ಮಂಗಳೂರು: ನೇತ್ರಾವತಿ ಸೇತುವೆಯಿಂದ ಹಾರಿ ವ್ಯಕ್ತಿ ಆತ್ಮಹತ್ಯೆ

ಮಂಗಳೂರು: ನಗರದ ಉಳ್ಳಾಲ ನೇತ್ರಾವತಿ ಸೇತುವೆಯಿಂದ ನದಿಗೆ ಹಾರಿ ವ್ಯಕ್ತಿಯೋರ್ವರು ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಚಿಕ್ಕಮಗಳೂರು ಜಿಲ್ಲೆಯ ಮುಗುಳಬಳ್ಳಿ ನಿವಾಸಿ ಪ್ರಸನ್ನ(36) ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. 

ಮಧ್ಯಾಹ್ನ ವೇಳೆಗೆ ತೊಕ್ಕೊಟ್ಟು ಕಡೆಯಿಂದ ಎನ್ಎಚ್ - 66 ಕಡೆಯಿಂದ ಕಾರಿನಲ್ಲಿ ಬಂದ ಇವರು ಉಳ್ಳಾಲದ ನೇತ್ರಾವತಿ ಸೇತುವೆಯಲ್ಲಿ ಕಾರು ನಿಲ್ಲಿಸಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಯನ್ನು ಪ್ರತ್ಯಕ್ಷ ಕಂಡ ಪ್ರತ್ಯಕ್ಷದರ್ಶಿಗಳು ತಕ್ಷಣ ನದಿಗೆ ಹಾರಿ ಅವರನ್ನು ಉಳಿಸಲೆತ್ನಿಸಿದರೂ, ಅವರು ನೀರು ಪಾಲಾಗಿದ್ದಾರೆ. ಸದ್ಯ ನದಿಯಲ್ಲಿ ಅಗ್ನಿಶಾಮಕ ದಳ, ಪೊಲೀಸರು, ಸ್ಥಳೀಯರಿಂದ ಹುಡುಕಾಟ ಮುಂದುವರಿದಿದೆ.

ಈ ವೇಳೆ ಸ್ಥಳದಲ್ಲಿ ಭಾರೀ ಜನ ಜಮಾವಣೆಗೊಂಡಿದ್ದು, ಹೆದ್ದಾರಿಯಲ್ಲಿ ಕೆಲಕಾಲ ಸಂಚಾರಕ್ಕೆ ಅಡಚಣೆಯುಂಟಾಗಿತ್ತು. ಏಳು ವರ್ಷಗಳ ಹಿಂದೆ ಇದೇ ನೇತ್ರಾವತಿ ಸೇತುವೆಯಲ್ಲಿ ಕೆಫೆ ಕಾಫಿ ಡೇ ಸಿದ್ದಾರ್ಥ್ ಆತ್ಮಹತ್ಯೆ ನಡೆದಿತ್ತು. ಇಂದು ಆತ್ಮಹತ್ಯೆ ಮಾಡಿಕೊಂಡಿರುವ ಯುವಕನೂ ಕೆಫೆ ಕಾಫಿ ಡೇ ಸಿದ್ದಾರ್ಥ್ ಅವರ ಜಿಲ್ಲೆಯವರೇ ಆಗಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu