ಡ್ಯಾನ್ಸ್ ಕ್ಲಾಸ್ ಗೆ ಹೋಗಬೇಡವೆಂದು ಪೋಷಕರು ಗದರಿಸಿದ್ದೇ ತಪ್ಪಾಯ್ತು : ನೇಣಿಗೆ ಶರಣಾದ ಯುವತಿ


ಕೋಲಾರ: ಡಾನ್ಸ್‌ ಕ್ಲಾಸ್‌ಗೆ ಹೋಗಬೇಡವೆಂದು ಪೋಷಕರು ಗದರಿಸಿದ್ದೇ ತಪ್ಪಾಯ್ತು. ಇದರಿಂದ ಮನನೊಂದ ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ.

ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಚಿನ್ನಕೋಟೆ ಗ್ರಾಮದ ಕೀರ್ತನಾ (18) ಆತ್ಮಹತ್ಯೆ ಮಾಡಿಕೊಂಡ ಯುವತಿ.

ಡ್ಯಾನ್ಸ್ ಎಂದರೆ ತುಂಬಾ ಇಷ್ಟಪಡುತ್ತಿದ್ದ ಕೀರ್ತನಾ‌ ಡ್ಯಾನ್ಸ್ ಕ್ಲಾಸ್ ಗೆ ಹೋಗುತ್ತಿದ್ದಳು. ಆದರೆ ಈಕೆಗೆ ಡಾನ್ಸ್‌ ಕ್ಲಾಸ್ ಗೆ ಹೋಗಬೇಡವೆಂದು ಪೋಷಕರು ಗದರಿಸಿದ್ದಾರೆ. ಇದರಿಂದ ಮನನೊಂದ ಕೀರ್ತನಾ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಕುರಿತು ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


BREAKING NEWS
Loading latest news...
Join our WhatsApp Channel Powered By : Online Pudu