಂಧಿ ವಿಡಿಯೋ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.




ವೀಡಿಯೋ ಮಾಡಿ ರೋಗಿಗೆ ಹೆಚ್ಚು ಕಮ್ಮಿ ಆದಲ್ಲಿ ನೀನೆ ಹೊಣೆ ಎಂದು ಮೆಡಿಕಲ್ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೀಡಿಯೋವನ್ನು ರೋಗಿಯ ಸಂಬಂಧಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ ಈ ವೀಡಿಯೋ ಎಲ್ಲಡೆ ವೈರಲ್ ಆಗುತ್ತಿದೆ.
BREAKING NEWS
Loading latest news...
Join our WhatsApp Channel Powered By : Online Pudu