ಪಾಕಿಸ್ತಾನ ಜಿಂದಾಬಾದ್ ಕೂಗದೆ ಮತ್ತೇನು ಹೇಳಲಿ..?: ಬೆಂಗಳೂರು ಪೊಲೀಸರೊಂದಿಗೆ ಪಾಕ್ ಯುವಕನ ಪ್ರಶ್ನೆ


ಬೆಂಗಳೂರು: 'ಪಾಕಿಸ್ತಾನ್ ಜಿಂದಾಬಾದ್' ಎಂದು ತಾನು ಘೋಷಣೆ ಕೂಗಲೇಬೇಕು ಎಂದು ಪಾಕಿಸ್ತಾನಿ ಯುವಕನೊಬ್ಬ ಬೆಂಗಳೂರು ಪೊಲೀಸರೊಂದಿಗೆ ವಾಗ್ವಾದ ನಡೆಸಿದ ಪ್ರಕರಣವೊಂದು ವಿಶ್ವಕಪ್ ಏಕದಿನ ಕ್ರಿಕೆಟ್ ಪಂದ್ಯ ನಡೆಯುತ್ತಿರುವ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದೆ.

ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನಿ ತಂಡಗಳ ಮಧ್ಯೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ  ವಿಶ್ವಕಪ್ ಕ್ರಿಕೆಟ್ ಪಂದ್ಯ ನಡೆಯುತ್ತಿತ್ತು. ಈ ವೇಳೆ ಕ್ರಿಕೆಟ್ ವೀಕ್ಷಣೆಗೆಂದು ಬಂದಿದ್ದ ಪಾಕಿಸ್ತಾನಿ ಯುವಕನೊಬ್ಬ ಪಾಕಿಸ್ತಾನ್ ಜಿಂದಾಬಾದ್ ಎಂದಿದ್ದಾನೆ. ಆಗ ಅಲ್ಲಿದ್ದ ಪಾಕಿಸ್ತಾನ್ ಜಿಂದಾಬಾದ್ ಕೂಗಿದ್ದಕ್ಕೆ ಪೊಲೀಸರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.



ಇದಕ್ಕೆ ಆ ಯುವಕ ಕೂಡ ಆಕ್ಷೇಪ ವ್ಯಕ್ತಪಡಿಸಿದ್ದು, ಪಾಕಿಸ್ತಾನಕ್ಕೆ ಜಿಂದಾಬಾದ್ ಹೇಳಲೇಬೇಕು ಎಂದು ವಾಗ್ವಾದ ನಡೆಸಿದ್ದಾನೆ. ಅಲ್ಲದೆ ನಾನು ಪಾಕಿಸ್ತಾನದಿಂದ ಬಂದಿದ್ದು, ಪಾಕಿಸ್ತಾನಕ್ಕೆ ಜಿಂದಾಬಾದ್ ಹೇಳದೆ ಇನ್ನೇನು ಹೇಳಲಿ? ಎಂದೂ ಆತ ಪ್ರಶ್ನೆ ಮಾಡಿದ್ದಾನೆ. ಇದು ಸಾರ್ವಜನಿಕರೊಬ್ಬರ ಮಾಡಿರುವ ವಿಡಿಯೋದಲ್ಲಿ ಸೆರೆಯಾಗಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.