-->
ಆಳ್ವಾಸ್‌ನಲ್ಲಿ ಇಂದು ಸೈಬರ್ 'ಹಾಸ್ಯ ಸಂಜೆ'

ಆಳ್ವಾಸ್‌ನಲ್ಲಿ ಇಂದು ಸೈಬರ್ 'ಹಾಸ್ಯ ಸಂಜೆ'

ಆಳ್ವಾಸ್‌ನಲ್ಲಿ ಇಂದು ಸೈಬರ್ 'ಹಾಸ್ಯ ಸಂಜೆ'

ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಆಳ್ವಾಸ್‌ನ ಕಾಲೇಜು ಆಡಿಟೋರಿಯಂ ನಲ್ಲಿ ಭಾನುವಾರ ಸಂಜೆ ಸೈಬರ್ 'ಹಾಸ್ಯ ಸಂಜೆ' ಕಾರ್ಯಕ್ರಮ ನಡೆಯಲಿದೆ.ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜು, ಆಳ್ವಾಸ್ ಪದವಿ ಕಾಲೇಜು, ಆಳ್ವಾಸ್ ಹೋಮಿಯೋಪತಿ ಕಾಲೇಜುಗಳ ಕನ್ನಡ ಸಂಘ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ (ಕೆಎಸ್‍ಸಿಇಸ್‍ಟಿ) ಹಾಗೂ ಸೈಸೆಕ್ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.ಸೈಬರ್ ಹಾಸ್ಯ ಸಂಜೆ ಸಂಜೆ 5 ಗಂಟೆಗೆ ಕಾಲೇಜು ಆಡಿಟೋರಿಯಂ ನಲ್ಲಿ ನಡೆಯಲಿದೆ ಎಂದು ಕಾಲೇಜು ಪ್ರಕಟಣೆ ತಿಳಿಸಿದೆ.ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಮೋಹನ ಆಳ್ವ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ಪ್ರಾಂಶುಪಾಲ ಡಾ.ಪೀಟರ್ ಫೆನಾರ್ಂಡಿಸ್, ಕಾರ್ಯಕ್ರಮ ಸಂಯೋಜಕರಾದ ಡಾ ದತ್ತಾತ್ರೇಯ, ಡಾ ಗುರುಶಾಂತ್ ವಗ್ಗರ್ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.ಚುಟುಕು ಕವಿ ಡುಂಡಿರಾಜ್, ಹಾಸ್ಯ ಕಲಾವಿದ ಎಂ.ಎಸ್.ನರಸಿಂಹ ಮೂರ್ತಿ, ವೈ.ವಿ.ಗುಂಡೂರಾವ್, ಗಂಗಾವತಿ ಪ್ರಾಣೇಶ್ ಹಾಗೂ ಬಸವರಾಜ್ ಮಹಾಮನಿ ಕಾರ್ಯಕ್ರಮ ನಡೆಸಿಕೊಡುವರು.


Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article