ವಂದೇಭಾರತ್ ರೈಲಿನಡಿಗೆ ಬಿದ್ದು ತಾಯಿ - ಮಕ್ಕಳು ದಾರುಣ ಸಾವು

ನೋಯ್ಡಾ: ವಂದೇಭಾರತ್ ರೈಲಿನಡಿಗೆ ಬಿದ್ದ ಮಹಿಳೆ ಹಾಗೂ ಆಕೆಯ ಇಬ್ಬರು ಪುತ್ರಿಯರು ದಾರುಣವಾಗಿ ಮೃತಪಟ್ಟ ಘಟನೆ ನೋಯ್ಡಾದಲ್ಲಿ ಭಾನುವಾರ ಸಂಜೆ ಸಂಭವಿಸಿದೆ. ಕಾವಲು ಸಹಿತ ರೈಲ್ವೆ ಕ್ರಾಸಿಂಗ್ ನಲ್ಲಿ ರೈಲು ಹಳಿ ದಾಟುವ ವೇಳೆ ಈ ದುರಂತ ನಡೆದಿದೆ.

ಕಸಂಪುರ ಕಾವಲು ಸಹಿತ ಲೆವೆಲ್ ಕ್ರಾಸಿಂಗ್ ನ ಗೇಟುಗಳು ಮುಚ್ಚಿತ್ತು. ಈ ವೇಳೆ ಅವಘಡ ಸಂಭವಿಸಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ನಗರ ಎಸ್ಪಿ ಪಿಯೂಷ್ ಕುಮಾರ್ ಸಿಂಗ್ ಹೇಳಿದ್ದಾರೆ.

ಕಂಕ್ರಖೇರಾ ನಿವಾಸಿ ನರೇಶ್ ಎಂಬವರು ಕೈಗಾಡಿಯ ಹಿಂಬದಿಯಲ್ಲಿ ಪತ್ನಿ ಮೋನಾ (40) ಮತ್ತು ಮಕ್ಕಳಾದ ಮನೀಷಾ (14) ಹಾಗೂ ಚಾರು (7) ಎಂಬವರನ್ನು ಕೂರಿಸಿಕೊಂಡು ಹೋಗುತ್ತಿದ್ದರು. ಕಸಂಪುರ ರೈಲ್ವೆ ಕ್ರಾಸಿಂಗ್ ನಲ್ಲಿ ನರೇಶ್ ರೈಲ್ವೆಗೇಟಿನ ಕೆಳಗೆ ಗಾಡಿಯನ್ನು ಎಳೆದುಕೊಂಡು ಹಳಿ ದಾಟುತ್ತಿದ್ದ. ಆಗ ಸೆಮಿ ಹೈಸ್ಪೀಡ್ ರೈಲು, ತಳ್ಳುಗಾಡಿಯ ಹಿಂಭಾಗಕ್ಕೆ ಡಿಕ್ಕಿ ಹೊಡೆದು ಹಳಿಗೆ ಬಿದ್ದ ಮೂವರ ಮೇಲೆ ಹರಿದು ಹೋಗಿದೆ. ಅದರ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟರು ಎಂದು ಪೊಲೀಸರು ವಿವರಿಸಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu